ಶಿರಾ:ಬೆಸ್ಕಾಂ ಖಾಸಗೀಕರಣ ಖಂಡಿಸಿ ನೌಕರರು ಮಂಗಳವಾರ ಶಿರಾ ನಗರದ ಬೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಬೆಂಗಳೂರು ವಿದ್ಯುತ್ ಪ್ರಸರಣ ವಲಯ ಕೇಂದ್ರ ಸಮಿತಿಯ ಉಪಾಧ್ಯಕ್ಷ ಲಕ್ಷಿ$್ಮಕಾಂತ್, ಸರ್ಕಾರ ರಾಜ್ಯದ ಪ್ರಮುಖ ವಿದ್ಯುತ್ ಸರಬರಾಜು ಸಂಸ್ಥೆಯಾದ ಬೆಸ್ಕಾಂ ಅನ್ನು ಖಾಸಗೀಕರಣ ಮಾಡಿದರೆ ಸಾರ್ವಜನಿಕರಿಗೆ ವಿದ್ಯುತ್ ದರ ಹೆಚ್ಚಳವಾಗುವ ಸಾಧ್ಯತೆ ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಹಿನ್ನಡೆಯಾಗಲಿದೆ. ಹಾಗಾಗಿ ಯಾವುದೇ ಕಾರತಣಕ್ಕೂ ಬೆಸ್ಕಾಂ ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು.
ಖಾಸಗಿ ಕಂಪನಿಗಳು ಲಾಭದ ದೃಷ್ಟಿಯಿಂದ ವಿದ್ಯುತ್ ದರ ಹೆಚ್ಚು ಮಾಡುವ ಸಾಧ್ಯತೆಗಳಿವೆ, ಇದರಿಂದ ಕಡಿಮೆ ಆದಾಯದ ಕುಟುಂಬಗಳಿಗೆ ಹೊರೆ ಹೆಚ್ಚಾಗಬಹುದು. ಖಾಸಗಿ ಸಂಸ್ಥೆಗಳು ಸಾಮಾನ್ಯವಾಗಿ ನಗರ ಪ್ರದೇಶಗಳಿಗೆ ಹೆಚ್ಚು ಆದ್ಯತೆ ನೀಡುವುದರಿಂದ ಗ್ರಾಮೀಣ ಮತ್ತು ದೂರದ ಪ್ರದೇಶಗಳಿಗೆ ಸೇವೆ ಕಡಿಮೆ ಆಗುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಆರೋಪಿಸಿದರು.
ಎಚ್.ತಿಮ್ಮಪ್ಪ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಟಿ.ತಿಮ್ಮರಾಜು, ನಾಗರಾಜು, ಪೃಥ್ವಿರಾಜ್, ಕವಿತಾ, ರಾಮಕೃಫ್ಣಿಪ್ಪ, ಮಯೂರ, ಎಂ.ಕರಿಯಣ್ಣ, ವೇಣುಗೋಪಾಲ್, ಸುರೇಶ್ ಮತ್ತಿತರರು ಇದ್ದರು.