ಏಳು ಜನ ಜೂಜುಕೋರರ ಬಂಧನ

ಏಳು ಜನರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಏಳು ಜನರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಹೊಂಡರಬಾಳು ಗ್ರಾಮದ ಚಾನೆಲ್ ರಸ್ತೆ
  • ಕ್ರಮವಾಗಿ ಜೂಜಾಡುತ್ತಿದ್ದ ಏಳು ಜನ
ಕೊಳ್ಳೇಗಾಲ: ತಾಲೂಕಿನ ಹೊಂಡರಬಾಳು ಗ್ರಾಮದ ಚಾನೆಲ್ ರಸ್ತೆಯಲ್ಲಿ ಭಾನುವಾರ ಮಧ್ಯರಾತ್ರಿ ಅಕ್ರಮವಾಗಿ ಜೂಜಾಡುತ್ತಿದ್ದ ಏಳು ಜನರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಬಸ್ತೀಪುರ ನಿವಾಸಿ ವಿಜಯ್ ಕುಮಾರ(42), ಮಹೇಶ(34), ಕುಮಾರ( 30), ರಾಜು ( 28) ಕೆಂಪನಪಾಳ್ಯ ಗ್ರಾಮದ ಮಹದೇವಸ್ವಾಮಿ ( 70), ಹೊಂಡರಬಾಳು ಗ್ರಾಮದ ಕುಮಾರ್( 35), ಕೊಳ್ಳೇಗಾಲ ಪಟ್ಟಣದ ಮಂಜುನಾಥ ನಗರದ ಮಹೇಶ (52) ಬಂಧಿತರು.
ಹೊಂಡರಬಾಳು ಗ್ರಾಮದ ಚಾನೆಲ್ ರಸ್ತೆಯಲ್ಲಿ ಜೂಜಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಪ್ರೀತ್ ನೇತೃತ್ವದ ತಂಡ ದಾಳಿ ನಡೆಸಿ ಜೂಜುಕೋರರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 14,790 ರೂ. ಜಪ್ತಿ ಮಾಡಿದೆ. ಜತೆಗೆ 7 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net