ಯಾದಗಿರಿ ಸಮಿಪದ ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದಲ್ಲಿ ಭಾನುವಾರ ನಡೆದ ಶ್ರಾವಣ ಮಾಸದ ಸಂಗೀತ ರುದ್ರಾಭಿಷೇಕದಲ್ಲಿ ಪೀಠಾಽಪತಿ ಡಾ.ಗಂಗಾಧರ ಸ್ವಾಮೀಜಿ ಭಕ್ತರಿಗೆ ದರ್ಶನಾಶೀರ್ವಾದ ಕರುಣಿಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಬ್ಬೆತುಮಕೂರು ಶ್ರೀಗಳು
ಅಬ್ಬೆತುಕೂರಿನಲ್ಲಿ ಸಂಗೀತ ರುದ್ರಾಭೀಷೆಕ ಕಾರ್ಯಕ್ರಮ
ಯಾದಗಿರಿ:
ಶ್ರಾವಣ ಮಾಸ ಅತ್ಯಂತ ಪವಿತ್ರವಾಗಿದ್ದು, ಈ ತಿಂಗಳಿನಲ್ಲಿ ಪುರಾಣ, ಪುಣ್ಯಕಥೆ ಮತ್ತು ಪ್ರವಚನ ಆಲಿಸುವುದರಿಂದ ಅಂತರಂಗ ಶುದ್ಧಿಯಾಗಿ ಮನುಷ್ಯನ ಮನಸ್ಸು ಪ್ರಸನ್ನವಾಗುತ್ತದೆ ಎಂದು ಪೀಠಾಽಪತಿ ಡಾ.ಗಂಗಾಧರ ಸ್ವಾಮೀಜಿ ನುಡಿದರು.
ಭಾನುವಾರ ಅಬ್ಬೆ ತುಮಕೂರಿನ ಶ್ರೀ ವಿಶ್ವಾರಾಧ್ಯರ ಅನುಗ್ರಹ ಕ್ಷೇತ್ರದಲ್ಲಿ ಶ್ರಾವಣ ಮಾಸ ನಿಮಿತ್ತ ತಿಂಗಳ ಪರ್ಯಂತ ಹಮ್ಮಿಕೊಂಡ ಸಂಗೀತ ರುದ್ರಾಭೀಷೇಕ ೧೨ನೇ ದಿನದ ಭಾನುವಾರದ ವಿಶೇಷ ಪೂಜಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ತಿಂಗಳಿನಲ್ಲಿ ಬಹಳಷ್ಟು ಜನ ಉಪವಾಸ ಆಚರಣೆಯ ವ್ರತ ನಿಯಮ ಮಾಡುತ್ತಾರೆ. ಪುಣ್ಯಕ್ಷೇತ್ರಗಳ ದರ್ಶನವನ್ನು ಕೈಗೊಳ್ಳುತ್ತಾರೆ.ಹೀಗೆ ಮಾಡುವುದರಿಂದ ಮನುಷ್ಯನ ಮನೋವಿಕಾರ ದೂರಾಗಿ ಸಾತ್ವಿಕ ಸಂಪನ್ನತೆ ನೆಲೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮನುಷ್ಯರಾಗಿ ಹುಟ್ಟಿ ಬಂದ ಮೇಲೆ ನಡೆ-ನುಡಿಯಲ್ಲಿ ಆಚಾರ- ವಿಚಾರಗಳಲ್ಲಿ ಸಮನ್ವಯಶೀಲತೆಯನ್ನು ಸಾಽಸಬೇಕು. ಅದಕ್ಕಾಗಿ ಸತ್ಸಂಗ, ಸದ್ ವಿಚಾರಗಳು ಈ ಮಾಸದಲ್ಲಿ ಮಾಡುವುದರಿಂದ ಅಂತರAಗ ಶುದ್ಧಿ ಸಾಧ್ಯವಾಗುತ್ತದೆ ಎಂದರು. ಶ್ರಾವಣ ಮಾಸ ಕೇವಲ ಸಾಂಕೇತಿಕ. ತಿಂಗಳಿಗೆ ಮಾತ್ರ ಸೀಮಿತವಾಗಬಾರದು. ಅದು ನಿತ್ಯ ನಿರಂತರವಾಗಿ ನಡೆಯಬೇಕು. ಒಳ್ಳೆಯ ವಿಚಾರಗಳನ್ನು ಶ್ರವಣ ಮಾಡಿ ಜೀವನದಲ್ಲಿ ಆಚರಣೆಗೆ ತಂದಾಗ ಮನುಷ್ಯ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಜಾತಿ-ಮತ, ಪಂಥ-ಪಂಗಡಗಳನ್ನು ಮೀರಿ ಮಾನವಿಯತೆ ನೆಲೆಗಟ್ಟಿನ ಮೇಲೆ ಸಮ ಸಮಾಜ ನಿರ್ಮಾಣವಾಗಬೇಕೆಂಬುದು ಶ್ರೀ ವಿಶ್ವಾರಾಧ್ಯರ ಮನೋಬಯಕೆಯಾಗಿತ್ತು. ಅಂತೆಯೇ ಶ್ರೀಮಠದಲ್ಲಿ ಅವರು, ಇವರೆನ್ನದೆ ಸಕಲ ಜೀವಾತ್ಮರು ವಿಶ್ವಾರಾಧ್ಯರ ಸಂಭೂತರು ಎಂಬ ಸೌಹಾರ್ದ ಭಾವದಲ್ಲಿ ಕಾಣಲಾಗುತ್ತಿದೆ ಎಂದರು.
ಯಾರು ಭಕ್ತಿ-ಭಾವದಿಂದ, ಶ್ರದ್ಧೆ-ನಿಷ್ಠೆಯಿಂದ ಭಜಿಸುತ್ತಾರೋ ಅವರಿಗೆ ಗುರುನಾಥ ಸಕಲ ಐಶ್ವರ್ಯ ಕರುಣಿಸಿ ಕಾಪಾಡುತ್ತಾನೆ ಎಂದರು. ಬೆಳಿಗ್ಗೆ ಗದ್ದುಗೆಗೆ ವಿಶೇಷ ಮಹಾ ರುದ್ರಭಿಷೇಕವನ್ನು ನೆರವೇರಿಸಲಾಯಿತು. ಮಠದ ಕಿರಿಯ ಸ್ವಾಮಿಗಳಾದ ಶಿವಶೇಖರ ವಿಶ್ವಾರಾದ್ಯ ಸ್ವಾಮಿಗಳು, ಡಾ ಸುಭಾಷಚಂದ್ರ ಕೌಲಗಿ, ಬಸವರಾಜ ಶಾಸಿö ಎಲೆಕೂಡಗಿ ಸೇರಿದಂತೆ ಇತರರಿದ್ದರು.