ಸೋಲೂರು ಹಾಗೂ ಗುಡ್ಡನಹಳ್ಳಿ ಭಾಗ ಹೊಸೂರಿಗೆ ಹೊಂದಿಕೊಂಡಿದೆ, ಆದರೆ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯ ಗಡಿಗಳಲ್ಲಿ ಎಲ್ಲಿಯೂ ಒಂದೇ ಒಂದು ಚೆಕ್ಪೋಸ್ಟ್ ಇಲ್ಲ, ರಾತ್ರಿ ಸಮಯದಲ್ಲಿ ತಮಿಳುನಾಡು ಭಾಗದಿಂದ ಬಂದು ಬೈಕ್ ಕಳವು ಸೇರಿ ಮನೆಗಳಲ್ಲಿ ಕಳವು ಮಾಡುವುದು ಅವ್ಯಾಹತವಾಗಿದ್ದು, ಗಡಿಭಾಗದಲ್ಲಿ ಯಾವುದೇ ಚೆಕ್ ಪೋಸ್ಟ್ ಇಲ್ಲದೆ ಇರುವುದು ಕಳ್ಳರಿಗೆ ವರದಾನ ಆಗಿದೆ. ಆನೇಕಲ್, ಸರ್ಜಾಪುರ, ಅತ್ತಿಬೆಲೆ, ಹೆಬ್ಬಗೋಡಿ, ಜಿಗಣಿ ಭಾಗದಲ್ಲಿ ಬೈಕ್ ಕಳವು ನಿರಂತರವಾಗಿ ನಡೆಯುತ್ತಿದ್ದು, ಪ್ರಕರಣಗಳನ್ನು ಭೇದಿಸುವುದೇ ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.