360 ಸದಸ್ಯರ ಪೈಕಿ 312 ಸದಸ್ಯರು ಮತದಾನ ಮಾಡಿದರು. ಸಾಮಾನ್ಯ ಕ್ಷೇತ್ರಗಳಿಗೆ ನಾಗಮಣಿ ರಂಗನಾಥಪ್ಪ, ಎಸ್.ವಿನೋದ ಕುಮಾರ್, ಪ್ರೇಮಾ ಕಾಂತರಾಜು, ಕಮಲಮ್ಮ ಶ್ರೀರಂಗಪ್ಪ, ನೀಲಮ್ಮ ಭೂತಯ್ಯ, ಸುಕನ್ಯಾ ಎಸ್ ಶಿವರಾಮು, ಪುಟ್ಟಮ್ಮ ಭೀಮಯ್ಯ, ಗೀತಾ ಹಾಲಾರ್ತಪ್ಪ, ಸವಿತಾ ಉಮೇಶ್ ನಿರ್ದೇಶಕರಾಗಿ ಆಯ್ಕೆಯಾದರೆ. ನಾಗರತ್ನಮ್ಮ ಭೂತಯ್ಯ ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಆಯ್ಕೆಯಾದರು. ಜಯಮ್ಮ ರಾಜಣ್ಣ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಆಯ್ಕೆಯಾದರು. ಪುಟ್ಟಮ್ಮ ನಿಂಗನಾಯಕ ಪರಿಶಿಷ್ಟ ಪಂಗಡ ಹಾಗೂ ಎಂ.ಎನ್. ಶಾಂತಮ್ಮ ನಾಗರಾಜು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಿಗೆ ಅವಿರೋಧ ಆಯ್ಕೆಯಾದರು. ಕಾರ್ಯದರ್ಶಿನಿ ಚೈತ್ರಾ, ಗ್ರಾಮಸ್ಥರು ಒಕ್ಕೂಟದ ಸಂಘದ ಸದಸ್ಯರು ಇದ್ದರು.