ರಸ್ತೆ ಮೇಲೆ ಹರಿಯುತ್ತಿದೆ ಚರಂಡಿ ತ್ಯಾಜ್ಯ / ANEKAL

ರಾಮಕೃಷ್ಣ ದೇವಾಲಯದ ಗೋಪುರದ ಬಳಿ ಚರಂಡಿ ತುಂಬಿ ರಸ್ತೆಯ ಮೇಲೆ ಹರಿಯುತ್ತಿರುವ ನೀರು.
ರಾಮಕೃಷ್ಣ ದೇವಾಲಯದ ಗೋಪುರದ ಬಳಿ ಚರಂಡಿ ತುಂಬಿ ರಸ್ತೆಯ ಮೇಲೆ ಹರಿಯುತ್ತಿರುವ ನೀರು.
Published on
ಆನೇಕಲ್​ : ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದರೂ ಸರಿಪಡಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ರ್ನಿಲಕ್ಷ$್ಯ ವಹಿಸಿರುವುದು ಎಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಆನೇಕಲ್​ ತಾಲೂಕಿನ ರಾಮಕೃಷ್ಣಪುರ ಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಾಲಯದ ಮುಖ್ಯದ್ವಾರದ ಬಳಿ ಕಳೆದ ಒಂದು ವಾರದಿಂದ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಮರಸೂರು ಮಾರ್ಗವಾಗಿ ಬರುತ್ತಿರುವ ಕೊಳಚೆ ಹರಿಯಲು ಚರಂಡಿ ವ್ಯವಸ್ಥೆ ಇಲ್ಲ. ಇಗ್ಗಲೂರು ಬಳಿ ಖಾಸಗಿ ಕಂಪನಿ, ಚರಂಡಿ ಮುಚ್ಚಿ ಕಂಪನಿಯ ಗೇಟ್​ ಹಾಗೂ ರಸ್ತೆ ನಿಮಾರ್ಣ ಮಾಡಿದೆ. ಇದರಿಂದಾಗಿ ನೀರು ಹೋಗದೆ ದೇವಾಲಯದ ಮುಖ್ಯದ್ವಾರದ ಬಳಿ ಸಂಗ್ರಹವಾಗುತ್ತಿದೆ. ಅದು ಉಕ್ಕಿ ಇಗ್ಗಲೂರು ಮುಖ್ಯರಸ್ತೆಯಲ್ಲೂ ಹರಿಯುತ್ತಿದೆ. ಇದರ ಮೇಲೆಯೇ ಸಂಚಾರ ಮಾಡಬೇಕಾದ ಅನಿವಾರ್ಯತೆ ಸಾರ್ವಜನಿಕರಿಗೆ ಎದುರಾಗಿದೆ. ಕಾರು ಹಾಗೂ ಬಸ್​&ಲಾರಿಗಳು ಸಂಚಾರ ಮಾಡುವ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿ ಓಡಾಡುವ ದ್ವಿಚಕ್ರ ವಾಹನ ಸವಾರರ ಮೇಲೆ ಕೊಳಚೆ ನೀರಿನ ಅಭಿಷೇಕವಾಗುತ್ತಿದೆ. ಪ್ರತಿದಿನ ದೇವಾಲಯಕ್ಕೆ ಹೋಗುವವರು ಈ ತ್ಯಾಜ್ಯ ಮೆಟ್ಟಿಕೊಂಡು ಹೋಗುವ ದುಸ್ಥಿತಿ ಇದೆ.
ಆನೇಕಲ್​ ಚಂದಾಪುರ ಮುಖ್ಯರಸ್ತೆಯ ಸೂರ್ಯ ನಗರದಿಂದ ಬ್ಯಾಗಡದೇನಹಳ್ಳಿವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಆದರೆ, ಚರಂಡಿ ವ್ಯವಸ್ಥೆ ಅಲ್ಲಿಯೂ ಸರಿಯಾಗಿ ಆಗಿಲ್ಲ. ರಸ್ತೆಯ ಅಕ್ಕಪಕ್ಕದಲ್ಲಿ ಹೋಗದೆ ರಸ್ತೆ ಮಧ್ಯೆಯೇ ಕೊಳಚೆ ಹರಿಯುತ್ತ್ತಿದೆ. ವಾಹನ ಸವಾರರಿಗೆ ಇದು ನಿತ್ಯ ಕಿರಿಕಿರಿ ಉಂಟುಮಾಡಿದೆ.
ಕಾರ್ಖಾನೆಗಳ ಕೊಳಚೆ ನೀರು-: ರಾಮಕೃಷ್ಣ ದೇವಾಲಯಕ್ಕೆ ಹೋಗುವ ಗೋಪುರದ ಬಳಿ ಅಕ್ಕಪಕ್ಕದಲ್ಲಿರುವ ಕೆಲವು ಬಟ್ಟೆಗೆ ಬಣ್ಣ ಹಾಕುವ ಕಾರ್ಖಾನೆಗಳು ಹಾಗೂ ಖಾಸಗಿ ಬಡಾವಣೆಗಳ ಕೊಳಚೆ ನೀರನ್ನು ಚರಂಡಿಗೆ ಬಿಡುತ್ತಿದ್ದಾರೆ. ಇದರಿಂದಾಗಿ ಸಮಸ್ಯೆ ಎದುರಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ಕೆಲವು ತಿಂಗಳಿಂದ ಕೊಳಚೆ ನೀರು ತುಂಬಿ ಸಮಸ್ಯೆ ಆಗುತ್ತಿದೆ. ದೇವಾಲಯಕ್ಕೆ ಹೋಗುವವರು ಹಾಗೂ ಈ ರಸ್ತೆಯಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು.

— > ಪ್ರದಿಪ್​ ಪವಾರ್​, ಸ್ಥಳಿಯ

ಜನರ ಸಮಸ್ಯೆ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಳ್ಳುವುದಿಲ್ಲ, ರಸ್ತೆಯ ಅಕ್ಕಪಕ್ಕದಲ್ಲಿ ಕೊಳಚೆ ನೀರು ತುಂಬಿ ಗಬ್ಬು ವಾಸನೆ ಬೀರುತ್ತಿದೆ. ಜನ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಬೇಕಿದೆ.

— > ಬಾಲರಾಜು, ಇಗ್ಗಲೂರು ನಿವಾಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net