ವಿಜ್ಞಾನವೆಂದರೆ ಕುತೂಹಲದ ಕಣಜ / DODDABALLAPUR

ದೊಡ್ಡಬಳ್ಳಾಪುರದ ಸಾಯಿ ವಿದ್ಯಾಪಿಠ ಪಬ್ಲಿಕ್​ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಶಾಲೆಯ ಅಧ್ಯಕ್ಷೆ ರುಕ್ಮಿಣಮ್ಮ, ಕಾರ್ಯದರ್ಶಿ ಶ್ರೀನಿವಾಸ್​, ಖಜಾಂಜಿ ವನಜಾಕ್ಷಿ, ಪ್ರಾಂಶುಪಾಲೆ ಶ್ರೀಲಕ್ಷ್ಮೀ, ದೈಹಿಕ ಶಿಕ್ಷಕ ದಾದಾಫೀರ್​ ಇತರರು ಇದ್ದರು.
ದೊಡ್ಡಬಳ್ಳಾಪುರದ ಸಾಯಿ ವಿದ್ಯಾಪಿಠ ಪಬ್ಲಿಕ್​ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಶಾಲೆಯ ಅಧ್ಯಕ್ಷೆ ರುಕ್ಮಿಣಮ್ಮ, ಕಾರ್ಯದರ್ಶಿ ಶ್ರೀನಿವಾಸ್​, ಖಜಾಂಜಿ ವನಜಾಕ್ಷಿ, ಪ್ರಾಂಶುಪಾಲೆ ಶ್ರೀಲಕ್ಷ್ಮೀ, ದೈಹಿಕ ಶಿಕ್ಷಕ ದಾದಾಫೀರ್​ ಇತರರು ಇದ್ದರು.
Published on
ದೊಡ್ಡಬಳ್ಳಾಪುರ : ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಮೂಲಕ ಅವರಲ್ಲಿ ಪ್ರಶ್ನಿಸುವ ಗುಣ ಹೆಚ್ಚಿಸಬೇಕು. ಪ್ರಶ್ನೆಗಳಿಂದ ವಿಜ್ಞಾನದ ಕಲಿಕೆ ಸಾಧ್ಯ ಎಂದು ದೊಡ್ಡಬಳ್ಳಾಪುರ ಕ್ಷೇತ್ರ ಸಮಾನ್ವಯಾಧಿಕಾರಿ ಆರ್​.ನಾರಾಯಣಸ್ವಾಮಿ ಹೇಳಿದರು.
ನಗರದ ಕರೇನಹಳ್ಳಿಯಲ್ಲಿನ ಸಾಯಿ ವಿದ್ಯಾಪಿಠ ಪಬ್ಲಿಕ್​ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಾತನಾಡಿದ ಅವರು, ವಿಜ್ಞಾನ ಎಂದರೆ ಕುತೂಹಲದ ಕಣಜ. ವಿದ್ಯಾರ್ಥಿಗಳು ಯಾವುದನ್ನು ಪ್ರಶ್ನಿಸದೇ ಒಪ್ಪಿಕೊಳ್ಳಬಾರದು. ವಿಜ್ಞಾನದ ವಿವಿಧ ಆಯಾಮಗಳನ್ನು ಅರಿತುಕೊಳ್ಳಬೇಕು. ಕುತೂಹಲದೊಂದಿಗಿನ ಕಲಿಕೆಯಿಂದ ವಿಜ್ಞಾನ ಸುಲಭ. ವಿಜ್ಞಾನ ಎಂದೂ ಸುಳ್ಳು ಹೇಳಲ್ಲ. ಪ್ರಶ್ನೆ ಮಾಡುವ ಮೂಲಕ ಸತ್ಯ ಕಂಡುಕೊಳ್ಳಬಹುದು. ವಿಜ್ಞಾನದ ಮಾದರಿಗಳ ಮೂಲಕ ವಿದ್ಯಾರ್ಥಿಗಳ ಕಲಿಕಾ ಮಟ್ಟ ಉತ್ತಮಗೊಳ್ಳುತ್ತದೆ. ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸಲು ವಿಜ್ಞಾನದ ವಸ್ತು ಪ್ರದರ್ಶನ ಅಗತ್ಯ ಎಂದರು.
ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್​ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಯೋಗಗಳೊಂದಿಗಿನ ಕಲಿಕೆ ಅಗತ್ಯ. ಪುಸ್ತಕದ ವಿಷಯಗಳನ್ನು ಚಟುವಟಿಕೆಗಳ ಮೂಲಕ ಕಲಿಸುವ ಪ್ರಯತ್ನ ಅವಶ್ಯಕ. ವಿಚಾರಗಳ ಕಲಿಕೆಯಲ್ಲಿ ಪ್ರಾಯೋಗಿಕ ಪ್ರಯತ್ನ ಲಪ್ರದವಾಗಿರುತ್ತದೆ. ವಿಜ್ಞಾನ ಸಾಕಷ್ಟು ವಿಚಾರಗಳು ಮಕ್ಕಳಿಗೆ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಆದರೆ ಅದನ್ನು ಪ್ರಾಯೋಗಿಕವಾಗಿ ಕಲಿಸುವುದರಿಂದ ಮಕ್ಕಳಿಗೆ ಬೇಗ ತಲುಪುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳ ಕೌಶಲ ವೃದ್ಧಿಸುತ್ತದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net