ವೀರಶೈವ ಲಿಂಗಾಯತ ಸಮುದಾಯಕ್ಕೆ ಬಾಹುಬಲಿಯಂತಿದ್ದ ಶಾಮನೂರು ಶಿವಶಂಕರಪ್ಪ

94ರ ಇಳಿವಯಸ್ಸಿನಲ್ಲೂ ಸಮಾಜದ ಬಗ್ಗೆ ಕಳಕಳಿ ಹೊಂದಿದ್ದ ಶಾಮನೂರು ಶಿವಶಂಕರಪ್ಪ
94ರ ಇಳಿವಯಸ್ಸಿನಲ್ಲೂ ಸಮಾಜದ ಬಗ್ಗೆ ಕಳಕಳಿ ಹೊಂದಿದ್ದ ಶಾಮನೂರು ಶಿವಶಂಕರಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ವೀರಶೈವ ಲಿಂಗಾಯತ ಸಮುದಾಯದ ಬಾಹುಬಲಿ
  • ಭಕ್ತಿ-ಶ್ರದ್ಧೆಯಿಂದ ಮಠ-ಪೀಠಗಳಿಗೆ ಗೌರವ ನೀಡುತ್ತಿದ್ದ ನಾಯಕ
  • ಶಾಮನೂರು ಶಿವಶಂಕರಪ್ಪನವರ ಸ್ಥಾನ ತುಂಬುವವರಾರು?

ಪ್ರಶಾಂತರಿಪ್ಪನ್​ಪೇಟೆ ಬೆಂಗಳೂರು :ರಾಜ್ಯದ ಮಟ್ಟಿಗೆಅತ್ಯಂತ ಪ್ರಭಲವಾದ ವೀರಶೈವಲಿಂಗಾಯತ ಸಮುದಾಯ, ಸಾಮಾಜಿಕ,ಶೈಕ್ಷಣಿಕ,ಸಾಂಸ್ಕೃತಿಕ ಮತ್ತುರಾಜಕೀಯವಾಗಿ ಗಮನಾರ್ಹ ಪಾತ್ರವನ್ನುವಹಿಸುತ್ತಿದೆ. ವೀರಶೈವಲಿಂಗಾಯತ ಸಮುಯದಾಯದ ಬಲ ಕುಗ್ಗಿಸುವತೆರೆಮರೆಯ ರಾಜಕೀಯ ಷಡ್ಯಂತ್ರಗಳುಆಗಾಗ ನಡೆದಿವೆ, ನಡೆಯುತ್ತಿವೆ. ಆದರೆ ಈ ನಾಡಿನಸರ್ವತೋಮುಖ ಅಭಿವೃದ್ಧಿಗೆ ವೀರಶೈವಲಿಂಗಾಯತ ಸಮುದಾಯದ ಕೊಡುಗೆಯನ್ನುಎಲ್ಲ ಸಮುದಾಯಗಳು ಕೂಡಾ ಮುಕ್ತಕಂಠದಿಂದ ಶ್ಲಾಘಿಸಿವೆ,ಶ್ಲಾಘಿಸುತ್ತಿವೆಎಂಬುದೂ ಅಷ್ಟೆ ಸತ್ಯ. ಇಂತಹಅಖಂಡ ವೀರಶೈವ ಲಿಂಗಾಯತ ಸಮುದಾಯಇಡೀ ದೇಶದ ಉದ್ದಗಲಕ್ಕೂ ಇದ್ದು,ಸಮುದಾಯದ ಪ್ರಾತಿನಿಧಿಕಸಂಸ್ಥೆಯಾಗಿ ಅಖಿಲ ಭಾರತ ವೀರಶೈವಮಹಾಸಭೆ ಶತಮಾನಕ್ಕಿಂತ ಹೆಚ್ಚುಕಾಲದಿಂದ ದುಡಿಯುತ್ತಿದೆ. ಈಸಮುದಾಯದ ಅನೇಕ ಅನರ್ಘ್ಯ ರತ್ನಗಳುಮಹಾಸಭೆಯ ಸಾರಥ್ಯವನ್ನು ವಹಿಸಿಸಮುದಾಯದ ಶ್ರೇಯೋಭಿವೃದ್ಧಿಯನ್ನುಮಾಡಿವೆ. ಅಂತಹಎಲ್ಲ ರತ್ನಗಳಲ್ಲಿ ಕೀರ್ತಿಕಲಶದಂತೆ ಬೆಳಗಿ, ಮರೆಯಾದಮಾಣಿಕ್ಯ ಶಾಮನೂರು ಶಿವಶಂಕರಪ್ಪ.

