

ಪ್ರಮುಖ ಮುಖ್ಯಾಂಶಗಳು
ಶಿಥಿಲ ಶಾಲೆಗಳಲ್ಲಿ ಭಯದಡಿ ಶಿಕ್ಷಣ!
ವಿದ್ಯಾ ಕೇಂದ್ರಗಳಿಗೆ ಬೇಕಾದ ಕಾಯಕಲ್ಪ! ಬಿರುಕು ಬಿಟ್ಟ ಕೊಠಡಿಯಲ್ಲಿಯೇ ಪಾಠ
ಆನಂದ ಭಮ್ಮನ್ನವರ ಚಿಕ್ಕೋಡಿ:
ಬೆಳಗಾವಿ ಚಿಕ್ಕೋಡಿ ಶಿಕ್ಷಣ ಜಿಲ್ಲೆಯಲ್ಲಿ 1,438 ಶಾಲಾ ಕೊಠಡಿಗಳು ಶಿಥಿಲಗೊಂಡು, ಬೀಳುವ ಹಂತ ತಲುಪಿದರೂ ಕೈಗೊಳ್ಳದೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಪಾಲಕರು ಮಕ್ಕಳಿಗೆ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿರುವುದು ಒಂದೆಡೆಯಾದರೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಹಿನ್ನಡೆ ಆಗಿರುವುದು ಮತ್ತೊಂದೆಡೆ.
ಕೆಲ ಕೊಠಡಿಗಳ ಮೇಲ್ಛಾವಣಿ, ನೆಲಹಾಸು ಹಾಳಾಗಿವೆ. ಕಿಟಕಿ, ಬಾಗಿಲು ಮುರಿದಿವೆ. ಜಿಟಿಜಿಟಿ ಮಳೆಯಾದರೂ ಸಾಕು ಕೆಲ ಕೊಠಡಿಗಳು ಸೊರಿವೆ. ಗೋಡೆಗಳು ಬಿರುಕು ಬಿಟ್ಟಿವೆ. ಕೆಲ ಶಾಲೆಗಳ ಸ್ಥಿತಿಯಂತೂ ಹೇಳತೀರದ್ದಾಗಿದೆ. ಇಂತಹ ಕೊಠಡಿಗಳಲ್ಲೇ ಶಿಕ್ಷಕರು ಪಾಠ ಬೋಧನೆ ಮಾಡುತ್ತಿದ್ದಾರೆ.
ಎಲ್ಲೆಲ್ಲಿ ಎಷ್ಟು ಕೊಠಡಿಗಳು ಶಿಥಿಲ?:
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ೨೩೭ ಪ್ರಾಥಮಿಕ ಶಾಲೆಗಳು ೪೭೨ ಕೊಠಡಿಗಳು ಹಾಗೂ ೨೦ ಆಸ್ಪತ್ರೆಗಳು ೭೫ ಕೊಠಡಿಗಳು ಶಿಥಿಲಗೊಂಡಿವೆ. ಇವುಗಳಲ್ಲಿ ಅಥಣಿ ತಾಲೂಕಿನ ೨೬ ಪ್ರಾಥಮಿಕ ಶಾಲೆ, ೭ ನೇ ತರಗತಿಗಳ ಕೊಠಡಿ, ಕಾಗವಾಡ ಪ್ರಾಥಮಿಕ ೨೮, ಚಿಕ್ಕೋಡಿ ಪ್ರಾಥಮಿಕ ೪೯, ಆಸ್ಪತ್ರೆ ೨೧, ನಿಪ್ಪಾಣಿಯ ಪ್ರಾಥಮಿಕ 85, ಗೋಕಾಕ ಪ್ರಾಥಮಿಕ 46, ಪ್ರಾಥಮಿಕ 17, ಮೂಡಲಗಿ ಪ್ರಾಥಮಿಕ 87, ಪ್ರಾಥಮಿಕ 15, ಹುಕ್ಕೇರಿ ಪ್ರಾಥಮಿಕ 60, ಶಿಶು 15 ಮತ್ತು ರಾಯಬಾಗ ಪ್ರಾಥಮಿಕ ಶಾಲೆಯ 91 ಕೊಠಡಿ ಶಿಥಿಲಗೊಂಡಿವೆ ಎಂದು ಗುರುತಿಸಲಾಗಿದೆ.
ಅದೇ ರೀತಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 1,480 ಪ್ರಾಥಮಿಕ ಮತ್ತು ವೈದ್ಯಕೀಯಶಾಲೆಯ 9,863 ಕೊಠಡಿಗಳಿವೆ. ಇವುಗಳ ಹೊರಗೆ ೮೯೧ ಕೊಠಡಿ ಶಿಥಿಲಗೊಂಡಿವೆ. ೭೭೭ ಹೊಸ ಕೊಠಡಿಗಳು ಅಗತ್ಯ. ಹೆಚ್ಚು ಮಳೆಯಾಗುವ ಖಾನಾಪುರ ತಾಲೂಕಿನಲ್ಲೇ ಅತಿ ಹೆಚ್ಚು ೨೮೧ ಕೊಠಡಿಗಳು ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ.
----------
ಬಾಕ್ಸ್...
ಅಪಾಯವಾದರೆ ಯಾರು ಹೊಣೆ?
ಕೊಠಡಿಗಳು ಶಿಥಿಲಗೊಂಡಿದ್ದು, ಮಳೆ-ಗಾಳಿಗೆ ಬಿದ್ದು ಪ್ರಾಣ ಹಾನಿಯಾದರೆ ಯಾರು ಹೊಣೆ. ರಜೆ ಅವಯಲ್ಲೇ ಕೊಠಡಿಗಳನ್ನು ದುರಸ್ತಿ ಮಾಡಿ, ಹೊಸ ಕೊಠಡಿ ನಿರ್ಮಿಸಲಾಗಿದೆ. ಆದರೆ, ಸರ್ಕಾರ ಅದ್ಯಾವುದನ್ನೂ ಮಾಡದೆ ನಿರ್ಲಕ್ಷ ತೋರಿದೆ ಎಂದು ಆರೋಪಿಸಿರುವ ಪಾಲಕರು, ಹಾನಿಯಾದ ಮೇಲೆ ಎಚ್ಚೆತ್ತುಕೊಳ್ಳಲು ಬದಲಾಗಿ
ಕ್ರಮ ಕೈಗೊಳ್ಳುವುದು ಉತ್ತಮ ಎಂದರು.
------------
ಅಭಿಪ್ರಾಯ:
ಶಿಥಿಲಗೊಂಡ ಶಾಲಾ ಕೊಠಡಿಗಳನ್ನು ಗುರುತಿಸಲಾಗಿದೆ.
ಕೆಲವು ಕಡೆ ದುರಸ್ತಿ ಕಾರ್ಯ ಮಾಡಲಾಗಿದೆ. ಹೊಸ ಕಟ್ಟಡಗಳ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೊಸ ಕೊಠಡಿ ನಿರ್ಮಿಸಲಾಗುವುದು.
| ಲೀಲಾವತಿ ಹಿರೇಮಠ ಡಿಡಿಪಿಐ, ಬೆಳಗಾವಿ