ಅವರ ದಾರಿಯಲ್ಲೇ ನಡೆದು ನಮ್ಮ ಭಾಗದಲ್ಲಿ ಅತೀ ಸರಳ ಸಜ್ಜನಿಕೆಯ ರಾಜಕಾರಣಿ ಎನ್ನಿಸಿಕೊಂಡವರು ಅವರ ಸುಪುತ್ರ ಶ್ರೀ ಕೈಲಾಸನಾಥ ಪಾಟೀಲ ಅವರು, ಕೇವಲ ಒಂದು ಬಾರಿ ಮಾತ್ರ ಚಿಂಚೋಳಿಯಿಂದ ಶಾಸಕರಾದರೂ ಕ್ಷೇತ್ರದ ಜನ ಎಂದೂ ಮರೆಯದಂತಹ ಸೇವೆ ಸಲ್ಲಿಸಿದ್ದಾರೆ. ಕ್ಷೇತ್ರ ಮೀಸಲು ಆದ ಮೇಲೆ ಅವಕಾಶ ವಂಚಿತರಾದ ಅವರು ಇವತ್ತಿಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿ ಕಳೆದ ಹಲವು ವಿಧಾನ ಸಭೆ, ವಿಧಾನ ಪರಿಷತ್ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರತೀ ಭೂತಗಳಲ್ಲಿ ಪ್ರಚಾರ ಮಾಡಿದ್ದಾರೆ, ವಿಶೇಷವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಶ್ರೀ ಸಾಗರ ಖಂಡ್ರೆ ಅವರು ಗೆಲ್ಲುವಲ್ಲಿ ಕೈಲಾಸ ಪಾಟೀಲ ಪಾತ್ರ ಅತೀ ದೊಡ್ಡದಾಗಿದೆ. ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇರದೇ ಕಾಂಗ್ರೆಸ್ ಪಕ್ಷದ ಸದೃಢ ಸಂಘಟನೆಗೆ ನಿರಂತರವಾಗಿ ದುಡಿಯುತ್ತಿದ್ದಾರೆ. ಇವತ್ತಿನ ಕಾಲದಲ್ಲಿ ಅವಕಾಶಕ್ಕಾಗಿ ಒಂದರಿಂದ ಒಂದು ಪಕ್ಷ ಬದಲಿಸುವ, ಪಕ್ಷದ ನಾಯಕರನ್ನು ಬ್ಲ್ಯಾಕ್ಮೇಲ್ ಮಾಡುವ ಅನೇಕ ಉದಾಹರಣೆಗಳನ್ನು ನೋಡುತ್ತೇವೆ, ಅದರ ಮಧ್ಯದಲ್ಲಿ ಕೈಲಾಸನಾಥ ಪಾಟೀಲ ಅವರಂತಹ ನಿಷ್ಕಲ್ಮಶ ವ್ಯಕ್ತಿತ್ವ ಸಿಗುವದು ತುಂಬಾ ವಿರಳ. ಅವರೊಬ್ಬರು ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿ.