ದ್ವಿತೀಯ ಪಿಯು ಫಲಿತಾಂಶ ಪ್ರಕಟ: 600 ಕ್ಕೆ 600 ಅಂಕ; ವಾಣಿಜ್ಯ ವಿಭಾಗದಲ್ಲಿ ದಿಶಾ ರಾಜ್ಯಕ್ಕೆ ಪ್ರಥಮ Second PU Results
Second PU Results
Published on:
Copied
Follow Us
ಬೆಂಗಳೂರು: ಫೆ.18ರಿಂದ ಮಾ.17 ರವರೆಗೆ ನಡೆದಿದ್ದ 2025-26ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶವು ಗುರುವಾರ (ಏ.9) ರಂದು https//:karresults.nic.in ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟವಾಗಿದೆ.
ಕಳೆದ ವರ್ಷಕ್ಕಿಂತ ಈ ಭಾರಿಯ ಫಲಿತಾಂಶದಲ್ಲಿ ಶೇ. 12.50 ರಷ್ಟು ಏರಿಕೆ ಕಾಣುವ ಮೂಲಕ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಶೇ. 86 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಭಾರಿ ಒಟ್ಟು 7 ಲಕ್ಷದ 10 ಸಾವಿರ ವಿದ್ಯಾರ್ಥಿಗಳಲ್ಲಿ 6 ಲಕ್ಷ 10 ಸಾವಿರ ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ರಾಜ್ಯದ ಟಾಪರ್ಸ್
2025-26 ನೇ ಸಾಲಿನ ದ್ವಿತೀಯ ಪಿಯು ಪ್ರಕಟವಾಗಿದ್ದು, ಈ ಭಾರಿ ಪರೀಕ್ಷಾ ಫಲಿತಾಂಶವನ್ನು ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ಗೆ ಎಸ್.ಎಮ್.ಎಸ್ ಮೂಲಕ ಫಲಿತಾಂಶ ರವಾನೆ ಮಾಡಲಾಗಿದೆ.
ವಿಜ್ಞಾನ
600ಕ್ಕೆ 598 ಪಡೆಯುವ ಮೂಲಕ ಶಮನ್ಯು ಶೆಟ್ಟಿ, ನಂದನ್ ನಾಯಕ್ ಪ್ರಥಮ ಸ್ಥಾನ ಗಳಿಸಿದರೆ, ವೈಷ್ಣವಿ, ಆನರ್ವಿ 597 ಅಂಕ ಗಳಿಸಿದ್ದಾರೆ. ಅವರ ನಂತರದಲ್ಲಿ, ಮಹಿನ್, ಶ್ರೇಷ್ಠ ಕಾಮತ್ 596 ಪಡೆದಿದ್ದು, ಶ್ರೀಲಯ 593 ಅಂಕ ಪಡೆದಿದ್ದಾರೆ.
ವಾಣಿಜ್ಯ
ದಕ್ಷಿಣ ಕನ್ನಡ ಜಿಲ್ಲೆ, ಆಶ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ ದಿಶಾ 600 ಕ್ಕೆ 600 ಅಂಕಗಳನ್ನು ಪಡೆದು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ಇವಳ ಜೊತೆಗೆ ಬೆಂಗಳೂರಿನ ಜೈನ್ ಕಾಲೇಜಿನ ಅದಿತಿ ಸಹ 600 ಕ್ಕೆ 600 ಅಂಕಗಳನ್ನು ಪಡೆದಿದ್ದಾಳೆ. ತೂಮಕೂರಿನ ವಿದ್ಯಾವಾಹಿನಿ ಕಾಲೇಜಿನ ರೋಹನ್ 600 ಕ್ಕೆ 597 ಅಂಕಗಳನ್ನು ಪಡೆಯುವ ಮೂಲಕ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯನಾಗಿ ಹೊರಹೊಮ್ಮಿದ್ದಾನೆ.
ಕಲಾ
ಇನ್ನೂ ಕಲಾ ವಿಭಾಗದಲ್ಲಿ ವಿಜಯನಗರದ ಕೊಟ್ಟೂರಿನ ಕಾಲೇಜಿನ ಅರ್ಚನಾ ಮತ್ತು ಸಂಗೀತಾ ಇನ್ನರು ತಲಾ 600 ಕ್ಕೆ 598 ಅಂಕಗಳನ್ನು ಪಡೆದು ಜೋಡಿ ಟಾಪರ್ಸ್ಗಳಾಗಿ ಹೊರಹೊಮ್ಮಿದ್ದಾರೆ.
ಇಂದು ಸಂಜೆ 6.15 ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ನಡೆಸಲಿದ್ದು, ಅಲ್ಲಿ ಯಾವ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ ಯಾವ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ ಎಂದು ತಿಳಿಯಲಿದೆ.