2025ರಡಿ.14 ಒಂದರ್ಥದಲ್ಲಿವೀರಶೈವ ಲಿಂಗಾಯತ ಸಮುದಾಯದಇತಿಹಾಸದಲ್ಲಿ ಅತ್ಯಂತ ಧಾರುಣಮತ್ತು ಕರಾಳ ದಿನ ಎಂದರೆ ಅದುಅತಿಶಯೋಕ್ತಿ ಆಗಲಾರದು. ಕಾರಣ 94ರ ಇಳಿವಯಸ್ಸಿನಲ್ಲಿದ್ದರೂತಮ್ಮ ಉಸಿರಿನ ಕೊನೇವರೆಗೂ ಸಮುದಾಯದಒಗ್ಗಟ್ಟು, ಸಂಘಟನೆ,ಸಮನ್ವಯಕ್ಕಾಗಿಹಿಂದಿನ ಮಹಾಸಭೆಯ ಎಲ್ಲ ಅಧ್ಯಕ್ಷರಿಗಿಂತದಿಟ್ಟವಾಗಿ ದುಡಿದ ದಾವಣಗೆರೆಯದಣಿಯು ಇಹಲೋಕ ಯಾತ್ರೆ ಮುಗಿಸಿದಅಂತಿಮ ದಿನ. ಒಂದುಕಾಲಕ್ಕೆ ವೀರಶೈವ ಲಿಂಗಾಯತ ಸಮುದಾಯಸಂಘಟನೆಯ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಬಹುಶ್ಯ ಯಾವುದೇಸಂಘಟನೆ ಉತ್ತಮ ಸ್ಥಿತಿಯಲ್ಲಿದ್ದಾಗಅದನ್ನು ಮುನ್ನಡೆಸುವುದು ಹೆಚ್ಚೇನುಕಷ್ಟವಲ್ಲ. ಆದರೆನಾಡಿನ ಬೃಹತ್ ಸಮುದಾಯವೊಂದನ್ನುಪ್ರತಿನಿಧಿಸುವ ಅಖಿಲ ಭಾರತ ವೀರಶೈವಮಹಾಸಭೆಗೆ ಒಂದರ್ಥದಲ್ಲಿ ಸವಾಲುಎದುರಾದ ಕಾಲಘಟ್ಟದಲ್ಲಿ ಅದನ್ನುಸಮರ್ಥವಾಗಿ ಮುನ್ನಡೆಸಿ,ಸಮುದಾಯವನ್ನುವಿಘಟಿಸುವ ವಿನಾಶಕಾರಿ ಚಿಂತನೆಯವಿಕೃತ ಮನಸ್ಥಿತಿಯ ಜನರಿಗೆವೀರಾವೇಶದಿಂದ ಉತ್ತರ ನೀಡಿದನಿಜವೀರಶೈವರೆಂದರೆ ಅದು ಕೊಡುಗೈದಾನಿಶಿವಶಂಕರಪ್ಪನವರು. ಧರ್ಮಮತ್ತು ದಾಸೋಹ ಈ ಪದಕ್ಕೆ ತಮ್ಮಜೀವನವನ್ನೇ ಉದಾಹರಣೆಯಾಗಿಸಿದಶಾಮನೂರು ಶಿವಶಂಕರಪ್ಪನವರನಿಸ್ವಾರ್ಥ ಕಾಳಜಿ, ನಿಷ್ಟೂರಮನೋಧರ್ಮದ ಹಿಂದಿನ ಶಕ್ತಿ ಅವರಿಗಿದ್ದಧರ್ಮಪ್ರಜ್ಞೆ. ಎಂದಿಗೂಯಾವುದೇ ಕಾರಣಕ್ಕೂ ಧರ್ಮವನ್ನುಸ್ವಾರ್ಥಕ್ಕೆ ಬಳಸಿಕೊಳ್ಳದ ಅವರನ್ಯಾಯನಿಷ್ಟೂರತೆ; ತೆರೆಮರೆಯಲ್ಲಿಸಮಾಜ ಒಡೆಯುವ ಧರ್ಮದ್ರೋಹಿಗಳಸೊಲ್ಲಡಗಿಸುವಲ್ಲಿ ಮುಖ್ಯ ಪಾತ್ರನಿರ್ವಹಿಸಿತ್ತು.

