ಬಡವರಿಗಾಗಿ ಶಾದಿಮಹಲ್ ನಿರ್ಮಾಣ

ಕೆರೂರ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶಾದಿಮಹಲ್ ಕಟ್ಟಡಕ್ಕೆ ಅನುದಾನ ಮಂಜೂರು ನೀಡಿದ ನಿಮಿತ್ತ ಅಂಜುಮನ್ ಸಂಸ್ಥೆ ವತಿಯಿಂದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರನ್ನು ಸನ್ಮಾನಿಸಿದರು. ಅಂಜುಮನ್ ಕಮಿಟಿ ಕಾರ್ಯದರ್ಶಿ ಉಮರಾರೂಕ ಪೆಂಡಾರಿ, ಮೋದಿನಸಾಬ ದೊಡಕಟ್ಟಿ, ಇಸ್ಮಾಯಿಲ್ ಮುಲ್ಲಾ ಇತರರಿದ್ದರು.
ಕೆರೂರ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶಾದಿಮಹಲ್ ಕಟ್ಟಡಕ್ಕೆ ಅನುದಾನ ಮಂಜೂರು ನೀಡಿದ ನಿಮಿತ್ತ ಅಂಜುಮನ್ ಸಂಸ್ಥೆ ವತಿಯಿಂದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರನ್ನು ಸನ್ಮಾನಿಸಿದರು. ಅಂಜುಮನ್ ಕಮಿಟಿ ಕಾರ್ಯದರ್ಶಿ ಉಮರಾರೂಕ ಪೆಂಡಾರಿ, ಮೋದಿನಸಾಬ ದೊಡಕಟ್ಟಿ, ಇಸ್ಮಾಯಿಲ್ ಮುಲ್ಲಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿಕೆ
  • ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕೆ ಒತ್ತು
ಕೆರೂರ: ಶಾದಿ ಮಹಲ್ ಕಟ್ಟಡ ಕೇವಲ ಬಾಡಿಗೆಗಾಗಿ ನಿರ್ಮಾಣವಾಗಬಾರದು. ನಾವು ನೀಡುವ ಅನುದಾನದಿಂದ ಸಾವಿರಾರು ಬಡ ಕುಟುಂಬಗಳಿಗೆ ಅನುಕೂಲವಾಗಲಿ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಪಟ್ಟಣದ ಅಂಜುಮನ್ ಕಮಿಟಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಟ್ಟಣದ ಕಿಲ್ಲಾ ಪೇಟೆಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಬೃಹತ್ ಶಾದಿ ಮಹಲ್ ಕಟ್ಟಡ ನಿರ್ಮಾಣವಾಗಲಿದ್ದು, ಸಮಾಜಕ್ಕೆ ಇದರ ಸದುಪಯೋಗವಾಗಲಿ. ಮತ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ 40 ಕೋಟಿ ರೂ. ಅನುದಾನ ನೀಡಲಾಗಿದೆ. ಅನುದಾನದಲ್ಲಿ ಹೆಚ್ಚಿನ ಒತ್ತು ಶಿಕ್ಷಣಕ್ಕೆ ನೀಡಿದ್ದೇನೆ. ಅಲ್ಪಸಂಖ್ಯಾತರ ಮಕ್ಕಳು ಗುಣಮಟ್ಟದ ಶಿಕ್ಷಣ ಕಲಿತರೆ, ನೂರಾರು ಶಾದಿಮಹಲ್ ಕಟ್ಟುವ ಶಕ್ತಿ ಅವರಲ್ಲಿ ಬರುತ್ತದೆ ಎಂದು ಹೇಳಿದರು.
ಅಂಜುಮನ್ ಕಮಿಟಿ ಕಾರ್ಯದರ್ಶಿ ಉಮರಾರೂಕ ಪೆಂಡಾರಿ ಮಾತನಾಡಿ, ಸುಮಾರು ವರ್ಷಗಳಿಂದ ಕನಸಾಗಿ ಉಳಿದಿದ್ದ ಶಾದಿಮಹಲ್ ಕಟ್ಟಡ ಶಾಸಕರ ಸತತ ಪ್ರಯತ್ನದಿಂದ ನನಸಾಗಿದೆ ಎಂದು ಹೇಳಿದರು.
ಅಂಜುಮನ್ ಕಮಿಟಿ ಅಧ್ಯಕ್ಷ ಮೋದಿನಸಾಬ ದೊಡಕಟ್ಟಿ, ಉಪಾಧ್ಯಕ್ಷ ಇಸ್ಮಾಯಿಲ್ ಮುಲ್ಲಾ, ಕಾರ್ಯದರ್ಶಿ ಉಮರ್ ಪೆಂಡಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ. ಎಂ.ಜಿ. ಕಿತ್ತಲಿ, ಉಸ್ಮಾನ ಅತ್ತಾರ, ಉಸ್ಮಾನ ಮುಲ್ಲಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ, ಪ.ಪಂ. ಇಂಜಿನಿಯರ್ ಎಂ.ಐ. ಹೊಸಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net