

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಅಖಿಲ ಭಾರತವೀರಶೈವ ಲಿಂಗಾಯತ ಮಹಾಸಭೆಯ(ಅಭಾವೀಮ)ರಾಷ್ಟ್ರೀಯಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆದಾವಣಗೆರೆಯ ಎಸ್.ಎಸ್.ಗಣೇಶಅವರನ್ನು ನೇಮಕ ಮಾಡಿ ರಾಷ್ಟ್ರೀಯಅಧ್ಯಕ್ಷ ಈಶ್ವರ ಖಂಡ್ರೆ ಆದೇಶಹೊರಡಿಸಿದ್ದಾರೆ.
ಅಭಾವೀಮರಾಷ್ಟ್ರೀಯ ಅಧ್ಯಕ್ಷರಾಗಿ ಸುದೀರ್ಘಅವಧಿಗೆ ಸಂಘಟನೆಯನ್ನು ಮಾಡಿದಡಾ. ಶಾಮನೂರುಶಿವಶಂಕರಪ್ಪ ಅವರ ನಿಧನದಿಂದತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆಅಭಾವೀಮ ಪ್ರಧಾನ ಕಾರ್ಯದರ್ಶಿಯಾಗಿದ್ದಸಚಿವ ಈಶ್ವರ ಖಂಡ್ರೆ ಅವರು ನೇಮಕಗೊಂಡಹಿನ್ನಲೆಯಲ್ಲಿ ಪ್ರಧಾನ ಕಾರ್ಯದರ್ಶಿಹುದ್ದೆ ಖಾಲಿ ಇತ್ತು.ಆ ಸ್ಥಾನಕ್ಕೆಶಾಮನೂರು ಶಿವಶಂಕರಪ್ಪನವರ ಪುತ್ರಎಸ್.ಎಸ್.ಗಣೇಶ್ಅವರನ್ನು ನೇಮಿಸಲಾಗಿದೆ.
ಮಹಾಸಭೆಯಆಡಳಿತಾತ್ಮಕ ಕಾರ್ಯಗಳನ್ನುಇನ್ನಷ್ಟು ಪರಿಣಾಮಕಾರಿಯಾಗಿನಿರ್ವಹಿಸುವ ಉದ್ದೇಶದಿಂದಎಸ್.ಎಸ್.ಗಣೇಶ್ ಅವರನ್ನುಮಹಾಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮುಂದಿನ ಕಾರ್ಯಕಾರಿ ಸಮಿತಿ ಸಭೆಯಅನುಮೋದನೆಗೊಳಪಟ್ಟು ನೇಮಕಮಾಡಲಾಗಿದ್ದು,ಮಹಾಪ್ರಧಾನಕಾರ್ಯದರ್ಶಿಗಳು ಮಹಾಸಭೆಯರಾಷ್ಟ್ರೀಯ ಅಧ್ಯಕ್ಷರ ಮಾರ್ಗದರ್ಶನಮತ್ತು ಮೇಲ್ವಿಚಾರಣೆಯಲ್ಲಿಮಹಾಸಭಾ ಸಂವಿಧಾನ ನಿಯಮ 26ರಂತೆಕರ್ತವ್ಯಗಳನ್ನು ನಿರ್ವಹಿಸುವುದರಜೊತೆಗೆ ಮಹಾಸಭೆಯ ಗುರಿ ಮತ್ತುಧ್ಯೇಯೋದ್ದೇಶಗಳನ್ನು ಅನುಷ್ಠಾನಗೊಳಿಸಲುತಕ್ಷಣದಿಂದ ಕಾರ್ಯಪ್ರವೃತ್ತರಾಗುವಂತೆ ಆದೇಶಪ್ರತಿಯಲ್ಲಿ ಸೂಚಿಸಲಾಗಿದೆ.