ವೀರಶೈವಸಮುದಾಯವು ಸನಾತನ ಸಂಸ್ಕೃತಿ,ಹಿನ್ನೆಲೆ,ಸಂಪ್ರದಾಯ, ಆಚರಣೆಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡಮತ ಪ್ರಕಾರ. ಹಿಂದೂಸಂಸ್ಕೃತಿಯೇ ಇದಕ್ಕೆ ಪ್ರಧಾನಜೀವಾಳವಾಗಿದ್ದರೂ, ಸಮುದಾಯದವಿಶಿಷ್ಟ ಸೈದ್ಧಾಂತಿಕ ಚಿಂತನೆಮತ್ತು ಆಚರಣೆಗಳಿಗನುಗುಣವಾಗಿಪ್ರತ್ಯೇಕ ಧರ್ಮದ ಮಾನ್ಯತೆಯನ್ನುನೀಡಬೇಕೆಂಬ ಬೇಡಿಕೆ ಸ್ವಾತಂತ್ರ್ಯಪೂರ್ವದಲ್ಲೇ ಆಡಳಿತ ನಡೆಸುವವರಮುಂದೆ ಮಂಡಿಸಲಾಗಿದೆ. ಆಕೂಗೂ ಅನುಷ್ಠಾನವೂಗೊಳ್ಳದೆ,ತಿರಸ್ಕಾರವೂಗೊಳ್ಳದೆಅತಂತ್ರ ಸ್ಥಿತಿಯಲ್ಲೇ ಮುಂದುವರೆದಸಂದರ್ಭದಲ್ಲಿ ಸಮುದಾಯದೊಳಗೆಬಿರುಕು ಮೂಡಿಸುವ ವ್ಯವಸ್ಥಿತಹುನ್ನಾರ 2017-18ರಲ್ಲಿ ಈ ನಾಡಿನಲ್ಲಿ ನಡೆದಿತ್ತು. ಆಗ ಸಮಾಜದಲ್ಲಿಭೀಷ್ಮನಂತೆ, ಪಿತಾಮಹನಸ್ಥಾನದಲ್ಲಿದ್ದ ಶಾಮನೂರುಶಿವಶಂಕರಪ್ಪನವರು, ರಾಜಕೀಯ,ಪಕ್ಷ, ಅಧಿಕಾರಎಲ್ಲವನ್ನೂ ಮೀರಿ ಸೆಟೆದು ನಿಂತಪರಿ ಈ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂಕೂಡಾ ಸ್ವಾಭಿಮಾನವನ್ನುಜಾಗೃತಗೊಳಿಸಿತ್ತು. ರಾಜ್ಯದಮುಖ್ಯಮಂತ್ರಿಯನ್ನು ಬಿಡದೆಪ್ರತ್ಯೇಕವಾದವನ್ನು ಬೆಂಬಲಿಸುವಮಂತ್ರಿಗಳು, ಜನಪ್ರತಿನಿಧಿಗಳು,ಅಧಿಕಾರಿಗಳು,ಮಾಜಿಗಳು ಹಾಗೂಬೀಗರು-ಬಿಜ್ಜರನ್ನುಬಿಡದೆ ತಮ್ಮ ಹರಿತವಾದ ಮಾತಿನಚಾಟಿ ಬೀಸಿದ್ದು ಯಾರು ಮರೆಯುವಂತಿಲ್ಲ.ಸಮಾಜ ಮತ್ತ ಧರ್ಮದವಿಷಯ ಬಂದಾಗ ಯಾವುದೇ ರಾಗ-ದ್ವೇಷಗಳಿಲ್ಲದೆನಿಷ್ಕಲ್ಮಶವಾಗಿ ನಡೆದುಕೊಂಡಅಪರೂಪದ ವ್ಯಕ್ತಿ. ಇದ್ದಿದ್ದನ್ನುಇದ್ದ ಹಾಗೆ ಹೇಳುವ ವ್ಯಕ್ತಿತ್ವಲಾಭ-ನಷ್ಟವನ್ನುಪರಿಗಣಿಸಿ ನಿರ್ಧಾರವಾಗುವ ಇಂದಿನದಿನಮಾನಗಳಲ್ಲಿ ಶರಣರ ಹೇಳಿದಂತೆ "ನುಡಿದಂತೆನಡೆ, ಇದೇ ಜನ್ಮಕಡೆ" ಎಂಬಮಾತಿಗೆ ಅನ್ವರ್ಥವಾಗಿ ಬದುಕಿದವರುಶಾಮನೂರು ಶಿವಶಂಕರಪ್ಪ.

