ರಕ್ತದಾನದಿಂದ ಇನ್ನೊಬ್ಬರ ಜೀವ ರಕ್ಷಣೆ

ಯಾದಗಿರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಕೃಷಿಕ ಸಮಾಜದ ಪ್ರತಿನಿಽ ರಾಚನಗೌಡ ಮುದ್ನಾಳ, ರಾಜಯೋಗಿನಿ ನೀರಾ ಅಕ್ಕಾ, ಅಧ್ಯಕ್ಷ ಡಾ.ಸಿದ್ದರಾಜರೆಡ್ಡಿ, ಪ್ರಾಚಾರ್ಯ ಡಾ.ಸುಭಾಶಚಂದ್ರ ಕೌಲಗಿ, ಭೀಮನಗೌಡ ಕ್ಯಾತ್ನಾಳ, ಸಿದ್ರಾಮರೆಡ್ಡಿ ತಿಪ್ಪರೆಡ್ಡಿ, ಡಾ.ವಿವೇಕ ಕಟ್ಟಿ ಇತರರಿದ್ದರು.
ಯಾದಗಿರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಕೃಷಿಕ ಸಮಾಜದ ಪ್ರತಿನಿಽ ರಾಚನಗೌಡ ಮುದ್ನಾಳ, ರಾಜಯೋಗಿನಿ ನೀರಾ ಅಕ್ಕಾ, ಅಧ್ಯಕ್ಷ ಡಾ.ಸಿದ್ದರಾಜರೆಡ್ಡಿ, ಪ್ರಾಚಾರ್ಯ ಡಾ.ಸುಭಾಶಚಂದ್ರ ಕೌಲಗಿ, ಭೀಮನಗೌಡ ಕ್ಯಾತ್ನಾಳ, ಸಿದ್ರಾಮರೆಡ್ಡಿ ತಿಪ್ಪರೆಡ್ಡಿ, ಡಾ.ವಿವೇಕ ಕಟ್ಟಿ ಇತರರಿದ್ದರು.
Published on

ರಕ್ತದಾನವು ಕೇವಲ ಒಂದು ಪ್ರಕ್ರಿಯೆಯಲ್ಲ, ಅದು ಮತ್ತೊಂದು ಜೀವವನ್ನು ಉಳಿಸುವ ಪರಮೋಚ್ಚ ಮಾನವೀಯ ಕಾರ್ಯವಾಗಿದೆ ಎಂದು ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ರಾಚನಗೌಡ ಮುದ್ನಾಳ ಹೇಳಿದರು.

