ದೇವಸ್ಥಾನ ಕುಳಿತು ಎಸ್ಐಆರ್ ಕಾರ್ಯ

ದೇವಸ್ಥಾನದಲ್ಲಿ ಕುಳಿತು ಎಸ್ಐಆರ್ ಕಾರ್ಯ
ದೇವಸ್ಥಾನದಲ್ಲಿ ಕುಳಿತು ಎಸ್ಐಆರ್ ಕಾರ್ಯ
Published on

ಪ್ರಮುಖ ಮುಖ್ಯಾಂಶಗಳು

  • ದೇವಸ್ಥಾನದಲ್ಲಿ ಕುಳಿತು ಎಸ್ಐಆರ್ ಕಾರ್ಯ
  • ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಘಟನೆ
  • ಬಿಎಲ್ಒ ಕಾರ್ಯಕ್ಕೆ ಸಾರ್ವಜನಿಕ ಆಕ್ರೋಶ

ದೇವಸ್ಥಾನದ ಭವನದಲ್ಲಿ ಕುಳಿತು ಎಸ್‌ಐಆರ್ ಕಾರ್ಯ
| ಸಾರ್ವಜನಿಕರ ಆಕ್ರೋಶ | ಬಿಎಲ್ ಒ ಅಧಿಕಾರಿಗಳ ನಡೆಗೆ ಆಕ್ಷೇಪ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:

ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿಡಸೋಸಿ ರಸ್ತೆಯ ಆದರ್ಶ ನಗರದಲ್ಲಿರುವ ದೇವಸ್ಥಾನವೂಂದರ ಭವನದಲ್ಲೇ ಕುಳಿತು
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅರ್ಜಿಗಳನ್ನು ಕೆಲ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ ಒ) ಭರ್ತಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಪ್ರತಿಯೊಬ್ಬ ಮತದಾರರ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ, ಅಗತ್ಯ ನಮೂನೆ ವಿತರಿಸಿ ಪರಿಶೀಲನೆ ನಡೆಸಬೇಕಾಗಿದೆ. ಆದರೆ ಕೆಲವು ಬಿಎಲ್‌ಒಗಳು ಮನೆಗಳಿಗೆ ತೆರಳುವ ಬದಲು ಸಾರ್ವಜನಿಕರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದು ಸಮುದಾಯ ಭವನದಲ್ಲೇ ನಮೂನೆಗಳು ಭರ್ತಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಭಾಕ್ಸ್
ಎಸ್ ಐಆರ್ ಪ್ರಕ್ರಿಯೆಯಲ್ಲಿ ಬಿಎಲ್ ಒಗಳು ಕಡ್ಡಾಯವಾಗಿ ಮನೆ-ಮನೆಗೆ ತೆರಳಿ ನಮೂನೆ ವಿತರಿಸಿ ಮಾಹಿತಿ ಸಂಗ್ರಹಿಸಬೇಕು. ದೇವಸ್ಥಾನ, ಸಮುದಾಯ ಭವನ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ನಮೂನೆ ವಿತರಿಸುವುದು ನಿಯಮಾನುಸಾರವಲ್ಲ. ಸಂಕೇಶ್ವರದಲ್ಲಿ ಈ ರೀತಿಯ ಘಟನೆ ನಡೆದಿರುವ ಕುರಿತು, ಬಿಎಲ್ ಒಗಳನ್ನು ವಿಚಾರಣೆ ನಡೆಸಲಾಯಿತು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ತಿಳಿಸಿದರು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net