ಎಸ್‌ಟಿಗೆ ಸೇರಿಸದಿದ್ದರೆ ಉಗ್ರ ಹೋರಾಟ

ಯಾದಗಿರಿ ತಾಲೂಕಿನ ಹೆಡಗಿಮದ್ರಿಯಲ್ಲಿ ಮಂಗಳವಾರ ಹಮ್ಮಿಕೊಂಡ ಸಮಾಜದ ಸಭೆಯಲ್ಲಿ ಕೋಲಿ ಸಮಾಜದ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ್ ಮಾತನಡಿದರು. ಮರೆಪ್ಪ ಪೂಜÁರಿ, ಬಸವರಾಜ ಪೂಜÁರಿ, ಮಲ್ಲಪ್ಪ ತಿರುಪತಿ, ಚಂದಪ್ಪ ದೇವಪ್ಪ, ಯಲ್ಲಪ್ಪ ಸಿದ್ದಪ್ಪ ವಿರೂಪಾಕ್ಷ ಬಸಪ್ಪ ಹನುಮಾನ್, ರಾಮು ಮೈಲಾರಿ, ಮರೆಪ್ಪ, ರೇಣುಕಮ್ಮ, ಶಾಣಮ್ಮ, ಮಾರೆಮ್ಮ, ಸಿದ್ದಮ್ಮ, ಹಂಪಮ್ಮ, ಹನಮವ್ವ, ಕಮಲಮ್ಮ, ಶಾಂತಮ್ಮ, ಮಹಾದೇವಿ ಇತರರಿದ್ದರು.
ಯಾದಗಿರಿ ತಾಲೂಕಿನ ಹೆಡಗಿಮದ್ರಿಯಲ್ಲಿ ಮಂಗಳವಾರ ಹಮ್ಮಿಕೊಂಡ ಸಮಾಜದ ಸಭೆಯಲ್ಲಿ ಕೋಲಿ ಸಮಾಜದ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ್ ಮಾತನಡಿದರು. ಮರೆಪ್ಪ ಪೂಜÁರಿ, ಬಸವರಾಜ ಪೂಜÁರಿ, ಮಲ್ಲಪ್ಪ ತಿರುಪತಿ, ಚಂದಪ್ಪ ದೇವಪ್ಪ, ಯಲ್ಲಪ್ಪ ಸಿದ್ದಪ್ಪ ವಿರೂಪಾಕ್ಷ ಬಸಪ್ಪ ಹನುಮಾನ್, ರಾಮು ಮೈಲಾರಿ, ಮರೆಪ್ಪ, ರೇಣುಕಮ್ಮ, ಶಾಣಮ್ಮ, ಮಾರೆಮ್ಮ, ಸಿದ್ದಮ್ಮ, ಹಂಪಮ್ಮ, ಹನಮವ್ವ, ಕಮಲಮ್ಮ, ಶಾಂತಮ್ಮ, ಮಹಾದೇವಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಘಟನಾ ಕಾರ್ಯದರ್ಶಿ ಮುದ್ನಾಳ್ ಎಚ್ಚರಿಕೆ
  • ಕೋಲಿ ಸಮಾಜದಿಂದ ಬರುವ ಚುನಾವಣೆಯಲ್ಲಿ ತಕ್ಕ ಪಾಠ
ಯಾದಗಿರಿ:

ಕೋಲಿ ಸಮಾಜವನ್ನು ಕೂಡಲೇ ಎಸ್‌ಟಿಗೆ ಸೇರ್ಪಡೆ ಮಾಡದಿದ್ದರೆ ಮುಂಬುರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಅಖಿಲ ಭಾರತೀಯ ಕೋಲಿ ಸಮಾಜದ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ್ ಎಚ್ಚರಿಕೆ ನೀಡಿದರು.

