ಸಂಕೋಲೆ ಮೀರಿದ ಜಾಗವೇ ಶಾಲೆಗಳು Schools

ಸಂಕೋಲೆ ಮೀರಿದ ಜಾಗವೇ ಶಾಲೆಗಳು Schools
ಸಂಕೋಲೆ ಮೀರಿದ ಜಾಗವೇ ಶಾಲೆಗಳು Schools
Published on
ಕೆಜಿಎಫ್: ಶಾಲೆಗಳಲ್ಲಿ ಸರಸ್ವತಿದೇವಿ ನೆಲೆಸಿರುತ್ತಾಳೆ, ದೇವಿ ನೆಲೆಸಿದ ಸ್ಥಳವನ್ನು ಜ್ಞಾನ ದೇಗುಲವೆಂದು ಕರೆಯುತ್ತೇವೆ. ಶಾಲೆಗಳಿರುವ ಸ್ಥಳಗಳಿಗೆ ವಾಸ್ತು ದೋಷ ಇರುವುದಿಲ್ಲ. ಜಾತಿ ಧರ್ಮ ಸಂಕೋಲೆಗಳನ್ನು ಮೀರಿದ ಜಾಗವೇ ಶಾಲೆಗಳು ಎಂದು ಶಾಸಕಿ ಡಾ.ರೂಪಕಲಾ ತಿಳಿಸಿದರು.Schools
ಕೆಜಿಎಫ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಶೈಕ್ಷಣಿಕ ವಲಯ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ 206 ವಿದ್ಯಾರ್ಥಿಗಳಿಗೆ ನಗರದ ಮುನ್ಸಿಪಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ತಮ್ಮ ಪಾಲಕರ ಕಷ್ಟ ಅರಿತುಕೊಳ್ಳಬೇಕು. ತಮ್ಮಲ್ಲಿನ ಕಷ್ಟ ಹೊರಗಿನ ಪ್ರಪಂಚಕ್ಕೆ ತಿಳಿಯದಂತೆ ಎಚ್ಚರಿಕೆವಹಿಸಿ ಸಾಲ-ಸೋಲವಾಡಿ ಮಕ್ಕಳು ಜೀವನದಲ್ಲಿ ಕಷ್ಟ ಅನುಭವಿಸಬಾರದು ಎಂದು ವಿದ್ಯೆ ಧಾರೆಯೆರೆಯುತ್ತಾರೆ. ಆದ್ದರಿಂದ ಮಕ್ಕಳು ನಿಮ್ಮ ತಂದೆ-ತಾಯಿಯಂದಿರ ಕಷ್ಟಗಳನ್ನು ಅರಿತುಕೊಂಡು ವಿದ್ಯೆಯೆಡೆಗೆ ಆಸಕ್ತಿ ಬೆಳಸಿಕೊಳ್ಳಬೇಕು ಎಂದು ಹೇಳಿದರು.
ಕಳೆದ ಸಾಲಿನಲ್ಲಿ ತಾಲೂಕು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕಡೆ ಸ್ಥಾನಪಡೆಯುವ ಮೂಲಕ ಹಿನ್ನಡೆಯಾಗಿತ್ತು. ಆದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾಲೂಕಿನ ಶಿಕ್ಷಕರೊಂದಿಗೆ ಸುಧೀರ್ ಚರ್ಚೆ ನಡೆಸಿ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಕರು ಮುಂದಾಗಬೇಕು. ರಾಜ್ಯದಲ್ಲಿ ಒಬ್ಬ ವಿದ್ಯಾರ್ಥಿಯಾದರು ಉತ್ತಮ ಅಂಕ ಪಡೆದು ತಾಲೂಕಿಗೆ ಕೀರ್ತಿ ತರುವಂತೆ ವಾಡಬೇಕು ಎಂಬ ಸೂಚನೆ ನೀಡಿದ್ದೇ ಆದರೆ ಕ್ಷೇತ್ರ ಶಿಕ್ಷಣಾಧಿಕಾರಿ ಒಳಗೊಂಡಂತೆ ಎಲ್ಲ ಶಾಲೆಗಳ ಶಿಕ್ಷಕರು ಹಗಲಿರುಳು ಶ್ರಮವಹಿಸಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳು ಸಾಧನೆ ವಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಿ.ನಾರಾಯಣಸ್ವಾಮಿ ವಾತನಾಡಿ, ಮಕ್ಕಳ ಮುಂದಿನ ಜೀವನ ಸುಖಕರವಾಗಿರಬೇಕು ಎಂದರೆ ಮಕ್ಕಳು ಶಿಕ್ಷಣದತ್ತ ಗಮನಹರಿಸಬೇಕು ಎಂದು ಹೇಳಿದರು.
ಸರ್ಕಾರಿ ನೌಕರರ ಸಂದ ಅಧ್ಯಕ್ಷ ನರಸಿಂಹಮೂರ್ತಿ ವಾತನಾಡಿ, ಎಸ್ಸೆಸ್ಸೆಲ್ಸಿ ಎಂಬುದು ಜೀವನದ ಪ್ರಥಮ ತಿರುವು ಪಡೆಯುವ ಹಂತವಾಗಿದ್ದು, ಮಕ್ಕಳು ನಿಮ್ಮ ಜೀವನದಲ್ಲಿ ಅತಿ ಹೆಚ್ಚು ಪ್ರೀತಿಸಬೇಕಿರುವುದು ನಿಮ್ಮ ತಂದೆ ತಾಯಿಯರನ್ನು ವಾತ್ರ ಎಂಬುದನ್ನು ಮರೆಯಬೇಡಿ ಎಂದರು.
ಜಿಪಂ ವಾಜಿ ಸದಸ್ಯ ಶಾಹಿದ್, ನಗರಸಭೆ ವಾಜಿ ಅಧ್ಯಕ್ಷೆ ಇಂದಿರಾಗಾಂಧಿ ದಯಾಶಂಕರ್, ನಗರಸಭೆ ವಾಜಿ ಸದಸ್ಯರಾದ ಜಯಲಕ್ಷ್ಮೀ ಭಾಸ್ಕರ್, ಶಾಲಿನಿ ನಂದಕುವಾರ್, ವೇಣುಗೋಪಾಲ್, ರಮೇಶ್, ಪ್ರವೀಣ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net