ಸೋಯಾಬಿನ್ ಬೀಜ ವಿತರಣೆಗೆ ಚಾಲನೆ

ಬೀಜ ವಿತರಣೆ ಚಾಲನೆ
ಬೀಜ ವಿತರಣೆ ಚಾಲನೆ
Published on

ಪ್ರಮುಖ ಮುಖ್ಯಾಂಶಗಳು

  • ಸೋಯಾಬಿನ್ ಬೀಜ ವಿತರಣೆಗೆ ಚಾಲನೆ
  • ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದಲ್ಲಿ ಚಾಲನೆ ನೀಡಿದ ಅಧ್ಯಕ್ಷ ದಯಾನಂದ ಪಾಟೀಲ
  • ವಿಷ್ಣು ರೇಡೆಕರ್ ಸೇರಿ ಹಲವಾರು ಭಾಗಿ

ದಡ್ಡಿ ಗ್ರಾಮದಲ್ಲಿ ಸೋಯಾಬಿನ್ ಬೀಜ ವಿತರಣೆಗೆ ಚಾಲನೆ
ವಿಜಯವಾಣಿ ಸುದ್ದಿಜಾಲ ದಡ್ಡಿ :

ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮುಂಗಾರು ಹಂಗಾಮಿನ ಸೋಯಾಬಿನ್ ಬಿತ್ತನೆ ಬೀಜ ವಿತರಣಾ ಕಾರ್ಯಕ್ಕೆ
ಪಿಕೆಪಿಎಸ್ ಅಧ್ಯಕ್ಷ ದಯಾನಂದ ಪಾಟೀಲ ಈಚೆಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ವಿಷ್ಣು ರೆಡೇಕರ್ ಈ ವರ್ಷ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೋಯಾಬಿನ್ ಬೀಜದ ದಾಸ್ತಾನು ಲಭ್ಯವಿದೆ. ಮುಂಗಾರು ಮಳೆಯ ಪರಿಸ್ಥಿತಿಯನ್ನು ಸರಿಯಾಗಿ ಗಮನಿಸಿ ರೈತರು ಬಿತ್ತನೆ ಕಾರ್ಯ ಕೈಗೊಳ್ಳುವುದು ಸೂಕ್ತ. ಸರ್ಕಾರದ ಈ ರಿಯಾಯಿತಿ ಸೌಲಭ್ಯವನ್ನು ತಾಲೂಕಿನಲ್ಲಿ ಅರ್ಹ ರೈತರಿಗೆ ಎಲ್ಲರೂ ಪಡೆದುಕೊಳ್ಳಬೇಕು.
ಪಿಕೆಪಿಎಸ್ ಉಪಾಧ್ಯಕ್ಷ ತುಕಾರಾಂ ರೆಡೇಕರ, ವಿಲಾಸ್ ನಾರ್ವೇಕರ, ಮೀನಾಕ್ಷಿ ಕೇಸ್ತಿ, ಸಂಗೀತ ಸುಂಡಕರ್, ಮಾರುತಿ ಕೋಲಕಾರ, ಚೈನಾಜಬೇಗಂ ನಾಯಕವಾಡಿ, ನಾಗೇಶ್ ಅರಬಳಿ, ನೀಲೇಶ್ ಮಠಪತಿ, ಮಹೇಶ್ ಹತ್ತರಗಿ, ಮುರಗೇಶ್ ಹತ್ತರಗಿ, ಪಿರಾಜಿ ದೇಶವಳ, ರಾಮಚಂದ್ರ ದೇಸನಾಯಕ, ಚಾಳೋಬಾ ನಂದವಡೇಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net