ಶಿವಾಜಿ ಮಹಾರಾಜರ ಆದರ್ಶ ಅಳವಡಿಸಿಕೊಳ್ಳಿ

ಶಿವಾಜಿ ಮಹಾರಾಜರ ಆದರ್ಶ ಅಳವಡಿಸಿಕೊಳ್ಳಿ
ಶಿವಾಜಿ ಮಹಾರಾಜರ ಆದರ್ಶ ಅಳವಡಿಸಿಕೊಳ್ಳಿ
Published on

ಪ್ರಮುಖ ಮುಖ್ಯಾಂಶಗಳು

  • ಶಿವಾಜಿ ಮಹಾರಾಜರ ಆದರ್ಶ ಅಳವಡಿಸಿಕೊಳ್ಳಿ
  • ಸಚಿವೆ ಹೆಬ್ಬಾಳ್ಕರ್ ಅಭಿಮತ
  • ಖನಗಾಂವ ಗ್ರಾಮದಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾನಕ್ಕೆ ಚಾಲನೆ

ಶಿವಾಜಿಯ ಆದರ್ಶ ಅಳವಡಿಸಿಕೊಳ್ಳಿ
| ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಮತ |ಮೂರ್ತಿ ಪ್ರತಿಷ್ಠಾಪನೆಯ ಭೂಮಿ ಪೂಜೆ

ವಿಜಯವಾಣಿ ಸುದ್ದಿಜಾಲ ಬೆಳಗಾವಿ:
ಸ್ವಾಭಿಮಾನದ ಸಂಕೇತವಾದ ಛತ್ರಪತಿ ಶಿವಾಜಿ ಮಹಾರಾಜರನ್ನು ಪೂಜಿಸುವ ಜೊತೆಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಮತ ವಕ್ತಪಡಿಸಿದ್ದಾರೆ.

ತಾಲೂಕಿನ ಖನಗಾಂವ ಕೆ.ಎಚ್ ಗ್ರಾಮದಲ್ಲಿ ಸೋಮವಾರ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೂರ್ತಿಯ ಪ್ರತಿಷ್ಠಾಪನೆಯ ಸ್ಥಳದ ಭೂಮಿ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿ ಪೂಜೆ ನೆರವೇರಿಸಿದರು.
ಧರ್ಮ, ಭಾಷೆ, ಜಾತಿ ಯಾವುದೂ ಅಡ್ಡಿಯಾಗದೇ ಜನರ ಸುರಕ್ಷಿತ, ಸ್ವಾಭಿಮಾನ ಮತ್ತು ಸ್ವರಾಜ್ಯ ಇವು ಶಿವಾಜಿಯವರ ಆಡಳಿತದ ಮೂಲ ತತ್ವಗಳು. ಶಿವಾಜಿ ಮಹಾರಾಜರ ತತ್ವದಂತೆ ನಾನು ಕೂಡ ಯಾವುದೇ ಭೇದಭಾವವಿಲ್ಲದೆ ಜನರ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದರು.

ವಿ.ಪ ಸದಸ್ಯ ಚನ್ನರಾಜ ಹಟ್ಟಿಹೊಳಿ, ಅರಳಿಕಟ್ಟಿಯ ಶಿವಮೂರ್ತಿ ದೇವರು, ಶ್ರೀಶೈಲ ಸ್ವಾಮಿಗಳು, ರಾಜು ಸುಳೇಭಾವಿ ಸಾಮಿಗಳು, ಮಹೇಶ ಪಾಟೀಲ, ಬಾಬಾಜಿ ಕರಡಿ, ಬಸ್ಸು ಯಳ್ಳೂರಕರ, ಶಂಕರಗೌಡ ಪಾಟೀಲ, ಯಲ್ಲಪ್ಪ ಬುಡ್ರಿ, ಬಾಳು ಕುರುಬರ, ನಾಗೇಶ ದೇಸಾಯಿ, ಫಕೀರವ್ವ ಅಂಬರಾಪುರ, ಭರತ ಪಾಟೀಲ, ರಂಜನಾ ಗಿರಿಯಾಲ್ಕರ್, ಬಾಳು ಪಾಟೀಲ, ಮಹೇಶ್ ಸುಗಣೆನ್ನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net