ರಾಜ್ಯದಲ್ಲಿ ಎಸ್​ಐಆರ್ ಪ್ರಕ್ರಿಯೆ ಒಂದು ವಾರ ವಿಸ್ತರಣೆ; ಅ.17ವರೆಗೆ ಬಿಎಲ್​ಓ ಮನೆ ಮನೆಗೆ ಭೇಟಿಗೆ ಅವಕಾಶ: ಕರಡು ಪಟ್ಟಿ ಪ್ರಕಟಣೆ ಮುಂದೂಡಿಕೆ | SIR

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಭಾರತೀಯ ಚುನಾವಣೆ ಆಯೋಗ ಮತ್ತೆ ಒಂದು ವಾರ ವಿಸ್ತರಣೆ ಮಾಡಿದ್ದು, ಕರಡು ಮತದಾರರ ಪಟ್ಟಿಯ ಪ್ರಕಟಣೆಯನ್ನೂ ಮುಂದೂಡಿಕೆ ಮಾಡಿದೆ.
ಈ ಕುರಿತು ಶುಕ್ರವಾರ(ಆ. 07) ಹೊಸ ಅಧಿಸೂಚನೆ ಹೊರಡಿಸಿರುವ ಚುನಾವಣೆ ಆಯೋಗ, ಅಗಸ್ಟ್ 17ರವರೆಗೆ ಬಿಎಲ್​ಓಗಳು ಮನೆ-ಮನೆಗೆ ಭೇಟಿ ನೀಡಲು ಅವಕಾಶ ನೀಡಿದೆ. ಮತ್ತು ಕರಡು ಮತದಾರರ ಪಟ್ಟಿಯ ಪ್ರಕಟಣೆಯನ್ನೂ ಮುಂದೂಡಿ ಆದೇಶಿಸಿದೆ.
ಆಯೋಗ ಹೊರಡಿಸಿದ ಅಧಿಸೂಚನೆಯಲ್ಲಿ, ಮತಗಟ್ಟೆಗಳ ತಾರ್ಕಿಕ ಮರುಹೊಂದಾಣಿಕೆ ಆಗಸ್ಟ್‌ 18ರಿಂದ ಆರಂಭವಾಗಲಿದ್ದು, ಕರುಡು ಮತದಾರರ ಪಟ್ಟಿಯನ್ನ ಆಗಸ್ಟ್‌ 24ರಂದು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ.
ಕರುಡು ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಹಾಗೂ ಆಕ್ಷೇಪಣೆಗಳನ್ನ ಸಲ್ಲಿಸಲು ಆಗಸ್ಟ್‌ 24 ರಿಂದ ಸೆಪ್ಟೆಂಬರ್‌ 23ರವರೆಗೆ ಅವಕಾಶ ನೀಡಲಾಗಿದೆ. ಸಲ್ಲಿಕೆಯಾಗುವ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಪ್ರಕ್ರಿಯೆ ಆಗಸ್ಟ್‌ 24ರಿಂದ ಅಕ್ಟೋಬರ್‌ 22ರವರೆಗೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿಯನ್ನ ಅಕ್ಟೋಬರ್‌ 27ರಂದು ಪ್ರಕಟಿಸಲಾಗುತ್ತದೆ ಎಂದು ಹೇಳಿದೆ.
ಇನ್ನೂ ಇಂದು ಹೊಸ ಮತದಾರರ ನೋಂದಣಿಗೆ ಚುನಾವಣೆ ಆಯೋಗ ವಿಶೇಷ ಅಭಿಯಾನ ಘೋಷಣೆ ಮಾಡಿದೆ. 10 ಅಂಶಗಳ ಘೋಷಣೆಯೊಂದಿಗೆ 18 ವರ್ಷ ಮೇಲ್ಪಟ್ಟವರ ಮತದಾರ ಪಟ್ಟಿಯಲ್ಲಿ ನೋಂದಣಿಗೆ ಮುಂದಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net