ಸರ್ವರ್ ಸಮಸ್ಯೆ ನಿವಾರಿಸುವಂತೆ ಮನವಿ

ಸರ್ವರ್ ಸಮಸ್ಯೆ ನಿವಾರಿಸುವಂತೆ ಮನವಿ
ಸರ್ವರ್ ಸಮಸ್ಯೆ ನಿವಾರಿಸುವಂತೆ ಮನವಿ
Published on

ಪ್ರಮುಖ ಮುಖ್ಯಾಂಶಗಳು

  • ಸರ್ವರ್ ಸಮಸ್ಯೆ ನಿವಾರಿಸುವಂತೆ ಒತ್ತಾಯ
  • ಸರ್ಕಾರಿ ಪಡಿತರ ವಿತರಣೆ ಸಂಘದಿಂದ ಮನವಿ
  • ಬೆಳಗಾವಿ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಕೆ
ಸರ್ವರ ಸಮಸ್ಯೆ ನಿವಾರಣೆಗೆ ಒತ್ತಾಯ
ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಪಡಿತರ ವಿತರಣೆಯಲ್ಲಿ ಉಂಟಾಗಿರುವ ಸರ್ವರ್ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿ ಸರ್ಕಾರಿ ಪಡಿತರ ವಿತರಕ ಕ್ಷೇಮಾಭಿವೃದ್ದಿ ಸಂಘದ ಮಂಗಳವಾರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರು ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಪಡಿತರ ಧಾನ್ಯಗಳು ತಲುಪಲು ತಡವಾಗಿದೆ. ಇದರೊಂದಿಗೆ ಸರ್ವರ್ ಸಮಸ್ಯೆ ಜಟಿಲಗೊಂಡಿದೆ. ಒಂದು ಪಡಿತರ ಚೀಟಿದಾರನಿಗೆ ಹೆಬ್ಬೆಟ್ಟು ಪಡೆಯಲು ೨೦ ನಿಮಿಷ ಸಮಯ ಬೇಕಾಗುತ್ತಿದೆ.ಸೆಪ್ಟೆಂಬರ್ ಒಳಗೆ ಇ-ಕೆವೈಸಿ ಕಡ್ಡಾಯ ಮಾಡಿರುವುದು ಸಮಸ್ಯೆ ಉಂಟಾಗಿದೆ, ಜಿಲ್ಲೆಯಲ್ಲಿ ಜನರು ಹಾಗೂ ಪಡಿತರ ವಿತರಕರು ಹೈರಾಣಾಗುತ್ತಿದ್ದಾರೆ.ಕೂಡಲೇ ಸರ್ವರ್ ಸಮಸ್ಯೆ ನಿವಾರಿಸಬೇಕು. ಇಲ್ಲವಾದರೇ ನ್ಯಾಯಬೆಲೆ ಅಂಗಡಿ ಅಹೋರಾತ್ರಿ ಧರಣಿ ಎಂದು ಮನವಿ ಮೂಲಕ ಎಚ್ಚರಿಕೆ ನೀಡಿದ್ದಾರೆ.
ರಾಜಶೇಖರ ತಳವಾರ, ಶಾಂತಿನಾಥ ಬುಡವಿ, ದಿನೇಶ ಬಾಗಡೆ, ನಾರಾಯಣ ಕಾಲಕುಂದ್ರಿ, ಅರುಣ ಪಾಟೀಲ, ಬಸವರಾಜ ದೊಡಮನಿ, ಪ್ರಭುಗೌಡ ಪಾಟೀಲ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net