ಸಿಎಂ ಡಿಕೆಶಿ ಚೊಚ್ಚಲ ಅಧಿವೇಶನಕ್ಕೆ ಸಿದ್ದರಾಮಯ್ಯ ಗೈರು ಸದನದ ಕಡೆಗೆ ಮುಖ ಮಾಡದ ಸಚಿವ ಸ್ಥಾನ ವಂಚಿತರು
DK SHIVAKUMAR
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿಧಾನಸಭೆ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಅವರ ಗೈರು ಬಗ್ಗೆಯೇ ಆಡಳಿರೂಢ ಪಕ್ಷದ ಶಾಸಕರ ನಡುವೆ ಪಿಸು ಮಾತಿನ ಚರ್ಚೆ
ವಿರೋಧ ಪಕ್ಷದ ಮೊಗಸಾಲೆಯಲ್ಲಿಯೂ ಈ ಬಗ್ಗೆ ಭರ್ಜರಿ ಚರ್ಚೆ
ಸಿಎಂ ಡಿಕೆಶಿ ಚೊಚ್ಚಲ ಅಧಿವೇಶನಕ್ಕೆ ಸಿದ್ದರಾಮಯ್ಯ ಗೈರು
ಸದನದ ಕಡೆಗೆ ಮುಖ ಮಾಡದ ಸಚಿವ ಸ್ಥಾನ ವಂಚಿತರು
ಬೆಂಗಳೂರು:
ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಚೊಚ್ಚಲ ಅಧಿವೇಶನದ ಮೊದಲ ದಿನ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗೈರಾಗಿದ್ದರು. ಅಚ್ಚರಿ ಅಂದರೆ, ಸಚಿವ ಸ್ಥಾನ ವಂಚಿತರಾದ ಬಹುಪಾಲು ಅಸಮಾಧಾನಿತರು ಸದನದ ಕಡೆಗೆ ಮುಖ ಮಾಡಲಿಲ್ಲ.
ವಿಧಾನಸಭೆ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಅವರ ಗೈರು ಬಗ್ಗೆಯೇ ಆಡಳಿರೂಢ ಪಕ್ಷದ ಶಾಸಕರ ನಡುವೆ ಪಿಸು ಮಾತಿನ ಚರ್ಚೆಗಳಿದ್ದರೆ, ವಿರೋಧ ಪಕ್ಷದ ಮೊಗಸಾಲೆಯಲ್ಲಿಯೂ ಈ ಬಗ್ಗೆ ಭರ್ಜರಿ ಚರ್ಚೆ ನಡೆದಿತ್ತು. ಸಚಿವ ಸಂಪುಟ ವಿಸ್ತರಣೆಯಾದ ದಿನದಿಂದಲೂ ಮುನಿಸಿನಲ್ಲಿರುವ ಸಿದ್ದರಾಮಯ್ಯ ಯಾಕೆ ಬಂದಿಲ್ಲ ಎನ್ನುವ ಬಗ್ಗೆ ಕೆಲ ಶಾಸಕರು ತಮ್ಮದೇ ಮೂಗಿನ ನೇರಕ್ಕೆ ವಿವರಣೆಗಳನ್ನು ನೀಡುತ್ತಿದ್ದರು.
ಸಚಿವ ಸ್ಥಾನ ವಂಚಿತರಾದ ಎಂ.ಕೃಷ್ಣಪ್ಪ, ಎಚ್.ಕೆ.ಪಾಟೀಲ್, ಶಿವಾನಂದ ಪಾಟೀಲ್, ಡಾ.ಎಚ್.ಸಿ.ಮಹದೇವಪ್ಪ, ವೆಂಕಟೇಶ್, ಕೆ.ಷಡಾಕ್ಷರಿ, ಯಶವಂತರಾಯಗೌಡ, ನಾರಾಯಣಸ್ವಾಮಿ, ಸುಬ್ಬರೆಡ್ಡಿ ಸೇರಿದಂತೆ ಹಲವರು ಸದನಕ್ಕೆ ಗೈರಾಗಿದ್ದರು.
*ಸಚಿವ ಸ್ಥಾನ ಕೈ ತಪ್ಪಿದರೂ ಮುಖ್ಯಮಂತ್ರಿ ಆಪ್ತ ವಲಯದಲ್ಲಿರುವ ಲಕ್ಷ್ಮಿ ಹೆಬ್ಬಳ್ಕರ್, ಗುಬ್ಬಿ ಶ್ರೀನಿವಾಸ್, ಡಾ.ಕೆ.ಸುಧಾಕರ್, ಮಂಕಾಳ ವೈದ್ಯ ಮತ್ತಿತರರು ಸದನಕ್ಕೆ ಹಾಜರಾಗಿದ್ದರು.