ನಿಸ್ವಾರ್ಥದ ಸಹಾಯ ನಿಜವಾದ ಧರ್ಮ

ಬಸವಕಲ್ಯಾಣ ತಾಲೂಕಿನ ಸರಜವಳಗಾ ಗ್ರಾಮದಲ್ಲಿ ಅಖಂಡ  ಹರಿನಾಮ ಸಪ್ತಾಹ ಕಾರ್ಯಕ್ರಮ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಶ್ರೀ ಡಾ.ಚನ್ನವಿರ ಶಿವಾಚಾರ್ಯರು  ಉದ್ಘಾಟಿಸಿದರು. ಶಾಸಕ ಶರಣು ಸಲಗರ, ಮಲ್ಲಿನಾಥ ಹಿರೇಮಠ, ಸಿದ್ರಾಮಪ್ಪ ಗುದಗೆ ಜ್ಞಾನೇಶ್ವರ ಮುಳೆ, ಓಂ ಪಾಟೀಲ ಜಾನಪುರ ಇತರರಿದ್ದರು.
ಬಸವಕಲ್ಯಾಣ ತಾಲೂಕಿನ ಸರಜವಳಗಾ ಗ್ರಾಮದಲ್ಲಿ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಉದ್ಘಾಟಿಸಿದರು. ಶಾಸಕ ಶರಣು ಸಲಗರ, ಮಲ್ಲಿನಾಥ ಹಿರೇಮಠ, ಸಿದ್ರಾಮಪ್ಪ ಗುದಗೆ ಜ್ಞಾನೇಶ್ವರ ಮುಳೆ, ಓಂ ಪಾಟೀಲ ಜಾನಪುರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಾರಕೂಡ ಶ್ರೀ ಅಭಿಮತ
  • ಸರಜವಳಗಾದಲ್ಲಿ ಅಖಂಡ ಹರಿನಾಮ ಸಪ್ತಾಹ
ಬಸವಕಲ್ಯಾಣ: ಸಂಕಷ್ಟದಲ್ಲಿದ್ದವರಿಗೆ ನಿಸ್ವಾರ್ಥವಾಗಿ ಸಹಾಯ ಮಾಡುವುದೇ ನಿಜವಾದ ಧರ್ಮ, ಲೋಕಕಲ್ಯಾಣದಲ್ಲಿಯೇ ಸ್ವಹಿತ ಅಡಗಿದೆ ಎನ್ನುವುದನ್ನು ಅರಿತುಕೊಳ್ಳುವುದೇ ಧರ್ಮಪ್ರೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಶ್ರೀ ಡಾ.ಚನ್ನವಿರ ಶಿವಾಚಾರ್ಯ ನುಡಿದರು.
ತಾಲೂಕಿನ ಸರಜವಳಗಾ ಗ್ರಾಮದಲ್ಲಿ ಅಖಂಡ ಹರಿನಾಮ ಸಪ್ತಾಹ ನಿಮಿತ್ತ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಧರ್ಮ ಮತ್ತು ಧಾರ್ಮಿಕ ಆಚರಣೆಗಳು ಭಿನ್ನವಾಗಿದ್ದರೂ ಸಹ ಧರ್ಮದ ಸಾರ ಯಾವತ್ತಿಗೂ ಒಂದೇ ಆಗಿದೆ. ಎಂತಹ ಸಂದರ್ಭದಲ್ಲೂ ಲೋಕಹಿತ ಬಯಸುವುದೇ ಧರ್ಮ ಎಂದು ವಿಶ್ಲೇಷಿಸಿದರು.
ಸದ್ಭಾವ, ಸಮಷ್ಟಿಭಾವ ಇರುವಲ್ಲಿ ಶ್ರೀಹರಿಯು ವಾಸವಾಗಿರುತ್ತಾನೆ. ಮಿತಿಗಳನ್ನು ಮೀರಿ ಬದುಕುವ ಕಲೆಯನ್ನು ಗುರುವಿನಿಂದ ತಿಳಿದು ಆ ನಿಟ್ಟಿನಲ್ಲಿ ತಿಳಿಯಾಗಿ ಬದುಕುವುದನ್ನು ಕಲಿಯಬೇಕು. ಅಖಂಡ ಹರಿನಾಮ ಸಪ್ತಾಹ ಎಲ್ಲರಿಗೂ ಹೊಸ ಜೀವನೋತ್ಸಾಹ ನೀಡುವಂತಾಗಲಿ, ಸರಜವಳಗಾ ಗ್ರಾಮ ಸೌಹಾರ್ದತೆಯ ದಿಟ್ಟ ಸಂದೇಶ ನೀಡುವಂತಾಗಲಿ ಎಂದು ಹಾರೈಸಿದರು.
ಶಾಸಕ ಶರಣು ಸಲಗರ ಮಾತನಾಡಿ, ಪೂಜ್ಯ ಚನ್ನವಿರ ಶಿವಾಚಾರ್ಯರ ಸಮನ್ವಯ ಸಿದ್ಧಾಂತ ನಾಡಿಗೆ ಮಾದರಿಯಾಗಿದೆ. ಅವರ ದಿವ್ಯವಾಣಿ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಗ್ರಾಮದ ಯುವಕರು ಹೆಚ್ಚು ಚಟಗಳಿಗೆ ಆಕರ್ಷಿತರಾಗಿ ಆರೋಗ್ಯ ಹಾಳೂ ಮಾಡಿಕೊಳ್ಳದೇ ಸಕಾರಾತ್ಮಕ ಚಿಂತಕರಾಗಿ ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಅಖಂಡ ಹರಿನಾಮ ಸಪ್ತಾಹ ವ್ಯಸನ ಮುಕ್ತ ಗ್ರಾಮವಾಗುವುದಕ್ಕೆ ಪ್ರೇರಣೆ ನೀಡುವಂತಾಗಲಿ ಎಂದು ಹೇಳಿದರು.
ಮಲ್ಲಿನಾಥ ಹಿರೇಮಠ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಜ್ಞಾನೇಶ್ವರ ಮುಳೆ, ಓಂ ಪಾಟೀಲ ಜಾನಪುರ ಇದ್ದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು. ಪಾಂಡುರಂಗ ಪಾಟೀಲ ಸ್ವಾಗತಿಸಿ ನಿರೂಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net