ಇಲ್ಲಿನ ಲಯನ್ಸ್ ಕ್ಲಬ್ ಹಾಗೂ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಸರ್ಕಾರಿ ಪದವಿ ಮಹಾವಿದ್ಯಾಲಯದ ಲಿಂ.ವಿಶ್ವನಾಥರಡ್ಡಿ ಮುದ್ನಾಳ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ ಬೃಹತ್ ಸ್ವಯಂಪ್ರೇರಿತ ರಕ್ತದಾನ ಮತ್ತು ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಈ ಎರಡೂ ಸಂಸ್ಥೆಗಳು ತೋರುತ್ತಿರುವ ನಿಸ್ವಾರ್ಥ ಸಾಮಾಜಿಕ ಕಾಳಜಿ ಮತ್ತು ಮಾನವೀಯ ಸೇವೆ ಅತ್ಯಂತ ಶ್ಲಾಘನೀಯ ಎಂದರು.
ನೇತೃತ್ವ ವಹಿಸಿ ಮಾತನಾಡಿದ ರಾಜಯೋಗಿನಿ ನೀರಾ ಅಕ್ಕಾ ಅವರು, ಪ್ರಸ್ತುತ ದಿನಗಳಲ್ಲಿ ಸಮಾಜಕ್ಕೆ ಮಾನವೀಯ ಮೌಲ್ಯ ಹಾಗೂ ನಿಸ್ವಾರ್ಥ ಸೇವಾ ಕಾರ್ಯ ಬಹಳ ಅಗತ್ಯವಾಗಿದ್ದು, ಬ್ರಹ್ಮಕುಮಾರಿ ಸಂಸ್ಥೆಯ ಉದ್ದೇಶ ಕುರಿತು ಬೆಳಕು ಚೆಲ್ಲಿದರು. ಆಂತರಿಕ ಶಾಂತಿ ಮತ್ತು ನೈತಿಕ ಮೌಲ್ಯಗಳ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವುದು ಸಂಸ್ಥೆಯ ಮುಖ್ಯ ಗುರಿಯಾಗಿದೆ. ರಕ್ತದಾನ ಹಾಗೂ ಉಚಿತ ಚಿಕಿತ್ಸೆಯಂತಹ ಜೀವ ರಕ್ಷಕ ಸೇವಾ ಕಾರ್ಯ ಈ ಉದಾತ್ತ ಧ್ಯೇಯಕ್ಕೆ ಪೂರಕವಾಗಿವೆ. ಹೀಗಾಗಿ ಪ್ರತಿಯೊಬ್ಬರೂ ಇಂತಹ ಮಾನವೀಯ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಸಿದ್ಧರಾಜರೆಡ್ಡಿ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆ ನೀಗಿಸಲು ಇಂತಹ ಶಿಬಿರ ದಾರಿದೀಪವಾಗಿದೆ. ಮುಂಬರುವ ದಿನಗಳಲ್ಲಿ ಲಯನ್ಸ್ ಕ್ಲಬ್ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕವಾದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಚನೆಯಿದ್ದು ಎಲ್ಲರ ಸಹಕಾರ ಅಗತ್ಯ ಎಂದರು.
ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುಭಾಶಚಂದ್ರ ಕೌಲಗಿ, ನಿಕಟ ಪೂರ್ವ ಅಧ್ಯಕ್ಷ ಭೀಮನಗೌಡ ಕ್ಯಾತ್ನಾಳ, ಲಯನ್ಸ್ ಕ್ಲಬ್ ಖಜಾಂಚಿ ಸಿದ್ರಾಮರೆಡ್ಡಿ ತಿಪ್ಪರೆಡ್ಡಿ ಹಾಗೂ ಹಿರಿಯ ವೈದ್ಯ ಡಾ.ವಿವೇಕ ಕಟ್ಟಿ ಅವರು ಅತಿಥಿಗಳಾಗಿದ್ದರು. ಶಿಬಿರದಲ್ಲಿ ಹಿರಿಯ ಲಯನ್ಸ್ ಸದಸ್ಯರಾದ ಡಾ. ಶಿವಪುತ್ರರೆಡ್ಡಿ ಪಾಟೀಲ ಚಟ್ನಳ್ಳಿ, ಮಲ್ಲಣ್ಣಗೌಡ ಹಳಿಮನಿ ಕೌಳೂರ, ಪಂಪಾಪತಿರೆಡ್ಡಿ ಪಾಟೀಲ, ಡಾ. ಭೀಮರಾಯ ಲಿಂಗೇರಿ, ಡಾ. ಮಹೇಶರೆಡ್ಡಿ, ಸಾಹೇಬರೆಡ್ಡಿ ಬಂಗಾರಿ, ಹೇಮಂತಕುಮಾರ ಕಶೆಟ್ಟಿ, ವಿರುಪಾಕ್ಷಯ್ಯ ಸ್ವಾಮಿ, ಶಿವಕುಮಾರ ಪಾಟೀಲ ಅರಿಕೇರಾ ಇತರರಿದ್ದರು.
ಯಾದಗಿರಿ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರು, ರಕ್ತನಿಽ ಕೇಂದ್ರದ ಸಿಬ್ಬಂದಿ ಹಾಗೂ ದಂತ ವೈದ್ಯಕೀಯ ತಂಡದವರು ರಕ್ತ ಸಂಗ್ರಹಣೆ ಮತ್ತು ತಪಾಸಣೆ ಕಾರ್ಯ ಯಶಸ್ಸಾಗಿ ನಿರ್ವಹಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ದಾನಿಗಳಿಗೆ ಹಣ್ಣು, ಜ್ಯೂಸ್ ವಿತರಿಸಿ, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಉಚಿತ ದಂತ ಚಿಕಿತ್ಸಾ ಶಿಬಿರ

ಈ ವೇಳೆ ರಕ್ತದಾನ ಶಿಬಿರದ ಜತೆಗೆ ಪಾಟೀಲ್ ದಂತ ಚಿಕಿತ್ಸಾ ಕೇಂದ್ರದ ಡಾ.ಗುರುದೇವಿ ಪಾಟೀಲ್ ಅವರ ನೇತೃತ್ವದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಕೂಡ ನಡೆಯಿತು. ಶಿಬಿರದಲ್ಲಿ ನೂರಾರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸೆಯ ಪ್ರಯೋಜನ ಪಡೆದುಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net