ಸೆಕ್ಯೂರಿಟಿ ಗಾರ್ಡ್​ ಮಗ ಡಾಕ್ಟರ್​

Security guard's son is a doctor
Security guard's son is a doctor
Published on
ಪಾವಗಡ: ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್​ ಆಗಿರುವ ಗಂಗಾಧರಯ್ಯ ಅವರ ಪುತ್ರ ಹರ್ಷವರ್ಧನ್​ ಎಂಬಿಬಿಎಸ್​ ಓದಿ ವೈದ್ಯರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹರ್ಷವರ್ಧನ್​ ಪಶ್ಚಿಮ ಬಂಗಾಳದ ಕೋಲ್ಕತ ಇ.ಎಸ್​.ಐ.ಸಿ ಮೆಡಿಕಲ್​ ಕಾಲೇಜಿನಲ್ಲಿ ಏಪ್ರಿಲ್​ 30ರಂದು ಶೇ.85 ಲಿತಾಂಶದೊಂದಿಗೆ ವೈದ್ಯಕಿಯ ಶಿಕ್ಷಣ ಮುಗಿಸಿದ್ದಾರೆ.
ಪಾವಗಡ ತಾಲೂಕು ನ್ಯಾಯದಗುಂಟೆ ಗ್ರಾಪಂ ವ್ಯಾಪ್ತಿಯ ಗುಜ್ಜಾರಹಳ್ಳಿಯ ಸಾಮಾನ್ಯ ಕುಟುಂಬದಿಂದ ಬಂದ ಗಂಗಾಧರಯ್ಯ ಮೊದಲು ಲಿಂಗದಹಳ್ಳಿ-, ಪಾವಗಡ ಖಾಸಗಿ ಬಸ್​ ಏಜೆಂಟ್​ ಆಗಿದ್ದರಲ್ಲದೆ ಗ್ರಾಮದಲ್ಲೇ ವ್ಯವಸಾಯ ಮಾಡಿಕೊಂಡಿದ್ದರು.
ವ್ಯವಸಾಯದಿಂದ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಿಲ್ಲವೆಂದು 2008ರಲ್ಲಿ ಕೂಲಿ ಕೆಲಸಕ್ಕಾಗಿ ಸಣ್ಣಪುಟ್ಟ ಉದ್ಯೋಗ ಅರಸಿ ಬೆಂಗಳೂರಿಗೆ ಪಯಣ ಬೆಳೆಸಿದರು. ಅಲ್ಲಿ ಸೆಕ್ಯೂರಿಟಿ ಸೂಪರ್​ವೈಸರ್​ ಆಗಿ ಕೆಲಸಕ್ಕೆ ಸೇರಿ, ಬರುವ ಅಲ್ಪ ಆದಾಯದಲ್ಲೇ ಮಗನಿಗೆ ವೈದ್ಯಕಿಯ ಶಿಕ್ಷಣ ಓದಿಸಿದರು. ಮಗನೂ ತಂದೆಯ ಕಷ್ಟವನ್ನು ಅರಿತು ರಾತ್ರಿ&ಹಗಲು ಅಭ್ಯಾಸ ಮಾಡಿ ವೈದ್ಯಕಿಯ ಶಿಕ್ಷಣ ಯಶಸ್ವಿಯಾಗಿ ಪೂರೈಸಿದ್ದಾರೆ. ಬಡತನ ಎಂಬುದು ಸಾಧನೆಗೆ ಅಡ್ಡಿಯಲ್ಲ, ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಪಾವಗಡ ತಾಲೂಕಿನ ಈ ತಂದೆ&-ಮಗನೇ ಸಾಕ್ಷಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net