ಸಮಾನತೆಗೆ ಶ್ರಮಿಸಿದ ಶರಣ ಹರಳಯ್ಯ

ನಿಡಸೋಸಿ ಗ್ರಾಮದಲ್ಲಿ ಹರಳಯ್ಯ ಸಮುದಾಯ ಭವನಕ್ಕೆ ಶಾಸಕ ನಿಖಿಲ ಕತ್ತಿ ಚಾಲನೆ ನೀಡಿದರು. ದುಂಡಪ್ಪ ಹೆದ್ದೂರಿ, ಪ್ರಶಾಂತ ಪಾಟೀಲ ಇತರರಿದ್ದರು.
ನಿಡಸೋಸಿ ಗ್ರಾಮದಲ್ಲಿ ಹರಳಯ್ಯ ಸಮುದಾಯ ಭವನಕ್ಕೆ ಶಾಸಕ ನಿಖಿಲ ಕತ್ತಿ ಚಾಲನೆ ನೀಡಿದರು. ದುಂಡಪ್ಪ ಹೆದ್ದೂರಿ, ಪ್ರಶಾಂತ ಪಾಟೀಲ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಸಂಕೇಶ್ವರ
ಸಮಾಜದಲ್ಲಿರುವ ಜಾತಿಯತೆ ತೊಲಗಿಸಿ ಸಮಾನತೆ ಮೂಡಿಸಲು ಶರಣ ಸಮಗಾರ ಹರಳಯ್ಯ ಸೇರಿ ಅನೇಕ ಶರಣರು ತಮ್ಮಬದುಕು ಮುಡಿಪಾಗಿಟ್ಟಿದ್ದಾರೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಸಮೀಪದ ನಿಡಸೋಸಿ ಗ್ರಾಮದಲ್ಲಿ ಹರಳಯ್ಯ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, 12ನೇ ಶತಮಾನದ ಶರಣರ ಸಂದೇಶದಂತೆ ಎಲ್ಲ ಸಮುದಾಯಗಳು ಸಮನ್ವಯದಿಂದ ಬದುಕು ಸಾಗಿಸುವ ಮೂಲಕ ಅವರ ಆದರ್ಶಗಳನ್ನು ಪರಿಪಾಲಿಸಬೇಕಿದೆ ಎಂದರು.
ಸಮುದಾಯದ ಜನರ ಬೇಡಿಕೆಯಂತೆ ಶಾಸಕರ ಅನುದಾನದಡಿ 5 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಈ ಭವನ ಉತ್ತಮ ಕಾರ್ಯಗಳಿಗೆ ಉಪಯೋಗವಾಗಬೇಕು ಎಂದರು.
ಇದೇ ಸಂದರ್ಭದಲ್ಲಿ 5 ಲಕ್ಷ ವೆಚ್ಚದಲ್ಲಿ ಕಾಡಸಿದ್ಧೇಶ್ವರ ಸಮುದಾಯ ಭವನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಧುರೀಣ ದುಂಡಪ್ಪಾ ಹೆದ್ದೂರಿ, ಪ್ರಶಾಂತ ಪಾಟೀಲ, ಮಾಜಿ ತಾಪಂ ಸದಸ್ಯರಾದ ಅಣ್ಣಪ್ಪಾ ದೊಡಮನಿ, ದುರದುಂಡಿ ಕೆಂಗಾರ, ಸಂಗಮ ಶುಗರ್ಸ್ ನಿರ್ದೇಶಕ ಸುಭಾಷ ಪಾಟೀಲ, ಸುನೀಲ ತನೋಡಿ, ಮಲ್ಲಯ್ಯ ಕಾಡದೇವರಮಠ, ಬಾಬು ಠಬ್ಬನ್ನವ, ಮಾರುತಿ ಪಾಂಡವ, ಶ್ರೀನಿವಾಸ ಗಡಕರಿ, ಮಹಾಂತೇಶ ಕಮತೆ, ಉಮೇಶ ಪಾಟೀಲ, ಅಡವಯ್ಯ ಕಮತೆ, ಶಂಕರ ಮಾದನ್ನವರ, ರವಿ ಕಾರತಗಿ, ಪಿಡಿಒ ಚಂದ್ರಪ್ಪ ಗುಡದರಿ, ಅಭಿಯಂತ ಶಶಿಧರ ಭೂಸಗೋಳ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net