ಹಗರಿಬೊಮ್ಮನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮವನ್ನು ಶಾಸಕ ಕೆ.ನೇಮಿರಾಜ್ ನಾಯ್ಕ ಉದ್ಘಾಟಿಸಿದರು. ಪ್ರಾಂಶುಪಾಲ ಎಸ್.ಕೆ.ಬಸವರಾಜ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಸಿದ್ಧರಾಜು, ಟಿಎಪಿಸಿಎಂಎಸ್ ನಿರ್ದೇಶಕ ನೆರೆಗಲ್ ಬಸವರಾಜ, ಬ್ಯಾಟಿ ನಾಗರಾಜ್, ರಾಹುಲ್ ನಾಯ್ಕ ಇದ್ದರು.
ಹಗರಿಬೊಮ್ಮನಹಳ್ಳಿ: ತಂದೆ-ತಾಯಿ ಆಸೆ, ಆಕಾಂಕ್ಷೆಗಳನ್ನು ಈಡೇರಿಸಲು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ಜೀವನ ರೂಪಿಸಿಕೊಳ್ಳಬೇಕೆಂದು ಶಾಸಕ ಕೆ.ನೇಮಿರಾಜ್ ನಾಯ್ಕ ತಿಳಿಸಿದರು.
ಪಟ್ಟಣದ ಗಂಗಾವತಿ ವೆಂಕಟರಮಣ ಪದ್ಮಾವತಿ ಪಂಚರತ್ನಮ್ಮನವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಸ್.ಕೆ.ಬಸವರಾಜ ಮಾತನಾಡಿ, ಶಿಕ್ಷಣ ನಿರಂತರ ಪ್ರಕ್ರಿಯೆಯಾಗಿದ್ದು, ಸತತ ಅಧ್ಯಯನದಲ್ಲಿ ತೊಡಗುವ ಮೂಲಕ ಯಶಸ್ಸು ಸಾಧಿಸಬೇಕೆಂದರು.
ಉಪನ್ಯಾಸಕರಾದ ಪ್ರಶಾಂತ ಮೋರೆ, ಡಾ.ಎಂ.ಮಲ್ಲಿಕಾರ್ಜುನ, ಬಿ.ಸುರೇಶ, ವೀರೇಶ ಬಡಿಗೇರ್, ಪ್ರೀತಿ, ವಸಂತ ಕುಮಾರ್, ರಾಹುಲ್, ಈಶ್ವರ, ಡಾ.ಎ.ಕೆ.ಬಸವರಾಜ್, ಗಜೇಂದ್ರಿ, ಸಿ.ಎಂ.ಶ್ರೀನಿವಾಸ, ಅತಿಥಿ ಉಪನ್ಯಾಸಕರು, ಸಿಬ್ಬಂದಿ ಇದ್ದರು.