

ಪ್ರಮುಖ ಮುಖ್ಯಾಂಶಗಳು
ಪ್ರಶಾಂತರಿಪ್ಪನ್‌ಪೇಟೆ ಬೆಂಗಳೂರು :ಭಾರತೀಯ ಸಂಸ್ಕೃತಿಮತ್ತು ಪರಂಪರೆಯಲ್ಲಿ ಮನುಷ್ಯನಆಧ್ಯಾತ್ಮ ಜೀವನದ ಸಾರ್ಥಕತೆಗೆಹಲವು ಮಾರ್ಗಗಳಿವೆ.ಅವುಗಳಲ್ಲಿಪ್ರಮುಖವಾದದ್ದು ಸ್ವಾಧ್ಯಾಯಮತ್ತು ಪ್ರವಚನ.ತ್ರಿಕರಣ ಶುದ್ದಿಗೆಪ್ರಮುಖವಾದ ಸ್ವಾಧ್ಯಾಯ ಮತ್ತುಪ್ರವಚನಕ್ಕೆ ಸೂಕ್ತ ಕಾಲವೇ ಶ್ರಾವಣಮಾಸ. ಗುರುವಾರ(ಆ.13)ದಿಂದ ಶ್ರಾವಣಮಾಸ ಆರಂಭವಾಗಿದೆ.
ಹಿಂದೂಪಂಚಾಂಗದ ಪ್ರಕಾರ ಮಾಸಗಳ ಹೆಸರುಪ್ರತಿಪೌರ್ಣಿಮೆಯಂದು ಬರುವನಕ್ಷತ್ರವನ್ನು ಅವಲಂಬಿಸಿವೆ.ಪೌರ್ಣಿಮೆಯಂದುಶ್ರವಣ ನಕ್ಷತ್ರ ಬರುವ ಮಾಸವನ್ನುಶ್ರಾವಣ ಮಾಸ ಎಂದು ಕರೆಯಲಾಗುತ್ತದೆ.ಶ್ರವಣ ಎಂದರೆ;ಕೇಳು ಎಂದರ್ಥ.ಮನುಷ್ಯ ತನ್ನಹುಟ್ಟಿನಿಂದ ಕೊನೆಯವರೆಗೆಪ್ರತಿಹಂತದಲ್ಲೂ,ಕೇಳುವ ಮೂಲಕವೇಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನುಕಂಡುಕೊಳ್ಳುತ್ತಾನೆ.ಅಂತೆಯೇ ಬದುಕಿನಅಬ್ಯುದಯಕ್ಕೆ ಪೂರಕವಾದ ಪ್ರಾಚೀನಸಾಹಿತ್ಯವನ್ನು ಸ್ವಾಧ್ಯಾಯ ಅಥವಾಪ್ರವಚನದ ಮೂಲಕ ಕೇಳುವುದಕ್ಕೆಈ ಮಾಸ ಮೀಸಲಾಗಿದೆ. ಹಿಂದಿನಿಂದಲೂದೇಶದ ಬಹುತೇಕ ಎಲ್ಲ ಮಠ-ಮಂದಿರಗಳಲ್ಲಿಶ್ರಾವಣ ಮಾಸದಲ್ಲಿ ವಿಶೇಷಪುರಾಣ-ಪ್ರವಚನಗಳನ್ನುನಡೆಸಲಾಗುತ್ತದೆ.ವೇದ,ಆಗಮ,ಉಪನಿಷತ್ತುಮತ್ತು ಪುರಾಣಗಳಲ್ಲಿ ಬರುವ ಕತೆಗಳುಲೌಕಿಕ ಮತ್ತು ಆಧ್ಯಾತ್ಮಿಕಬದುಕಿಗೆ ದಿಕ್ಸೂಚಿಗಳಾಗಿರುತ್ತವೆ.ಇವುಗಳ ಪ್ರೇರಣೆಯಿಂದಉನ್ನತ ಸಾಧನೆ ಮಾಡಲು ಸಾಧ್ಯ.ಮನುಷ್ಯನ ಬದುಕುಸಾರ್ಥಕಗೊಳ್ಳಲು ಪ್ರಮುಖವಾಗಿತ್ರಿಕರಣ ಶುದ್ಧಿ ಅವಶ್ಯಕ.ತ್ರಿಕರಣ ಶುದ್ಧಿಗೆಪುರಾಣ-ಪ್ರವಚನ,ಪೂಜೆ-ಅನುಷ್ಠಾನಗಳುಪೂರಕವಾಗಿರುತ್ತವೆ.ಇದರ ಜೊತೆಗೆಶ್ರಾವಣ ಮಾಸದಲ್ಲಿ ತೀರ್ಥಯಾತ್ರೆಮಾಡುವ ಪದ್ಧತಿ ಕೂಡಾ ಇದೆ.
ಭಾರತೀಯಪಂಚಾಂಗದ ಪ್ರಕಾರ ಯುಗಾದಿ ಹಬ್ಬದಿಂದಆರಂಭವಾಗುವ ನೂತನ ಸಂವತ್ಸರದಲ್ಲಿಹಬ್ಬ, ವ್ರತ,ವಿಶೇಷ ಪೂಜೆಗಳುಆರಂಭವಾಗುವುದೇ ಶ್ರಾವಣ ಮಾಸದಿಂದ. ಮಂಗಳಗೌರಿ ವ್ರತ,ಶುಕ್ರಗೌರಿವ್ರತ, ವರಮಹಾಲಕ್ಷ್ಮಿವ್ರತ, ಶ್ರೀಕೃಷ್ಣಜನ್ಮಾಷ್ಠಮಿ,ನಾಗರ ಪಂಚಮಿ,ಯಜ್ಞೋಪವೀತ(ಜನಿವಾರ)ವನ್ನುಬದಲಿಸುವ ಉಪಕರ್ಮ,ಸಹೋದರತೆ ಸಾರುವರಕ್ಷಾಬಂಧನ ಹೀಗೆ ಶ್ರಾವಣ ಮಾಸಪೂರ್ತಿ ಸಾಲು ಸಾಲು ವ್ರತ,ಹಬ್ಬಗಳನ್ನುಆಚರಿಸಲಾಗುತ್ತದೆ.
ಪಂಚಪೀಠದಎಲ್ಲ ಜಗದ್ಗುರುಗಳು ವರ್ಷಪೂರ್ತಿಭಕ್ತರ ಭಿನ್ನಹದ ಮೇರೆಗೆ ದೇಶದಉದ್ದಗಲಕ್ಕೂ ಸಂಚರಿಸಿ ಧರ್ಮಪ್ರಚಾರ ಕೈಗೊಂಡರೆ;ಶ್ರಾವಣ ಮಾಸದಲ್ಲಿಪೀಠದ ಪರಿಸರದಲ್ಲಿದ್ದುಪೂಜಾನುಷ್ಠಾನವನ್ನು ಕೈಗೊಳ್ಳುವುದುಪರಂಪರೆ.
ಬಾಳೆಹೊನ್ನೂರಿನಶ್ರೀರಂಭಾಪುರಿ ಡಾ.ವೀರಸೋಮೇಶ್ವರಜಗದ್ಗುರುಗಳ 35ನೇವರ್ಷದ ಶ್ರಾವಣ ತಪೋನುಷ್ಠಾನಆ.13 ರಿಂದಆರಂಭವಾಗಿದ್ದು ಸೆ.11ರವರೆಗೆಶ್ರೀಪೀಠದಲ್ಲಿ ನಡೆಯಲಿದೆ.ಬೆಳಗ್ಗೆ ಸಾಮೂಹಿಕಇಷ್ಟಲಿಂಗ ಪೂಜೆ,ಸಂಜೆ ಶ್ರೀರೇಣುಕವಿಜಯ ಪುರಾಣ ಪ್ರವಚನ ಜರುಗಲಿದ್ದು,ವಿಶೇಷವಾಗಿಆ.16ಕ್ಕೆಲಿಂಗ್ಯಕ್ಯ ಶಿವಾನಂದ ಜಗದ್ಗುರುಗಳಹಾಗೂ ಆ.20ಕ್ಕೆಲಿಂಗೈಕ್ಯ ರುದ್ರಮುನಿ ಜಗದ್ಗುರುಗಳಪುಣ್ಯಸ್ಮರಣೋತ್ಸವ ನಡೆಯಲಿದೆ.
ಉಜ್ಜಯಿನಿಪೀಠದಲ್ಲಿ ಜಗದ್ಗುರು ಸಿದ್ಧಲಿಂಗಶಿವಾಚಾರ್ಯ ಭಗವತ್ಪಾದರ ಶ್ರಾವಣಅನುಷ್ಟಾನ ಹಾಗೂ ಕ್ಷೇತ್ರನಾಥಮರುಳಸಿದ್ದೇಶ್ವರ ಸ್ವಾಮಿಗೆನಿತ್ಯ ರುದ್ರಾಭಿಷೇಕ ನಡೆಯಲಿದೆ.ಶ್ರೀಶೈಲ ಜಗದ್ಗುರುಡಾ.ಚನ್ನಸಿದ್ಧರಾಮಪಂಡಿತಾರಾಧ್ಯ ಭಗವತ್ಪಾದರತಪೋನುಷ್ಟಾನ,ಶ್ರೀಪೀಠದಲ್ಲಿಪುರಾಣ ಪ್ರವಚನ ಹಾಗೂ ಸಾಮೂಹಿಕದೀಕ್ಷೆ ಮತ್ತಿತರ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳಲಾಗಿದೆ.
