ಕಾಮನ್‌ವೆಲ್ತ್ ಗೆ ಬೆಳಗಾವಿ ಸ್ವಾತಿಕ್ ಆಯ್ಕೆ

ಸ್ವಾತಿಕ್ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆ
ಸ್ವಾತಿಕ್ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆ
Published on

ಪ್ರಮುಖ ಮುಖ್ಯಾಂಶಗಳು

  • ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಬೆಳಗಾವಿ ಯುವಕ ಆಯ್ಕೆ
  • ಸ್ವಾತಿಕ್ ಬೆಳಗಾವಿ ಈಜುಪಟು
  • ಸ್ವಾತಿಕ್ ನಗರದ ಗಣ್ಯರಿಂದ ಅಭಿನಂದನೆ
ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸ್ವಾತಿಕ್ ಆಯ್ಕೆ
ಬೆಳಗಾವಿ : ನಗರದ ಸ್ಮಿಮ್ಮರ್ಸ್ ಕ್ಲಬ್ ಈಜುಪಟು ಸ್ವಾತಿಕ ಪಾಟೀಲ ಸ್ಕಾಟ್ಲೆಂಡ್ ನ ಗ್ಲಾಸ್ಗೋದಲ್ಲಿ
ಜು.23 ರಿಂದ ಆ.2 ರವರೆಗೆ ನಡೆಯಲಿರುವ 2026 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಪುರುಷರ 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಎಸ್ ಬಿ9 ಸ್ಪರ್ಧೆಯಲ್ಲಿ ಸ್ವಾತಿಕ್ ಅರ್ಹತೆ ಪಡೆದಿದ್ದಾರೆ. ಸ್ವಾತಿಕ್ ಪಾಟೀಲ ತಾಲೂಕಿನ ಮುತಗಾ ಗ್ರಾಮದವರಾಗಿದ್ದು, ಅಲಹಾಬಾದ್‌ನಲ್ಲಿ ಎನ್ಐಟಿ ಪದವೀಧರರಾಗಿದ್ದು, ಪ್ರಸ್ತುತ ಝೋಪಿಂಗ್‌ನಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದಾರೆ.ನಗರದ ಜೆಎನ್‌ಎಂಸಿ ಈಜುಕೊಳದಲ್ಲಿ ತರಬೇತಿ ಪಡೆದ ಇವರಿಗೆ ಉಮೇಶ್ ಕಲಘಟಗಿ,ಅಂಕುಶ ಕಣಬರಕರ ತರಬೇತಿ ನೀಡಿದ್ದಾರೆ.
ಸ್ವಾತಿಕ್ ಪಾಟೀಲ್ ಅವರ ಸಾಧನೆಗೆ ಕೆಎಲ್ಇ ಗೌರವ ಕಾರ್ಯಾದ್ಯಕ್ಷ ಡಾ. ಪ್ರಭಾಕರ ಕೋರೆ , ಜಯಂತ ಹುಂಬರವಾಡಿ , ದಿಲೀಪ್ ಚಿಟ್ನಿಸ್, ರಾಮ್ ಮಲ್ಯ, ಡಾ. ನಿತಿನ್ ಖೋತ,ಅವಿನಾಶ ಪೋತದಾರ, ಮಾಣಿಕ್ಯ ಕಪಾಡಿಯಾ, ಲತಾ ಕಿತ್ತೂರ, ಸುಧೀರ ಕುಸಾನೆ, ಪ್ರಸಾದ ತೆಂಡೋಲ್ಕರ ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net