ತಾಲೂಕಿನ ಹೆಡಗಿಮದ್ರಿ ಗ್ರಾಮದಲ್ಲಿ ಶ್ರಾವಣ ಮಾಸ ನಿಮಿತ್ತ ಮಂಗಳವಾರ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯ ಹಾಗೂ ಮಾತಾಮಾಣಿಕೇಶ್ವರಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸೇರಿದ್ದ ಸಮಾಜದ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇನ್ಮುಂದೆ ಕಾಲಹರಣ ಮಾಡಿದೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಕಳೆದ ಮೂವತ್ತು ವರ್ಷಗಳಿಂದ ಈ ಪ್ರಮುಖ ಬೇಡಿಕೆಗಾಗಿ ಹೋರಾಟ ಮಾಡಲಾಗುತ್ತಿದೆ. ಮಾಜಿ ಎಂಎಲ್‌ಸಿ ಮತ್ತು ಕೋಲಿ ಸಮಾಜದ ಅಗ್ರಗಣ್ಯ ನಾಯಕರಾಗಿದ್ದ ದಿ.ವಿಠ್ಠಲ್ ಹೇರೂರ್ ಅವರು ಸತತ ಹೋರಾಟ ಮಾಡುವ ಮೂಲಕ ಇದಕ್ಕೊಂದು ಅಂತಿಮ ರೂಪರೇಷ ನೀಡಿದ್ದರು. ಆಗ ಸರ್ಕಾರಗಳು ಮಾಡುವುದಾಗಿ ಭರವಸೆ ನೀಡಿದ್ದವು ಮತ್ತು ಇಂದಿಗೂ ನೀಡುತ್ತಲ್ಲೇ ಬರುತ್ತಿವೆ. ಆದರೆ ಸಮಾಜದ ಜನರಿಗೆ ಕನ್ನಡಿಯೊಳಿನ ಗಂಟು ಆಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿಯೇ ಕೋಲಿ ಸಮಾಜ ೧೬ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ೯ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಗಳಲ್ಲಿದ್ದರೂ ಸಹ ಕರ್ನಾಟಕದಲ್ಲಿ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಇದುವರೆಗೂ ಯಾವ ಸರ್ಕಾರಗಳಿಂದಲ್ಲೂ ಆಗಿಲ್ಲ. ಕಾರಣ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂದು ಮುದ್ನಾಳ್ ಆಗ್ರಹಿಸಿದರು. ಇನ್ನೂ ಏಳೆಂಟು ತಿಂಗಳಲ್ಲಿ ಈ ಎರಡು ಸರ್ಕಾರಗಳು ಸೇರಿ ಕೋಲಿ ಸಮಾಜವನ್ನು ಎಸ್‌ಟಿ ಸೇರಿಸಬೇಕು. ಇಲ್ಲವಾದರೆ ಮುಂಬರುವ ೨೦೨೮ರ ಚುನಾವಣೆಯಲ್ಲಿ ಸಮಾಜದ ಜನರು ತಕ್ಕ ಪಾಠ ಕಲಿಸುವುದು ಶತಸಿದ್ದ ಎಂದು ಅವರು ಎಚ್ಚರಿಕೆ ನೀಡಿದರು.
ಈ ವೇಳೆ ಸಮಾಜದ ಮುಖಂಡರಾದ ಮರೆಪ್ಪ ಪೂಜಾರಿ, ಬಸವರಾಜ ಪೂಜಾರಿ, ಮಲ್ಲಪ್ಪ ತಿರುಪತಿ, ಚಂದಪ್ಪ ದೇವಪ್ಪ, ಯಲ್ಲಪ್ಪ ಸಿದ್ದಪ್ಪ ವಿರೂಪಾಕ್ಷ ಬಸಪ್ಪ ಹನುಮಾನ್, ರಾಮು ಮೈಲಾರಿ, ಮರೆಪ್ಪ, ರೇಣುಕಮ್ಮ, ಶಾಣಮ್ಮ, ಮಾರೆಮ್ಮ, ಸಿದ್ದಮ್ಮ, ಹಂಪಮ್ಮ, ಹನಮವ್ವ, ಕಮಲಮ್ಮ, ಶಾಂತಮ್ಮ, ಮಹಾದೇವಿ ಇತರರಿದ್ದರು.
"

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಬಹು ಸಂಖ್ಯೆಯಲ್ಲಿ ಕೋಲಿ ಸಮಾಜದವರಿದ್ದು, ಕೆಕೆ ಭಾಗದಲ್ಲಿ ನಿರ್ಣಾಯಕ ಮತದಾರರಿದ್ದಾರೆ. ನಮ್ಮ ಸಮಾಜ ಮತಬ್ಯಾಂಕ್ ಮಾಡಿಕೊಂಡಿದ್ದಾರೆ ವಿನಾಃ ಬೇಡಿಕೆ ಈಡೇರಿಸುವಲ್ಲಿ ಕಾಳಜಿ ವಹಿಸುತ್ತಿಲ್ಲ. ಕಾರಣ ನಾವು ಇನ್ನೂ ಸುಮ್ಮನೇ ಕೂಡುವುದಿಲ್ಲ | ಉಮೇಶ ಮುದ್ನಾಳ್ಸಂಘಟನಾ ಕಾರ್ಯದರ್ಶಿಅಖಿಲ ಭಾರತೀಯ ಕೋಲಿ ಸಮಾಜ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net