"ಸಿಎಂಗೆ ಸನ್ಮಾನ ಮಾಡಿದ್ದೇ ತಪ್ಪಾಯ್ತು"

2017ರಏ.29ರಂದು ರಾಜ್ಯದಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ಸರ್ಕಾರ ಒಂದು ಮಹತ್ವದ ಆದೇಶಕ್ಕೆಅಂಕಿತ ಹಾಕಿತ್ತು. ಜಗತ್ತಿಗೆಪ್ರಜಾಪ್ರಭುತ್ವದ ಪರಿಕಲ್ಪನೆಯನ್ನುಸಾರಿದ ಜಗಜ್ಯೋತಿ ಬಸವೇಶ್ವರರಭಾವಚಿತ್ರವನ್ನು ಎಲ್ಲ ಸರ್ಕಾರಿಕಚೇರಿಗಳಲ್ಲಿ ಹಾಕುವಂತೆ ಸರ್ಕಾರಆದೇಶ ಹೊರಡಿಸಿತ್ತು. ಇದಕ್ಕೂಮುನ್ನವೇ ನೆರೆಯ ತೆಲಂಗಾಣದಲ್ಲಿಇಂತಹದ್ದೊಂದು ಆದೇಶ ಮಾಡಿದ್ದುಇತಿಹಾಸ. ಸರ್ಕಾರದಆದೇಶ ಬಸವಣ್ಣನವರನ್ನು ಗೌರವಿಸುವಸಮುದಾಯದಲ್ಲಿ ಸಂತಸ ಮೂಡಿಸಿತ್ತು.ಈ ಕಾರಣಕ್ಕಾಗಿಯೇವೀರಶೈವ ಮಹಾಸಭೆ ಸಿದ್ಧರಾಮಯ್ಯನವರಿಗೆಒಂದು ಸನ್ಮಾನವನ್ನು ಏರ್ಪಡಿಸಿತ್ತು. ಈ ಅಭಿನಂದನಾ ಸಭೆಯೇಸಮುದಾಯದ ಪ್ರತ್ಯೇಕತೆ ಕೂಗಿಗೆನಾಂದಿಯಾಗಿದ್ದು ವಿಪರ್ಯಾಸ. ಇದನ್ನು ತಡವಾಗಿಅರ್ಥೈಸಿಕೊಂಡ ಶಾಮನೂರುಶಿವಶಂಕರಪ್ಪನವರು ಸ್ವತಃ ಅದನ್ನುಬಹಿರಂಗವಾಗಿಯೇ ಹೇಳಿ, ರಾಜ್ಯದಮುಖ್ಯಮಂತ್ರಿಯನ್ನು ಸನ್ಮಾನಿಸಿದ್ದಕ್ಕೆಪಶ್ಚಾತ್ತಾಪ ವ್ಯಕ್ತಪಡಿಸಿದ್ದರು.ಇಂತಹದ್ದೊಂದುಧೈರ್ಯ ಬಹುಶ್ಯ ಈ ನಾಡಿನ ಮತ್ತಾವುದೇಸ್ವಪಕ್ಷೀಯ ನಾಯಕನಲ್ಲೂ ಕಾಣಲುಸಾಧ್ಯವಿಲ್ಲ. ಮಾತ್ರವಲ್ಲಯಾರು ಎಷ್ಟೇ ಕಿರುಚಾಡಿದರೂ,ಅರಚಾಡಿದರೂ ವೀರಶೈವಲಿಂಗಾಯತ ಎಂದೆಂದೂ ಒಂದೇ ಎಂದುಘಂಟಾಘೋಷವಾಗಿ ಹೇಳಿ ಸಮಾಜವಿಘಟಿಸುವವರಿಗೆಲ್ಲರಿಗೂ ಯಾವುದೇಫಿಲ್ಟರ್ ಇಲ್ಲದ ಭಾಷೆಯಲ್ಲಿಬಿಸಿ ಬಿಸಿ ಬೆಣ್ಣೆದೋಸೆತಿನ್ನಿಸಿದ್ದರು.

