ತುಮಕೂರು ರೈಲು ನಿಲ್ದಾಣದಲ್ಲಿ ಅಧಿಕ ಹಣ ವಸೂಲಿ ಮಾಡಿದ ಅಂಗಡಿ ಮಾಲೀಕನಿಗೆ ದಂಡ

ತುಮಕೂರು ರೈಲು ನಿಲ್ದಾಣದಲ್ಲಿ ಅಧಿಕ ಹಣ ವಸೂಲಿ ಮಾಡಿದ ಅಂಗಡಿ ಮಾಲೀಕನಿಗೆ ದಂಡ
ತುಮಕೂರು ರೈಲು ನಿಲ್ದಾಣದಲ್ಲಿ ಅಧಿಕ ಹಣ ವಸೂಲಿ ಮಾಡಿದ ಅಂಗಡಿ ಮಾಲೀಕನಿಗೆ ದಂಡ
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕ ಹಣ ವಸೂಲಿ ಮಾಡಿದ ಅಂಗಡಿ ಮಾಲೀಕನಿಗೆ ದಂಡ
  • ತುಮಕೂರು ರೈಲು ನಿಲ್ದಾಣದಲ್ಲಿ ನಡೆದ ಘಟನೆ
  • ರೈಲ್ ಮದದ್ ಪೋರ್ಟಲ್​ನಲ್ಲಿ ನೀಡಿದ ದೂರಿಗೆ ಅಧಿಕಾರಿಗಳ ಸ್ಪಂದನೆ

ಬೆಂಗಳೂರು: ತುಮಕೂರುರೈಲು ನಿಲ್ದಾಣದ ಪ್ರವೇಶ ದ್ವಾರದಬಳಿ ಇರುವ ಅಂಗಡಿಯೊಂದರಲ್ಲಿತಂಪು ಪಾನೀಯ ಮತ್ತು ಕುಡಿಯುವನೀರಿನ ಬಾಟಲಿಗೆ ನಿಗದಿತ ದರಕ್ಕಿಂತಅಧಿಕ ಹಣ ವಸೂಲಿ ಮಾಡಿದ ಕುರಿತುಪ್ರಯಾಣಿಕರು ರೈಲ್‌ಮದದ್ ಪೋರ್ಟಲ್ಮೂಲಕ ಸಲ್ಲಿಸಿದ ದೂರಿಗೆ ರೈಲ್ವೆಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದು,ಹೆಚ್ಚುವರಿಯಾಗಿಪಡೆದ ಹಣವನ್ನು ಹಿಂದಿರುಗಿಸುವಂತೆಅಂಗಡಿ ಮಾಲೀಕರಿಗೆ ಸೂಚಿಸುವಜತೆಗೆ 1 ಸಾವಿರರೂ. ದಂಡವಿಧಿಸಿದ್ದಾರೆ.

ಭುವನ್ಎಂಬುವವರು ಬುಧವಾರ ರೈಲ್ ಮದದ್ಮೂಲಕ ದೂರು ಸಲ್ಲಿಸಿದ್ದರು.ತುಮಕೂರು ರೈಲುನಿಲ್ದಾಣದ ಪ್ರವೇಶ ದ್ವಾರದ ಬಳಿಯಅಂಗಡಿಯಿಂದ 35ರೂ.ಎಂಆರ್‌ಪಿಹೊಂದಿದ್ದ ತಂಪು ಪಾನೀಯ ಹಾಗೂ 14ರೂ.ಎಂಆರ್‌ಪಿಹೊಂದಿದ್ದ ನೀರಿನ ಬಾಟಲಿಯನ್ನುಖರೀದಿಸಿದ್ದರು.ಎರಡೂ ಸೇರಿ 49ರೂ.ಆಗಬೇಕಿದ್ದರೂಅಂಗಡಿ ಮಾಲೀಕರು 60ರೂ.ವಸೂಲಿ ಮಾಡಿದ್ದು,11 ರೂ.ಹೆಚ್ಚುವರಿಯಾಗಿಪಡೆದಿರುವುದಾಗಿ ದೂರಿನಲ್ಲಿತಿಳಿಸಿದ್ದರು.

ದೂರುಸ್ವೀಕರಿಸಿದ ತಕ್ಷಣ ಮುಖ್ಯವಾಣಿಜ್ಯ ನಿರೀಕ್ಷಕರು ಸ್ಥಳಕ್ಕೆಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ದೂರು ಸತ್ಯವೆಂದುಕಂಡುಬಂದಿದೆ.ಈ ಹಿನ್ನೆಲೆಯಲ್ಲಿಹೆಚ್ಚುವರಿಯಾಗಿ ವಸೂಲಿ ಮಾಡಿದ್ದ11 ರೂ.ಗಳನ್ನುಪ್ರಯಾಣಿಕನಿಗೆ ಹಿಂದಿರುಗಿಸುವಂತೆಅಂಗಡಿ ಮಾಲೀಕರಿಗೆ ಸೂಚಿಸಲಾಯಿತು.ಅಲ್ಲದೆ,ಅಧಿಕ ಹಣ ವಸೂಲಿಮಾಡಿದ್ದಕ್ಕಾಗಿ ಅಂಗಡಿ ಮಾಲೀಕರಿಗೆ1 ಸಾವಿರರೂ. ದಂಡವಿಧಿಸಲಾಗಿದೆ.

ತ್ವರಿತದೂರು ಪರಿಹಾರಕ್ಕೆ ರೈಲ್‌ಮದದ್

ರೈಲುಪ್ರಯಾಣಿಕರ ದೂರು ಹಾಗೂ ಸಲಹೆಗಳನ್ನುತ್ವರಿತವಾಗಿ ಸ್ವೀಕರಿಸಿ ಪರಿಹರಿಸುವಉದ್ದೇಶದಿಂದ ರೈಲ್‌ಮದದ್ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.ಆನ್‌ಲೈನ್ಪೋರ್ಟಲ್, ಮೊಬೈಲ್ಆ್ಯಪ್ ಅಥವಾ ಎಸ್‌ಎಂಎಸ್ ಮೂಲಕಪ್ರಯಾಣಿಕರು ದೂರು ಸಲ್ಲಿಸಬಹುದಾಗಿದ್ದು,ದೂರುಗಳಸ್ಥಿತಿಗತಿಯನ್ನು ಪರಿಶೀಲಿಸುವಹಾಗೂ ಪರಿಹಾರದ ಬಗ್ಗೆ ಪ್ರತಿಕ್ರಿಯೆನೀಡುವ ಸೌಲಭ್ಯವೂ ಇದೆ.

ರೈಲುಮತ್ತು ರೈಲು ನಿಲ್ದಾಣಗಳಿಗೆಸಂಬಂಧಿಸಿದ ಯಾವುದೇ ದೂರು ಅಥವಾಸಲಹೆಯನ್ನು ಪ್ರಯಾಣಿಕರು ರೈಲ್‌ಮದದ್ಮೂಲಕ ಸಲ್ಲಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net