ಶಾಲೆಗಳ ಅಭಿವೃದ್ಧಿಗೆ ಎಸ್ಡಿಎಂಸಿ ಬುನಾದಿ school development.
ಬಾಗೇಪಲ್ಲಿ ತಾಲೂಕಿನ ಬಿಳ್ಳೂರು ಸರ್ಕಾರಿ school development. ಪ್ರೌಢಶಾಲೆಗೆ ಆಯ್ಕೆಯಾದ ಎಸ್ಡಿಎಂಸಿ ಅಧ್ಯೆ ವನಜಾ ಮತ್ತು ಗಿರಿಜಮ್ಮ, ಶೋಭಾ, ವರಲಕ್ಷಿ$್ಮ, ತಹಸೀನಾಭಾನು, ಚಂದ್ರನಾಯಕ್, ಹರೀಶ ಇದ್ದರು.
ಪಾತಪಾಳ್ಯ: ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಎಸ್ಡಿಎಂಸಿ ಭದ್ರಬುನಾದಿಯಾಗಿದೆ ಎಂದು ಪ್ರಭಾರ ಮುಖ್ಯಶಿಕ್ಷಕ ಎನ್.ಆರ್.ಕುಮಾರ್ ತಿಳಿಸಿದರು.
ಬಿಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ನೂತನವಾಗಿ ಆಯ್ಕೆಯಾದ ಎಸ್ಡಿಎಂಸಿ ಅಧ್ಯಕ್ಷ ಹಾಗೂ ಸದಸ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲೆಗಳ ಅಭಿವೃದ್ಧಿಗೆ ಎಸ್ಡಿಎಂಸಿ ಸದಸ್ಯರ ಪಾತ್ರ ಮಹತ್ವದ್ದಾಗಿದೆ. school development.
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರು ಬಡವರ ಮಕ್ಕಳು. ಆದ್ದರಿಂದ ಎಸ್ಡಿಎಂಸಿ ಸದಸ್ಯರು ಶಾಲೆ ಶೈಕ್ಷಣಿಕ ಚಟುವಟಿಕೆಗಳನ್ನು ನೋಡಿಕೊಳ್ಳಬೇಕು. ಮಕ್ಕಳ ಗ್ರಾಮಸಭೆ ಬಗ್ಗೆ ಗಮನಹರಿಸಿ ಜನಪ್ರತಿನಿಧಿಗಳು ಮತ್ತು ಸರ್ಕಾರದ ಗಮನ ಸೆಳೆಯುವ ಕಾರ್ಯ ಚಟುವಟಿಕೆಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಎಸ್ಡಿಎಂಸಿ ಅಧ್ಯೆ ವನಜಾ, ಸದಸ್ಯರಾಗಿ ಗಿರಿಜಮ್ಮ, ಶೋಭಾ, ಶಶಿಕಲಾ, ವರಲಕ್ಷಿ$್ಮ, ತಹಸೀನಾಭಾನು, ಚಂದ್ರನಾಯಕ್, ಶ್ರ್ರೀನಿವಾಸ, ಹರೀಶ ಆಯ್ಕೆಯಾದರು.ಶಿಕ್ಷಕರಾದ ಸುನಿಲ್ಕುಮಾರ್, ವೇಣಿಬಾಯಿ, ದೈಹಿಕ ಶಿಕ್ಷಣ ಶಿಕ್ಷಕ ಸಂಗಮೇಶ್, ಅತಿಥಿ ಶಿಕ್ಷಕರಾದ ರಿಹಾನ, ರಮೇಶ್ ಇದ್ದರು.