ಶಹಾಪುರ ತಾಲೂಕಿನ ಉಕ್ಕಿನಾಳ ತಾಂಡಾ ಸಮೀಪ ಜು.೨೦ರಂದು ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕರು ಹಾಗೂ ಗೋಗಿ ಪೊಲೀಸ್ ಸಿಬ್ಬಂದಿ ಖಾಸಗಿ ಗೋದಾಮಿನ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಚಾಮನಾಳ ತಾಂಡಾದ ಲೋಹಿತ ರಾಠೋಡ್ ಅವರಿಗೆ ಸೇರಿದ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ೮೧.೭೫ ಕ್ವಿಂಟಾಲï ಪಡಿತರ ಅಕ್ಕಿ ಪತ್ತೆ ಹಚ್ಚಿ, ಅಂದಾಜು ೧.೮೯ ಲಕ್ಷ ರೂ.ಮೌಲ್ಯದ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಜು.೨೧ರಂದು ಗೋಗಿ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ-೧೯೫೫ರಡಿ ಪ್ರಕರಣ ದಾಖಲಿಸಲಾಗಿದೆ. ಗುರುಮಠಕಲï ಪಟ್ಟಣದ ಮೋಮಿನಪುರ ಪ್ರದೇಶದಲ್ಲಿರುವ ಧಾನ್ಯ ವ್ಯಾಪಾರಿ ಸೈಯದ್ ಮೊಹಿಯೋದ್ದೀನ್ ಅವರ ಅಂಗಡಿಯಲ್ಲಿ ನಡೆಸಿದ ದಾಳಿಯಲ್ಲಿ ೬.೫೦ ಕ್ವಿಂಟಾಲï ಪಡಿತರ ಅಕ್ಕಿ ಪತ್ತೆಯಾಗಿದೆ. ಸುಮಾರು ೧೫,೦೮೦ ಮೌಲ್ಯದ ಅಕ್ಕಿ ಜಪ್ತಿ ಮಾಡಲಾಗಿದ್ದು, ಜು.೨೮ರಂದು ಗುರುಮಠಕಲï ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಡಗೇರಾ ತಾಲೂಕಿನ ಗಡಿ ಭಾಗದಲ್ಲಿ ಅಶೋಕ್ ಲೈಲ್ಯಾಂಡ್(ಕೆಎ-೩೩-ಬಿ-೨೧೪೦) ವಾಹನದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ೩೦ ಕ್ವಿಂಟಾಲï ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಽಕಾರಿಗಳು ವಶಪಡಿಸಿಕೊಂಡಿz್ದÁರೆ.