ಸ್ವಾರ್ಥಕ್ಕಿಂತ ಸೇವೆ ದೊಡ್ಡದು / NELAMANGAL

ನೆಲಮಂಗಲದ ನಗರಸಭೆ ವ್ಯಾಪ್ತಿಯ ಕೆಂಪಲಿಂಗನಹಳ್ಳಿ ಆಯೋಜಿಸಿದ್ದ ರೋಟರಿ ಸಂಸ್ಥಾಪಕ ದಿನಾಚರಣೆಯಲ್ಲಿ ಅಧ್ಯಕ್ಷ ಜಿ.ಆರ್​.ನಾಗರಾಜು, ರೋಟರಿ ಕಾರ್ಯದರ್ಶಿ ಆರ್​.ರವಿಕುಮಾರ್​, ಜಂಟಿ ಕಾರ್ಯದರ್ಶಿ ಸೋಮಶೇಖರ್​, ಟ್ರಸ್ಟ್​ ಅಧ್ಯಕ್ಷ ಎಂ.ಎನ್​.ಹರೀಶ್​ ಕುಮಾರ್​, ವಲಯ ರಾಯಭಾರಿ ಮಂಜುನಾಥ್​ಪಾಟೀಲ್​ ಇತರರು ಇದ್ದರು.
ನೆಲಮಂಗಲದ ನಗರಸಭೆ ವ್ಯಾಪ್ತಿಯ ಕೆಂಪಲಿಂಗನಹಳ್ಳಿ ಆಯೋಜಿಸಿದ್ದ ರೋಟರಿ ಸಂಸ್ಥಾಪಕ ದಿನಾಚರಣೆಯಲ್ಲಿ ಅಧ್ಯಕ್ಷ ಜಿ.ಆರ್​.ನಾಗರಾಜು, ರೋಟರಿ ಕಾರ್ಯದರ್ಶಿ ಆರ್​.ರವಿಕುಮಾರ್​, ಜಂಟಿ ಕಾರ್ಯದರ್ಶಿ ಸೋಮಶೇಖರ್​, ಟ್ರಸ್ಟ್​ ಅಧ್ಯಕ್ಷ ಎಂ.ಎನ್​.ಹರೀಶ್​ ಕುಮಾರ್​, ವಲಯ ರಾಯಭಾರಿ ಮಂಜುನಾಥ್​ಪಾಟೀಲ್​ ಇತರರು ಇದ್ದರು.
Published on
ನೆಲಮಂಗಲ : ಸ್ವಾರ್ಥಕ್ಕಿಂತ ಸೇವೆ ದೊಡ್ಡದು ಎನ್ನುವ ಧ್ಯೇಯ ವಾಕ್ಯದೊಂದಿಗೆ ರೋಟರಿ ಸಂಸ್ಥೆ ಜಗತ್ತಿನಾದ್ಯಂತ ನಿರಂತರವಾಗಿ ಸೇವಾ ಕಾರ್ಯ ಮಾಡುತ್ತಿದೆ ಎಂದು ರೋಟರಿ ಅಧ್ಯಕ್ಷ ಜಿ.ಆರ್​.ನಾಗರಾಜು ಹೇಳಿದರು.
ನಗರಸಭೆ ವ್ಯಾಪ್ತಿಯ ಕೆಂಪಲಿಂಗನಹಳ್ಳಿ ವಿ.ವಿ.ಎಸ್​. ಕನ್ವೇಕ್ಷನ್​ ಹಾಲ್​ನಲ್ಲಿ ರೋಟರಿ ಸಂಸ್ಥೆಯಿಂದ ಆಯೋಜಿಸಿದ್ದ ರೋಟರಿ ಸಂಸ್ಥಾಪಕ ದಿನಾಚರಣೆಯಲ್ಲಿ ಮಾತನಾಡಿದರು. ಸಾರ್ವಜನಿಕರಿಗೆ ನೆಮ್ಮದಿಯ ಜೀವನ ಕಲ್ಪಿಸಿ ಇತರರಿಗೆ ಮಾದರಿಯಾಗಿರಬೇಕು. ಜತೆಗೆ ರೋಟರಿ ಪ್ರಾರಂಭದಿಂದಲೂ ಉಚಿತ ಆರೋಗ್ಯ ಶಿಬಿರ, ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಪಶು ವೈದ್ಯಕಿಯ ಚಿಕಿತ್ಸೆ, ಸ್ವಯಂ ರಕ್ತದಾನ ಶಿಬಿರ, ಮಹಿಳೆಯರು ಸ್ವ&ಉದ್ಯೋಗಕ್ಕೆ ಅನುಕೂಲವಾಗುವಂತೆ ಉಚಿತ ಟೈಲರಿಂಗ್​ ತರಬೇತಿ ಮತ್ತು ಹೊಲಿಗೆ ಯಂತ್ರ ವಿತರಣೆ ಸೇರಿ ತಾಲೂಕಿನಲ್ಲಿ ನೂರಾರು ಸಮಾಜಮುಖಿಕಾರ್ಯ ಮಾಡಲಾಗಿದೆ ಎಂದರು.
ರೋಟರಿ ಸಂಸ್ಥಾಪಕ ಅಧ್ಯಕ್ಷ ಎಚ್​.ಜಿ.ರಾಜು ಮಾತನಾಡಿ, ದುಡಿಮೆ ಸ್ವಲ್ಪಪ್ರಮಾಣ ಹಣವನ್ನು ಸಮಾಜ ಸೇವೆ ಮೀಸಲಿರಿಸಿದ್ದು, ಪ್ರತಿ ರೋಟರಿ ಸದಸ್ಯರು ಸೇವೆಯಲ್ಲಿ ದೇವರನ್ನು ಕಾಣುತ್ತಿದ್ದಾರೆ ಎಂದರು.
ಮಾಜಿ ಅಧ್ಯಕ್ಷರಾದ ಟಿ.ನಾಗರಾಜು, ಮಂಜುನಾಥ್​, ಎನ್​.ಜಿ.ನಾಗರಾಜು, ಸಿ.ಜಿ.ಮಂಜುನಾಥ್​ ಗೌಡ, ವನರಾಜು, ನಿಯೋಜಿಕ ಅಧ್ಯಕ್ಷ ಲೋಕೇಶ್​, ನಿರ್ದೇಶಕರಾದ ಎನ್​.ಜಿ.ಚಂದ್ರ ಕುಮಾರ್​, ಶಿವಶಂಕರ್​, ನಾಗರಾಜು, ಬಸವರಾಜು ಸಣ್ಣಪ್ಪ, ಚನ್ನಕೇಶವ, ಶಿವರಾಮು, ಎಲ್​.ಕುಮಾರ್​, ಗಂಗಾಧರಯ್ಯ, ಜ್ಞಾನೇಶ್ವರ್​, ಪ್ರಕಾಶ್​, ಜಯಪ್ರಕಾಶ್​, ಸುಶೀಲ್​, ಹೇಮಮೂರ್ತಿ, ಬಿ.ಟಿ.ಕೃಷ್ಣಮೂರ್ತಿ, ಜಯಂತ್​, ಚಿರಂಜೀವಿ, ರುದ್ರೇಗೌಡ, ಮಂಜುನಾಥ್​, ರಾಜಶೇಖರ್​, ಸಿದ್ದರಾಜು, ರಾಜಣ್ಣ, ಮುನಿರಾಜು ಕೆಂಪೇಗೌಡ, ಸುರೇಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net