ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರಿ ಸಂಕ್ಕೆ ಆಯ್ಕೆ / CHANARAYAPATTANA

ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರಿ ಸಂಕ್ಕೆ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯೆಯನ್ನು ಸನ್ಮಾನಿಸಲಾಯಿತು. ಚುನಾವಣಾಧಿಕಾರಿ ಶಿವಕುಮಾರ್​, ಜಿಪಂ ಮಾಜಿ ಸದಸ್ಯ ಲಕ್ಷಿ$್ಮನಾರಾಯಣ್​ ಇತರರು ಇದ್ದರು.
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರಿ ಸಂಕ್ಕೆ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯೆಯನ್ನು ಸನ್ಮಾನಿಸಲಾಯಿತು. ಚುನಾವಣಾಧಿಕಾರಿ ಶಿವಕುಮಾರ್​, ಜಿಪಂ ಮಾಜಿ ಸದಸ್ಯ ಲಕ್ಷಿ$್ಮನಾರಾಯಣ್​ ಇತರರು ಇದ್ದರು.
Published on
ಚನ್ನರಾಯಪಟ್ಟಣ : ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ವಿವಿಧೋದ್ದೇಶ ಪ್ರಾರ್ಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಎನ್​.ತಮ್ಮೇಗೌಡ ಹಾಗೂ ಉಪಾಧ್ಯೆ ಕಲಾ ವೆಂಕಟೇಶ್​ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಶಿವಕುಮಾರ್​ ತಿಳಿಸಿದರು.
ಜಿಪಂ ಮಾಜಿ ಸದಸ್ಯ ಲಕ್ಷಿ$್ಮನಾರಾಯಣ್​ ಮಾತನಾಡಿ, ಸಂಘದಲ್ಲಿ ರೈತರು ಅಧಿಕ ವ್ಯವಹಾರ ನಡೆಸಿದರೆ ಸಂಘವು ಅಭಿವೃದ್ಧಿಯಾಗುತ್ತದೆ. ರೈತರಿಗೆ ಅಗತ್ಯ ಗೊಬ್ಬರ ದಾಸ್ತಾನು ಮಾಡಿ ಮಾರಾಟ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದರು.
ವಿಜಯಪುರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ವೆಂಕಟೇಶ್​ ಮಾತನಾಡಿ, ರೈತರು ಬೇರೆ ಬ್ಯಾಂಕ್​ಗಳಲ್ಲಿ ವ್ಯವಹರಿಸದೆ ಸಹಕಾರಿ ಬ್ಯಾಂಕಿನಲ್ಲಿ ಹಣ ಠೇವಣಿ ಇಟ್ಟರೆ ಅದರ ಪ್ರಕಾರ ಬಡ್ಡಿ ಸಿಗುತ್ತದೆ. ರೈತರಿಗೂ ಹಲವು ಸೌಲಭ್ಯ ಸಿಗುತ್ತದೆ. ಈಗಾಗಲೇ ರೈತರು ಬಡ್ಡಿ ರಹಿತ ಬೆಳೆ ಸಾಲ, ಯಶಸ್ವಿನಿ ಸೇರಿ ಹಲವು ಸೌಲಭ್ಯ ರೈತರು ಪಡೆಯುತ್ತಿದ್ದಾರೆ ಎಂದು ಹೇಳಿದರು.
ನಿರ್ದೇಶಕರಾದ ಬಾಬು ಎಂ.ವಸಂತ್​, ಸಿಎಂ.ಪಿಳ್ಳೆಗೌಡ, ಧನಂಜಯ್​, ಕುಮಾರ್​, ಮುಕುಂದ, ಮುನಿಕೃಷ್ಣಪ್ಪ, ಚಂದ್ರಶೇಖರ್​, ಸಿ.ಎನ್​.ಗಣೇಶ್​, ಎಂ.ರಾಜೇಶ್ವರಿ, ಎಚ್​.ಆರ್​.ಮುರಳಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net