ಎಸ್​ಐಆರ್​ನಿಂದ ಮತದಾನದ ಹಕ್ಕು ಕಸಿಯುವಹುನ್ನಾರ / DODDABALLAPUR

ದೊಡ್ಡಬಳ್ಳಾಪುರದಲ್ಲಿ ಎದ್ದೇಳು ಕರ್ನಾಟಕ ಸಂಘಟನೆಯಿಂದ ಹಮ್ಮಿಕೊಂಡಿದ್ದ ಕಿರುಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೊ.ಇಕ್ಬಾಲ್​ ಅಹಮದ್​, ಕಾಂಗ್ರೆಸ್​ ಮುಖಂಡ ರಾಜಗೋಪಾಲ್​,  ಹಿರಿಯ ವಕೀಲ ಸಿದ್ದಾರ್ಥ, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ನರೇಶ್​, ನಿವೃತ್ತ ಬಿಇಒ ದೊಡ್ಡರಂಗಪ್ಪ  ಇತರರಿದ್ದರು.
ದೊಡ್ಡಬಳ್ಳಾಪುರದಲ್ಲಿ ಎದ್ದೇಳು ಕರ್ನಾಟಕ ಸಂಘಟನೆಯಿಂದ ಹಮ್ಮಿಕೊಂಡಿದ್ದ ಕಿರುಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೊ.ಇಕ್ಬಾಲ್​ ಅಹಮದ್​, ಕಾಂಗ್ರೆಸ್​ ಮುಖಂಡ ರಾಜಗೋಪಾಲ್​, ಹಿರಿಯ ವಕೀಲ ಸಿದ್ದಾರ್ಥ, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ನರೇಶ್​, ನಿವೃತ್ತ ಬಿಇಒ ದೊಡ್ಡರಂಗಪ್ಪ ಇತರರಿದ್ದರು.
Published on
ದೊಡ್ಡಬಳ್ಳಾಪುರ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಸ್​ಐಆರ್​ ಕಾಯ್ದೆ ಜನತೆಯ ಮತದಾನದ ಹಕ್ಕನ್ನು ಪ್ರಶ್ನೆ ಮಾಡುವಂತಿದ್ದು, ಇದರಿಂದ ನಮ್ಮ ಮತದಾನದ ಹಕ್ಕು ಕಳೆದುಕೊಳ್ಳಲಿದ್ದೇವೆ ಎಂದು ಪ್ರೊ.ಇಕ್ಬಾಲ್​ ಅಹಮದ್​ ಆತಂಕ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಎದ್ದೇಳು ಕರ್ನಾಟಕ ಸಂಘಟನೆಯಿಂದ ಹಮ್ಮಿಕೊಂಡಿದ್ದ ಎಸ್​ಐಆರ್​ ಸಾಧಕ&-ಬಾಧಕಗಳನ್ನು ಪರಿಚಯಿಸುವ ಕಿರುಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಈ ಕಾಯ್ದೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ರೂಪಿಸಿದಂತಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇರುವವರು ಈ ಕಾಯ್ದೆಯನ್ನು ವಿರೋಧಿಸಬೇಕಿದೆ ಎಂದರು.
ಕೆಪಿಸಿಸಿ ಜಿಲ್ಲಾ ವಕ್ತಾರ ಜಿ.ಲಕ್ಷಿ$್ಮಪತಿ ಮಾತನಾಡಿ, ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಬಡವರು, ಅನಕ್ಷರಸ್ಥರನ್ನು ಮತದಾನದಿಂದ ವಂಚಿಸುವ ಹುನ್ನಾರ ನಡೆಯುತ್ತಿದೆ. ಈಗಾಗಲೇ ಕಾಂಗ್ರೆಸ್​ ಇದರ ವಿರುದ್ಧ ಹೋರಾಟ ನಡೆಸುತ್ತಿದೆ ಎಂದರು.
ಕಾಂಗ್ರೆಸ್​ ಮುಖಂಡ ರಾಜಗೋಪಾಲ್​ ಮಾತನಾಡಿ, ಏಪ್ರಿಲ್​ನಿಂದ ಎಸ್​ಐಆರ್​ ಜಾರಿಯಾಗಲಿದೆ ಎನ್ನುತ್ತಿದ್ದಾರೆ. ಆದರೆ, ಈಗಾಗಲೇ ಗ್ರಾಮಗಳಲ್ಲಿ ಮತದಾರರ ಪರಿಷ್ಕರಣೆ ನಡೆಯುತ್ತಿದೆ. ನನ್ನ ಪತ್ನಿ ಎರಡು ಬಾರಿ ಗ್ರಾಪಂ ಅಧ್ಯಕ್ಷರಾಗಿದ್ದಾರೆ. ಈಗ ನಿಮ್ಮ ನಾಗರಿಕತೆ ಸಾಬೀತು ಮಾಡಿ ಎಂದು ನೋಟಿಸ್​ ಜಾರಿ ಮಾಡಿದ್ದಾರೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮುಖಂಡ ಆದರ್ಶ ಸಂಕ್ರಾಂತಿ, ರಾಜು ಅರದೇಶನಹಳ್ಳಿ, ಹೊನ್ನಪ್ಪ ಚಪ್ಪರಕಲ್ಲು, ಮಾಳವ ನಾರಾಯಣ್​, ಗುರುರಾಜಪ್ಪ, ಮಹದೇವ್​, ಕೇಶವ, ಮಂಜುನಾಥ್​, ಯುವ ಕಾಂಗ್ರೆಸ್​ ಮುಖಂಡ ಅಜಯ್​, ಕನ್ನಡ ಪಕ್ಷದ ವೆಂಕಟೇಶ್​, ಮಂಜುನಾಥ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net