ಕೊರಟಗೆರೆ ಕರವೇ ಘಟಕಕ್ಕೆ ಆಯ್ಕೆ

Selection for Koratagere Karave unit
Selection for Koratagere Karave unit
Published on
ಕೊರಟಗೆರೆ: ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್​ ಶೆಟ್ಟಿ ಬಣ)ದಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕೊರಟಗೆರೆ ಕರವೇ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ತಾಲೂಕು ಅಧ್ಯಕ್ಷ ನರಸಿಂಹರಾಜು ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಹರೀಶ್​ಬಾಬು, ನಗರ ಘಟಕ ಅಧ್ಯಕ್ಷ ಶಂಕರ್​ಬಾಬು, ಉಪಾಧ್ಯಕ್ಷ ನರಸಿಂಹಮೂರ್ತಿ, ತಾಲೂಕು ಕಾರ್ಯದರ್ಶಿ ಹನುಮೇಶ್​, ಸಂಚಾಲಕ ವೀರಕ್ಯಾತಯ್ಯ, ತೇಜಸ್​, ಸದಸ್ಯ ಶ್ರೀನಿವಾಸ್​, ಬೋಗೇಶ್​, ಶಶಿಕುಮಾರ್​ ನೂತನವಾಗಿ ಆಯ್ಕೆಯಾದರು.
ತಾಲೂಕು ಅಧ್ಯಕ್ಷ ನರಸಿಂಹರಾಜು ಮಾತನಾಡಿ, ರಾಜ್ಯಾಧ್ಯಕ್ಷ ಪ್ರವಿಣ್​ ಶೆಟ್ಟಿ ಅವರ ನೇತೃತ್ವದಲ್ಲಿ ಕರವೇ ಜನಪರ ಹೋರಾಟಗಳು ಯಶಸ್ವಿಯಾಗಿ ನಡೆಯುತ್ತಿದೆ. ನಾಡು&-ನುಡಿ, ರೈತಪರ, ಬಡ-ಕುಟುಂಬಗಳ ಕಾರ್ಮಿಕರ ಪರ, ಸರ್ಕಾರಿ ಶಾಲೆ ಅಭಿವೃದ್ಧಿ, ಅನ್ಯಾಯ ವಿರುದ್ಧ ನಮ್ಮ ಹೋರಾಟ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net