ಜೂ.15ರಿಂದ ಆಗುಂಬೆ ಘಾಟಿ​ಯಲ್ಲಿ ಭಾರೀ ವಾಹನ ಸಂಚಾರ ನಿಷೇಧ; ಎಲ್ಲಿಯವರೆಗೂ, ಪರ್ಯಾಯ ಮಾರ್ಗ ಯಾವುದು?

  Agumbe Ghat  heavy vehicles
Agumbe Ghat heavy vehicles
Published on

ಪ್ರಮುಖ ಮುಖ್ಯಾಂಶಗಳು

  • ಭೂ ಕುಸಿತ ಸಂಭವಿಸುವ ನಿಟ್ಟಿನಲ್ಲಿ ಆಗುಂಬೆ ಘಾಟಿನಲ್ಲಿ ಭಾರೀ ವಾಹನ ಸಂಚಾರ ನಿರ್ಬಂಧ
  • ಜೂನ್​ 15ರಿಂದ ಮಳೆಗಾಲದ ಅಂತ್ಯದವರೆಗೂ ಸಂಚಾರ ನಿರ್ಬಂಧ
  • ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಶಿವಮೊಗ್ಗ ಜಿಲ್ಲಾಡಳಿತದಿಂದ ಮನವಿ
ಶಿವಮೊಗ್ಗ:  ಜೂನ್​ 15ರಿಂದ ಮಳೆಗಾಲದ ಅಂತ್ಯದವರೆಗೂ ಆಗುಂಬೆ ಘಾಟ್ NH 169Aನಲ್ಲಿ ಭಾರೀ ವಾಹನ(  Agumbe Ghat heavy vehicles) ಸಂಚಾರವನ್ನು ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ. ಮಳೆಗಾಲದಲ್ಲಿ ಘಾಟ್​ಗೆ ಹಾನಿಯಾಗದಂತೆ ತಡೆಯುವುದು ಈ ಆದೇಶದ ಉದ್ದೇಶ ಎನ್ನಲಾಗಿದೆ. 
ಜೂನ್​ 15ರಿಂದ ಮಳೆಗಾಲದ ಅಂತ್ಯದವರೆಗೂ ಜೆಲ್ಲಿ ಕಲ್ಲು ಸಾಗಿಸುವ ಟ್ರಕ್​ ಸೇರಿದಂತೆ ಭಾರೀ ವಾಹನಗಳು ಸಂಚರಿಸದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಹೊರಡಿಸಿದ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. 

ಪ್ರಕಟಣೆಯಲ್ಲಿ ಏನಿದೆ?

ತೀರ್ಥಹಳ್ಳಿ-ಮಲ್ಪೆ- ಉಡುಪಿ ರಸ್ತೆಯ ಆಗುಂಬೆ ಮಾರ್ಗದಲ್ಲಿ ಭಾರೀ ವಾಹನಗಳ ರಸ್ತೆ ಸಂಚಾರ ಹೆಚ್ಚಾದರೆ ರಸ್ತೆ ಮೇಲ್ಮೈಗೆ ಯಾವುದೇ ರೀತಿಯ ಹಾನಿಯುಂಟಾಗಬಹುದು. ಇದರಿಂದ ಭೂ ಕುಸಿತ ಉಂಟಾಗುವುದನ್ನು ತಪ್ಪಿಸುವ ಸಲುವಾಗಿ  ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.
ಆಗುಂಬೆ ಘಾಟ್​ ಮಾರ್ಗವು, ದಾವಣೆಗೆರೆ, ಶಿವಮೊಗ್ಗ ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ಜನರಿಗೆ  ಉಡುಪಿ, ಮಂಗಳೂರಿನಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಗಳಿಗೆ ತೆರಳಲು ಇರುವ ಮಾರ್ಗವಾಗಿದೆ. ಇದೀಗ ಈ ಮಾರ್ಗವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುವ ಕಾರಣ, ಸಾಮಾನ್ಯ ಜನರಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ಏಪ್ರಿಲ್​ನಲ್ಲಿ ಹುಲಿಕಲ್ ಘಾಟ್​​ನಲ್ಲಿ  ಭೂಕುಸಿತ ಸಂಭವಿಸಿ, ಮೂವರು ಮೃತಪಟ್ಟಿದ್ದರು.  ದುರಸ್ತಿ ಕಾರ್ಯಕ್ಕಾಗಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇನ್ನೂ ಕಾರ್ಯಾಚರಣೆ ಮುಕ್ತಾಯಗೊಂಡಿಲ್ಲ ಎಂದು  ಜಿಲ್ಲಾಡಳಿತದ ಪ್ರಕಟಿಸಿದೆ.

ಪರ್ಯಾಯ ಮಾರ್ಗ ಯಾವುದು? 

ತೀರ್ಥಹಳ್ಳಿಯಿಂದ ಉಡುಪಿಗೆ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗಗಳು
ತೀರ್ಥಹಳ್ಳಿ - ನಗರ - ನಾಗೋಡಿ - ಕೊಲ್ಲೂರು - ಕುಂದಾಪುರ - ಉಡುಪಿ
ತೀರ್ಥಹಳ್ಳಿ - ಶೃಂಗೇರಿ - ಕೆರೆಕಟ್ಟೆ - ಬಜಗೋಳಿ - ಕಾರ್ಕಳ - ಉಡುಪಿ
ಉಡುಪಿಯಿಂದ ತೀರ್ಥಹಳ್ಳಿಗೆ ಪ್ರಯಾಣಿಸುವ ವಾಹನಗಳಿಗೆ ಪರ್ಯಾಯ ಮಾರ್ಗಗಳು:
ಉಡುಪಿ - ಕುಂದಾಪುರ - ಕೊಲ್ಲೂರು - ನಾಗೋಡಿ- ನಗರ- ತೀರ್ಥಹಳ್ಳಿ
ಕಾರ್ಕಳ - ಬಜಗೋಳಿ - ಕೆರೆಕಟ್ಟೆ - ಶೃಂಗೇರಿ - ತೀರ್ಥಹಳ್ಳಿ ರಸ್ತೆ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net