ಚಿನ್ನದ ಸರಕ್ಕಾಗಿ ವೃದ್ಧೆಯನ್ನು ಕೊಂದು ಮೂಟೆ ಕಟ್ಟಿದಳು! / SARJAPUR

ಭದ್ರಮ್ಮ AND ದೀಪಾ
ಭದ್ರಮ್ಮ AND ದೀಪಾ
Published on
ಸರ್ಜಾಪುರ: ಕಜ್ಜಾಯ ಕೊಡುವುದಾಗಿ ವೃದ್ಧೆಯನ್ನು ಕರೆಸಿಕೊಂಡು ಚಿನ್ನಾಭರಣ ಕಿತ್ತುಕೊಂಡ ಬಳಿಕ ಕೊಲೆ ಮಾಡಿ ಮನೆಯಲ್ಲೇ 2 ದಿನ ಶವ ಇಟ್ಟುಕೊಂಡು, ನಂತರ ಪೊದೆಗೆ ಎಸೆದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಕೂಗೂರು ನಿವಾಸಿ ಭದ್ರಮ್ಮ(68) ಕೊಲೆಯಾದವರು. ಅದೇ ಗ್ರಾಮದ ದೀಪಾಳನ್ನು ಕೊಲೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಅ.30ರಂದು ಭದ್ರಮ್ಮ ಕಾಣೆಯಾಗಿದ್ದು, 31ರಂದು ಕುಟುಂಬಸ್ಥರು ಸರ್ಜಾಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ವೃದ್ಧೆಗಾಗಿ ಕರಪತ್ರ ಹಂಚಿ ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ. ಕೊನೆಯದಾಗಿ ದೀಪಾಳ ಮನೆಗೆ ಭದ್ರಮ್ಮಹೋಗಿದ್ದರು ಎಂಬುದು ತಿಳಿದ ಬಳಿಕ ನ.6ರಂದು ಪೊಲೀಸರು ದೀಪಾಳನ್ನು ವಿಚಾರಣೆ ನಡೆಸಿದ್ದು, ಕೊಲೆ ರಹಸ್ಯ ಬಯಲಾಗಿದೆ.
ಚಿನ್ನಕ್ಕಾಗಿ ಕೊಲೆ: ಭದ್ರಮ್ಮಬಳಿ ಇದ್ದ ಚಿನ್ನದ ಸರಕ್ಕಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸರ್ಜಾಪುರ ಇನ್​ಸ್ಪೆಕ್ಟರ್​ ನವೀನ್​ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ.
ಮೂಟೆ ಕಟ್ಟಿದ್ದಳು!: ಭದ್ರಮ್ಮ ಅವರನ್ನು ಕೊಲೆ ಮಾಡಿದ ದೀಪಾ ಮೂಟೆ ಕಟ್ಟಿ 2 ದಿನ ಮನೆಯಲ್ಲಿಟ್ಟುಕೊಂಡಿದ್ದಳು. ವಾಸನೆ ಹೆಚ್ಚಾದಾಗ ಮತ್ತೊಂದು ಚೀಲಕ್ಕೆ ಹಾಕಿದ್ದಳು. ನಂತರ ಮನೆಯಲ್ಲಿ ಕಸವಿದೆ, ಎಸೆದು ಬರೋಣ ಬಾ ಎಂದು ಮಗನನ್ನು ಕರೆಸಿಕೊಂಡು, ದೊಡ್ಡತಿಮ್ಮಸಂದ್ರ ಪೊದೆಯಲ್ಲಿ ಶವವಿದ್ದ ಮೂಟೆ ಎಸೆದು ಹೋಗಿದ್ದಳು. ವೃದ್ಧೆ ಮನೆಯವರು ವಿಚಾರಿಸಿದಾಗ ಮನೆಗೆ ಬಂದು ವಾಪಸ್​ ಹೋದರು ಎಂದೇ ಕಥೆ ಕಟ್ಟಿದ್ದಳು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net