ಇತ್ತೀಚೆಗೆ2023ರಲ್ಲಿ ನಡೆದಸಾರ್ವತ್ರಿಕ ಚುನಾವಣೆಯಲ್ಲಿಮತ್ತೆ ಆಯ್ಕೆಯಾಗಿ ಇಡೀ ದೇಶದಲ್ಲೇಹಿರಿಯ ಶಾಸಕನೆಂಬ ಹೆಗ್ಗಳಿಕೆಗೆಪಾತ್ರವಾಗಿದ್ದ ಶಾಮನೂರು;ತಮ್ಮದೇ ಪಕ್ಷದಸರ್ಕಾರ ಅಧಿಕಾರದಲ್ಲಿದ್ದು,ಸಮುದಾಯದ ಐಎಎಸ್,ಐಪಿಎಸ್ ಅಧಿಕಾರಿಗಳಿಗೆಆಯಕಟ್ಟಿನ ಹುದ್ದೆಗಳನ್ನು ನೀಡದೆವೀರಶೈವ ಲಿಂಗಾಯತರನ್ನುಕಡೆಗಣಿಸಲಾಗುತ್ತಿದೆ ಎಂದುಘರ್ಜಿಸಿದರು. ಈನಡುವೆ ಸರ್ಕಾರ 10 ವರ್ಷದಹಿಂದಿನ ಜಾತಿಗಣತಿ ವರದಿಯನ್ನೇಜಾರಿಗೊಳಿಸಲು ಸಿದ್ಧತೆ ನಡೆಸಿದಾಗ;ಕಟ್ಟುನಿಟ್ಟಾಗಿಅದನ್ನು ವಿರೋಧಿಸಿದರು.ಮಾತ್ರವಲ್ಲ ಹೊಸದಾಗಿಜನಗಣತಿ ಮಾಡುವ ನಿರ್ಧಾರ ಮಾಡಿದನಂತರವೂ ಸಮುದಾಯಕ್ಕೆ ಸ್ಪಷ್ಟಸಂದೇಶ ನೀಡಿ ಒಗ್ಗಟ್ಟಿನೊಂದಿಗೆಏಕತೆಯನ್ನು ಸಾರಿದರು.

ಮಠ-ಪೀಠಗಳಬಗ್ಗೆ ಅಪಾರ ಭಕ್ತಿ-ಶ್ರದ್ಧೆ.

ಇಡೀದೇಶದಲ್ಲಿ ಕರ್ನಾಟಕವು ಮಠ ಸಂಸ್ಕೃತಿಯರಾಜಧಾನಿ. ಅಂತಹಮಠ-ಪೀಠಗಳ ಬಗ್ಗೆ,ತನು-ಮನ-ಧನತ್ರಿಕರಣ ಶುದ್ಧ ಭಕ್ತಿ-ಶ್ರದ್ಧೆಯನ್ನುಇರಿಸಿಕೊಂಡಿದ್ದ ಅಪರೂಪದ ರಾಜಕಾರಣಿಶಾಮನೂರು ಶಿವಶಂಕರಪ್ಪ.ಸಾಮಾನ್ಯವಾಗಿರಾಜಕಾರಣಿಗಳು ತಮ್ಮ ಸ್ವಾರ್ಥಸಾಧನೆಗೆ, ಓಟ್ಬ್ಯಾಂಕಿಗೆ ಅಥವಾ ಸಾಂದರ್ಭಿಕವಾಗಿಎಲ್ಲರು ಮಠಾಧೀಶರು, ಪೀಠಾಧೀಶರಬಗ್ಗೆ ಗೌರವ ವ್ಯಕ್ತ ಮಾಡುತ್ತಾರೆ. ಆದರೆ ಯಾವ ಅಪೇಕ್ಷೆಇಲ್ಲದೆ ಕೇವಲ ಭಕ್ತಿ-ಶ್ರದ್ಧೆಗಾಗಿಮಠಾಧೀಶರನ್ನು ಅಂತಃಕರಣಪೂರ್ವಕವಾಗಿನಮಸ್ಕರಿಸುತ್ತಿದ್ದ ಏಕೈಕರಾಜಕಾರಣಿ ಶಾಮನೂರು. ವಯೋಸಹಜ ದೈಹಿಕ ಸಮಸ್ಯೆಗಳಿದ್ದಾಗ್ಯೂಪಿಠಾಧಿಪತಿಗಳಿಗೆ ಹಣೆ ಹಚ್ಚಿನಮಸ್ಕರಿಸುವ ಸಂಸ್ಕಾರವಂತರಾಗಿದ್ದರು. ಧರ್ಮಾಚರಣೆಗಳಬಗ್ಗೆ ಕೇವಲ ಉಪದೇಶ ಮಾಡುವವರನಡುವೆ ಸ್ವತಃ ಇಷ್ಟಲಿಂಗ ಪೂಜೆಮತ್ತಿತರ ಆಚರಣೆಗಳನ್ನು ನಿತ್ಯಚಾಚೂ ತಪ್ಪದೇ ಮಾಡುವ ಮೂಲಕ ಇತರರಿಗೆಮಾದರಿಯಾಗಿದ್ದರು. ಅದರಲ್ಲೂವಿಶೇಷವಾಗಿ ವೀರಶೈವ ಧರ್ಮದ ಸನಾತನಪಂಚಪೀಠಗಳ ಬಗ್ಗೆ ವಿಶೇಷ ಭಕ್ತಿಇರಿಸಿಕೊಂಡಿದ್ದ ಶಿವಶಂಕರಪ್ಪನವರಸಂಕಲ್ಪ ಸಾಕಾರಕ್ಕೆ ಸಾಕ್ಷಿಇತ್ತೀಚೆಗೆ ದಾವಣಗೆರೆಯಲ್ಲಿನಡೆದಿದ್ದ ಜಗದ್ಗುರು ಪಂಚಪೀಠಾಧೀಶರಮತ್ತು ಶಿವಾಚಾರ್ಯರ ಶೃಂಗ ಸಮ್ಮೇಳನ.ಜಾತಿ ಗಣತಿಯ ಹೆಸರಲ್ಲಿಸಮುದಾಯದ ಗೊಂದಲಗಳಿಗೆ ಆ ಸಮ್ಮೇಳನಸ್ಪಷ್ಟ ದಿಕ್ಸೂಚಿಯಾಗಿತ್ತು.ಬಹುತೇಕ ಶಾಮನೂರುಅವರು ಪೂಜಿಸದ ದೇವರು, ಭೇಟಿನೀಡದ ಮಠ-ಮಂದಿರಗಳೇಇಲ್ಲ ಎನ್ನಬಹುದು. ಮಾತ್ರವಲ್ಲಎಲ್ಲ ದೇವಾಲಯಗಳ ಜೀರ್ಣೋದ್ಧಾರಕ್ಕೂಯತೇಚ್ಛವಾಗಿ ದೇಣಿಗೆ ನೀಡಿದಧರ್ಮನಾಯಕ ಅವರು. ಇಂತಹಅಪರೂಪದ ವ್ಯಕ್ತಿ ವೀರಶೈವ ಸಮುದಾಯದಪಾಲಿಗೆ ಬಾಹುಬಲಿಯಂತಿದ್ದರು.ಬಾಹು ಎಂದರೆ ಕೈ,ಬಲಿ ಎಂದರೆಶಕ್ತಿಯುಳ್ಳವನು ಎಂದರ್ಥ.ಬಾಹುಬಲಿ ಎಂದರೆಸಮಾಜಕ್ಕಾಗಿ ಶಕ್ತಿಶಾಲಿ ಕೈಗಳನ್ನುಹೊಂದಿದ್ದವರು ಎನ್ನಬಹುದು.ಆದರೆ ಅವರಿಂದ ತೆರವಾದಸ್ಥಾನವನ್ನು ತುಂಬುವವರಾರು?ಎಂಬುದು ಮಾತ್ರದೊಡ್ಡ ಪ್ರಶ್ನೆ. ಪ್ರಶ್ನೆಗಳುಎಷ್ಟೇ ಇದ್ದರೂ ಉತ್ತರ ಒಂದೆ.ಕಾಲದ ಕರೆಗೆ ಎಲ್ಲರುತಲೆಬಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net