ಗುಬ್ಬಿ ತಾಲೂಕಿನ Farming ಮಳೇನಹಳ್ಳಿಯಲ್ಲಿ ಡೇರಿಯ ನೂತನ ಶಾಖೆಯನ್ನು ಶಾಸಕ ಎಸ್.ಆರ್.ಶ್ರೀನಿವಾಸ್ ಉದ್ಘಾಟಿಸಿದರು. ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ಗುರುರಾಜು, ಯೋಗೀಶ್, ತಾಪಂ ಮಾಜಿ ಸದಸ್ಯೆ ಕರಿಯಮ್ಮರಮೇಶ್ ಇದ್ದರು.
ಎಂ.ಎನ್.ಕೋಟೆ: ರೈತರು ಜಮೀನು ಕೆಲಸದ ಜತೆ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸ್ವಾವಲಂಬಿ ಬದಕನ್ನು ಕಟ್ಟಿಕೊಳ್ಳಬಹುದು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲೂಕು ಮಳೇನಹಳ್ಳಿಯಲ್ಲಿ ಭಾನುವಾರ ಹಾಲು ಉತ್ಪಾದಕರ ಸಹಕಾರ Farming ಸಂಘದ ನೂತನ ಶಾಖೆಗೆ ಉದ್ಘಾಟಿಸಿ ಮಾತನಾಡಿ, ಪ್ರತಿ ಹಳ್ಳಿಗಳಿಗೂ ಡೇರಿಗಳನ್ನು ಮಾಡಲಾಗುತ್ತಿದೆ. ಪ್ರಸ್ತುತ ತಾಲೂಕಿನಲ್ಲಿ 70 ಡೇರಿ ಆರಂಭಿಸಿದ್ದು, ರೈತರು ಹೈನುಗಾರಿಕೆಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕು ಎಂದರು.
ತಾಲೂಕಿನಲ್ಲಿ ಸುಮಾರು 90 ಅಂಗನವಾಡಿ ಕಟ್ಟಡಗಳಿಗೆ ಅನುದಾನ ಹಾಕಲಾಗಿದೆ. ಕಾಮಗಾರಿ ಸಹ ಪ್ರಗತಿಯಲ್ಲಿದೆ. ಉಳಿದ ಕಟ್ಟಡಗಳನ್ನು ಶ್ರೀವಾಗಿ ಮಾಡುತ್ತೇವೆ. ಭಾರತಿ ಶ್ರೀನಿವಾಸ್ ಗೆದ್ದ ಮೇಲೆ ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.
ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್ ಮಾತನಾಡಿ, ಚುನಾಚಣೆಯಲ್ಲಿ ಗೆದ್ದ ನಂತರ ಸುಮಾರು 30 ಡೇರಿಗಳನ್ನು ಪ್ರಾರಂಭ ಮಾಡಲಾಗಿದೆ. ಪ್ರತಿ ಹಳ್ಳಿಗೆ ಡೇರಿ ಸ್ಥಾಪಿಸಲಾಗುವುದು. ರೈತರು ಬೆಳೆಯನ್ನೇ ನಂಬಿಕೊಳ್ಳದೇ ಹೈನುಗಾರಿಕೆ ಅಳವಡಿಸಿಕೊಳ್ಳಿ, ಪ್ರತಿ ರೈತರು ಹಸುಗಳನ್ನು ಸಾಕಿ ಹೆಚ್ಚು ಹಾಲು ಶೇಖರಿಸಿ, ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ರೈತರಿಗೆ ತಲುಪಿಸಲಾಗುವುದು. ಒಕ್ಕೂಟಕ್ಕೆ ಸೇರಿದ ರೈತರು ಮರಣಹೊಂದಿದಾರೆ 50 ಸಾವಿರ ರೂ. ಹಸು ಮರಣ ಹೊಂದಿದಲ್ಲಿ 70 ಸಾವಿರ ರೂ. ನೀಡಲಾಗುವುದು. ಗಣಿ ಭಾದೀತ ಪ್ರದೇಶದಲ್ಲಿ ಇರುವ ರೈತರಿಗೆ ಶಾಸಕರ ಸಹಕಾರದಿಂದ ಹಸುಗಳನ್ನು ಕೊಡಿಸಲಾಗುವುದು ಎಂದರು.