ಕಾಶೀಜಗದ್ಗುರು ಡಾ.ಚಂದ್ರಶೇಖರಶಿವಾಚಾರ್ಯ ಭಗವತ್ಪಾದರು ಜಂಗಮವಾಡಿಮಠದಲ್ಲಿ ಅನುಷ್ಟಾನ ಕೈಗೊಳ್ಳಲಿದ್ದು,ಆ.25ರಂದುಜಗದ್ಗುರುಗಳ ಜನ್ಮದಿನದ ಹಿನ್ನೆಲೆಯಲ್ಲಿಭಕ್ತರು ವಿಶೇಷ ಗುರುವಂದನೆಹಮ್ಮಿಕೊಂಡಿದ್ದಾರೆ.ಕಿರಿಯ ಜಗದ್ಗುರುಡಾ.ಮಲ್ಲಿಕಾರ್ಜುನವಿಶ್ವಾರಾಧ್ಯ ಭಗವತ್ಪಾದರುಸೊಲ್ಲಾಪುರದ ಹೂಟಗಿ ಮಠದಲ್ಲಿಅನುಷ್ಟಾನ ಹಮ್ಮಿಕೊಂಡಿದ್ದಾರೆ.
ಮಠ-ಮಂದಿರಗಳಲ್ಲಿವಿಶೇಷ ಕಾರ್ಯಕ್ರಮ
ಈಗಾಗಲೇಚಾತುರ್ಮಾಸ್ಯ ವ್ರತದಲ್ಲಿರುವಸನ್ಯಾಸಿಗಳು ಆಷಾಡ ಏಕಾದಶಿಯಿಂದಲೇಪೂಜೆ, ಪ್ರವಚನಆರಂಭಿಸಿದ್ದು,ಶ್ರಾವಣ ಮಾಸದಲ್ಲೂಮುಂದುವರೆಯಲಿದೆ.ವೀರಶೈವ ಲಿಂಗಾಯತಮಠಗಳಲ್ಲಿ ಶ್ರಾವಣ ಮಾಸದ ಪರ್ಯಂತರನಿತ್ಯ ಸಾಮೂಹಿಕ ಇಷ್ಟಲಿಂಗ ಪೂಜೆ,ಶ್ರೀಸಿದ್ಧಾಂತಶಿಖಾಮಣಿ ಮತ್ತು ವಚನ ಸಾಹಿತ್ಯದಕುರಿತು ಶಿವಾನುಭವ ಗೋಷ್ಠಿಗಳುನಡೆಯಲಿವೆ. ಶಿವನದೇವಾಲಯಗಳಲ್ಲಿ ರುದ್ರಾಭಿಷೇಕ,ವಿಶೇಷ ಪೂಜೆಹಮ್ಮಿಕೊಳ್ಳಲಾಗಿದೆ.
ಸುತ್ತೂರುಮಠದಲ್ಲಿ ಶ್ರಾವಣ ಮಾಸದ ನಿಮಿತ್ತಆ.13 ರಿಂದಸೆ.10ರವರೆಗೆವಿಶೇಷ ಪೂಜೆ ಹಾಗೂ ಪ್ರವಚನಏರ್ಪಡಿಸಲಾಗಿದೆ.ವಿಭೂತಿಪುರ ಮಠದಡಾ.ಮಹಾಂತಲಿಂಗಶಿವಾಚಾರ್ಯ ಸ್ವಾಮಿಗಳು,ಭಕ್ತರ ಮನೆಯಿಂದಮನೆಗೆ ಶಿವಾನುಭವ ಎಂಬ ವಿನೂತನಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ನಾಗಲಾಪುರದಶ್ರೀತೇಜೇಶಲಿಂಗ ಶಿವಾಚಾರ್ಯಸ್ವಾಮಿಗಳು ವಿವಿಧ ಊರುಗಳಲ್ಲಿಸಾಮೂಹಿಕ ಇಷ್ಟಲಿಂಗಪೂಜೆ ಮತ್ತು ಶಿವಾನುಭವ ಕಾರ್ಯಕ್ರಮಹಮ್ಮಿಕೊಂಡಿದ್ದಾರೆ.ಮಳಲಿಮಠದಡಾ.ನಾಗಭೂಷಣಶಿವಾಚಾರ್ಯ ಸ್ವಾಮಿಗಳು,ಹುಕ್ಕೇರಿಹಿರೇಮಠದ ಶ್ರೀಚಂದ್ರಶೇಖರಶಿವಾಚಾರ್ಯ ಸ್ವಾಮಿಗಳು,ಸುಲ್ತಾನಪುರಮಠದ ಶ್ರೀಶಂಭುಸೋಮನಾಥ ಶಿವಾಚಾರ್ಯಸ್ವಾಮಿಗಳು ಶ್ರಾವಣ ಅನುಷ್ಠಾನಕೈಗೊಂಡಿದ್ದಾರೆ.