ಅಕ್ಕ ಅನ್ನಪೂರ್ಣ ತಾಯಿ ಸೇವೆ ಅವಿಸ್ಮರಣೀಯ

ಬೀದರ್​ನಲ್ಲಿ ಮೇ 23, 24ರಂದು ನಡೆಯಲಿರುವ ಅಕ್ಕ ಅನ್ನಪೂರ್ಣ ತಾಯಿ ದ್ವೀತಿಯ ಸ್ಮರಣೋತ್ಸವದ ಕರಪತ್ರವನ್ನು ಹುಲಸೂರು ತಾಲೂಕಿನ ತೊಗಲೂರದಲ್ಲಿ ಮಂಗಳವಾರ ವಿತರಿಸಲಾಯಿತು. ಶ್ರೀ ಪ್ರಭುಕುಮಾರ ಸ್ವಾಮೀಜಿ, ಗೋದಾವರಿ ತಾಯಿ, ಶಂಭುಲಿಂಗ ಕಾಮಣ್ಣ, ಡಿ.ಸಿ.ಪಾಟೀಲ್​, ವೆಂಕಟೇಶ ರಾಜೋಳೆ, ವಿಜಯಲಕ್ಷಿ$್ಮ ರಾಜೋಳೆ ಇತರರಿದ್ದರು.
ಬೀದರ್​ನಲ್ಲಿ ಮೇ 23, 24ರಂದು ನಡೆಯಲಿರುವ ಅಕ್ಕ ಅನ್ನಪೂರ್ಣ ತಾಯಿ ದ್ವೀತಿಯ ಸ್ಮರಣೋತ್ಸವದ ಕರಪತ್ರವನ್ನು ಹುಲಸೂರು ತಾಲೂಕಿನ ತೊಗಲೂರದಲ್ಲಿ ಮಂಗಳವಾರ ವಿತರಿಸಲಾಯಿತು. ಶ್ರೀ ಪ್ರಭುಕುಮಾರ ಸ್ವಾಮೀಜಿ, ಗೋದಾವರಿ ತಾಯಿ, ಶಂಭುಲಿಂಗ ಕಾಮಣ್ಣ, ಡಿ.ಸಿ.ಪಾಟೀಲ್​, ವೆಂಕಟೇಶ ರಾಜೋಳೆ, ವಿಜಯಲಕ್ಷಿ$್ಮ ರಾಜೋಳೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಪ್ರಭುಕುಮಾರ ಸ್ವಾಮೀಜಿ ನುಡಿ
  • ತೊಗಲೂರದಲ್ಲಿ ಬಸವೋತ್ಸವದ ಕರಪತ್ರ ವಿತರಣೆ
ಹುಲಸೂರು: ಬಸವ ತತ್ವ ಪ್ರಚಾರ, ಪ್ರಸಾರಕರಾಗಿದ್ದ ಅಕ್ಕ ಅನ್ನಪೂರ್ಣ ತಾಯಿ ಸೇವೆ ಅವಿಸ್ಮರಣೀಯವಾಗಿದೆೆ ಎಂದು ಗೋರ್ಟಾ(ಬಿ) ಲಿಂಗಾಯತ ಮಹಾಮಠದ ಪೀಠಾಧಿಪತಿ ಶ್ರೀ ಪ್ರಭುಕುಮಾರ ಸ್ವಾಮೀಜಿ ನುಡಿದರು.
ಬೀದರ್​ನಲ್ಲಿ ಮೇ 23 ಮತ್ತು 24ರಂದು ನಡೆಯಲಿರುವ ಅಕ್ಕ ಅನ್ನಪೂರ್ಣ ತಾಯಿ ದ್ವೀತಿಯ ಸ್ಮರಣೋತ್ಸವದ ಬಸವೋತ್ಸವದ ಕರಪತ್ರವನ್ನು ತೊಗಲೂರ ಗ್ರಾಮದಲ್ಲಿ ಮಂಗಳವಾರ ವಿತರಿಸಿ ಮಾತನಾಡಿದ ಅವರು, ಜನಮನದಲ್ಲಿ ಬಸವತತ್ತ$್ವ ನೆಲೆಗೊಳಿಸಲು ವಾರದ ಅನುಭವ ಮಂಟಪ, ಮಾಸಿಕ ಬಸವಜ್ಯೋತಿ, ಶರಣ ಸಂಗಮದಂತಹ ಮಹತ್ವದ ಕಾರ್ಯಕ್ರಮಗಳನ್ನು ಅಕ್ಕ ಮಾಡುತ್ತಿದ್ದರು ಎಂದು ಸ್ಮರಿಸಿದರು.
ಬಸವಾದಿ ಶರಣರ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಸುವ ಉದ್ದೇಶದಿಂದ ಬಸವ ಸೇವಾ ಪ್ರತಿಷ್ಠಾನ, ಲಿಂಗಾಯತ ಮಹಾಮಠ, ನೀಲಮ್ಮನ ಬಳಗ, ಲಿಂಗಾಯತ ಸೇವಾದಳ ಸಂಸ್ಥೆಗಳನ್ನು ಸ್ಥಾಪಿಸಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ಬಸವ ಧರ್ಮದ ತಾತ್ವಿಕ ಶ್ರದ್ಧಾ ಕೇಂದ್ರವಾಗಿ ಗುರುವಚನ ಪರುಷಕಟ್ಟೆ ಸ್ಥಾಪಿಸಿ ನಿರಂತರ ವಚನ ಪಠಣ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದ್ದರು. ಬೀದರ್​ ಬಸವಗಿರಿಯಲ್ಲಿ 23, 24ರಂದು ನಡೆಯಲಿರುವ ಸಾಮೂಹಿಕ ವಚನ ಪಾರಾಯಣ, ವೇದಿಕೆ ಕಾರ್ಯಕ್ರಮ ಸೇರಿ ವಚನ ವಿಜಯೋತ್ಸವ ಮೆರವಣಿಗೆಯಲ್ಲಿ ತಾವೆಲ್ಲರೂ ಭಾಗವಹಿಸಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಶರಣ ಸಾಹಿತ್ಯ ಪರಿಷತ್​ ಜಿಲ್ಲಾಧ್ಯ ಶಂಭುಲಿಂಗ ಕಾಮಣ್ಣ ಮಾತನಾಡಿ, ಶ್ರೀ ಪ್ರಭುಕುಮಾರ ಸ್ವಾಮೀಜಿ ಅವರು ಅಕ್ಕ ಅನ್ನಪೂರ್ಣತಾಯಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೀಲಮ್ಮನ ಬಳಗದ ಅಧ್ಯೆ ವಿಜಯಲಕ್ಷಿ$್ಮ ರಾಜೋಳೆ, ವೆಂಕಟೇಶ ರಾಜೋಳೆ, ಸಂಗೀತಾ ಕಣಜೆ, ರಂಗಮ್ಮ ಕಾಮಣ್ಣ, ಸರಸ್ವತಿ ಕಾಮಣ್ಣ, ಕರುಣಾದೇವಿ ಕಣಜೆ, ಜಯಶ್ರೀ ಕಾಮಣ್ಣ, ಭಾಗ್ಯವತಿ ಚಿಮ್ಮಾ ಇತರರಿದ್ದರು. ಡಿ.ಸಿ. ಪಾಟೀಲ್​ ಸ್ವಾಗತಿಸಿ ನಿರೂಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net