ಜೆಡಿಎಸ್​ಗೆ ಬೆಳ್ಳಿ ಹಬ್ಬದ ಸಂಭ್ರಮ Silver Jubilee celebrations for JDS

Silver Jubilee celebrations for JDS
Silver Jubilee celebrations for JDS
Published on
JDS ಎಂ.ಎನ್​.ಕೋಟೆ : ಜೆಡಿಎಸ್​ ಪಕ್ಷ ಸ್ಥಾಪನೆಯಾಗಿ 25 ವರ್ಷ ತುಂಬಿದ ಹಿನ್ನಲೆಯಲ್ಲಿ ಜೆಡಿಎಸ್​ ಕಾರ್ಯಕರ್ತರು ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯ ಶಿವರಾಂಪುರದಲ್ಲಿ ಶನಿವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಇದೇ ವೇಳೆ ಮಾತನಾಡಿದ ಜೆಡಿಎಸ್​ ಮುಖಂಡ ಗೋವಿಂದರಾಜು, ಎಚ್​.ಡಿ.ದೇವೇಗೌಡ ಕಟ್ಟಿದ ಜೆಡಿಎಸ್​ ಇಡೀ ರಾಜ್ಯದಲ್ಲಿ ಸುಭದ್ರವಾಗಿ, ಸುಭಿಕ್ಷವಾಗಿದೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಬೆಳ್ಳಿಹಬ್ಬ ಆಚರಣೆ ಮಾಡುತ್ತಿರುವುದು ಇದೆ ಮೊದಲು. ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಡೀ ರಾಜ್ಯದಲ್ಲಿ ಜೆಡಿಎಸ್​ ಅನ್ನು ಕಟ್ಟಿ ಬೆಳೆಸಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ರೈತರ ಪರ ಕೆಲಸಗಳನ್ನು ಮಾಡಿ ಅನೇಕ ಸವಾಲುಗಳನ್ನು ಎದುರಿಸಿ ಪಕ್ಷವನ್ನು ಬೆಳೆಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಜೆಡಿಎಸ್​ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್​ ಮುಖಂಡ ಆನಂದ್​ ಕುಮಾರ್​ ಮಾತನಾಡಿ, ಜೆಡಿಎಸ್​ ರಾಜ್ಯದಲ್ಲಿ ಸದೃಢವಾಗಿದೆ. ಮುಂಬರುವ 2028ರ ಚುನಾವಣೆಯಲ್ಲಿ ರಾಜ್ಯದಲ್ಲಿ ಸಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಎಚ್​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಜೆಡಿಎಸ್​ ಮುಖಂಡರಾದ ರಾಮಯ್ಯ, ಕರೇಗಿರಿಯಪ್ಪ, ಶಾಂತಪ್ಪ, ಲಕ್ಷ$್ಮಯ್ಯ, ಶಿವಣ್ಣ, ಆನಂದ್​ ಕುಮಾರ್​, ಅಜಯ್​,ಕರಿಬಸವಯ್ಯ, ಭರತ್​, ಚಂದನ್​, ಮಂಜುನಾಥ್​ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net