ಅರಸೀಕೆರೆ: ನಗರದ ಕಂತೇನಹಳ್ಳಿ ಬಡಾವಣೆ ಯಲ್ಲಿರುವ ಶ್ರೀ ಶನೈಶ್ಚರಸ್ವಾಮಿ ದೇಗುಲದಲ್ಲಿ ಶನೈಶ್ಚರಸ್ವಾಮಿ ಜಯಂತಿಯ ಅಂಗವಾಗಿ ಮೇ 16 ರಂದು ಲೋಕ ಕಲ್ಯಾಣಾರ್ಥವಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ. ನವಗ್ರಹ ಹೋಮ ಮತ್ತು ಸುದರ್ಶನ ಹೋಮಗಳು ನಡೆಯಲಿವೆ. ಸಂಪ್ರದಾಯದಂತೆ ದೇವರ ಮೂರ್ತಿಗೆ ತೈಲಾಭಿಷೇಕ, ರುದ್ರಾಭಿಷೇಕ ಮತ್ತು ಪಂಚಾಮೃತ ಅಭಿಷೇಕ ಸಮರ್ಪಿಸಲಾಗುವುದು. ಕ್ಷೇತ್ರದ ನವಗ್ರಹ, ಶ್ರೀ ವಿಘ್ನೇಶ್ವರ, ಶ್ರೀಬ್ರಹ್ಮಲಿಂಗೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮ ಮತ್ತು ಶ್ರೀ ನಾಗರಕಟ್ಟೆಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ಧಾರ್ಮಿಕ ಪೂಜೆಗಳು ಜರುಗಲಿದೆ. ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಪ್ರಧಾನ ಅರ್ಚಕ ಮಂದಾರ್ಥಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.