ಬದುಕಿನ ನೆಮ್ಮದಿಗೆ ಸತ್ಸಂಗ ಸಹಕಾರಿ

ಗಲಗಲಿಯ ಗಾಲವ ಶಿಕ್ಷಣ ಸಂಸ್ಥೆಯಲ್ಲಿ ಗಾಲವ ಮಹರ್ಷಿ ಚಿಂತನ ವೇದಿಕೆ ಆಯೋಜಿಸಿದ್ದ 210ನೇ ಸಾಪ್ತಾಹಿಕ ಸತ್ಸಂಗದ ವಿಶೇಷ ಚಿಂತನಗೋಷ್ಠಿಯ ಕಾರ್ಯಕ್ರಮದಲ್ಲಿ ಮರೆಗುದ್ದಿಯ ಪ್ರಭುತೋಂಟದಾರ್ಯ ಮಹಾಸ್ವಾಮೀಜಿ ಅವರನ್ನು ಸತ್ಕರಿಸಲಾಯಿತು. ಐ.ಬಿ. ನ್ಯಾಮಗೌಡ, ವಿ.ಜಿ.ಬಾಳಶೆಟ್ಟಿ, ಎಂ.ಡಿ.ದೇಸಾಯಿ, ಶಿವಬಸು ಮಲ್ಲನ್ನವರ, ದುಂಡಪ್ಪ ಚಿಕರಡ್ಡಿ, ಸುರೇಶ ಶಿರಬೂರ, ಕಾಮಣ್ಣ ಗೋಕಾವಿ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮರೆಗುದ್ದಿಯ ಪ್ರಭುತೋಂಟದಾರ್ಯ ಮಹಾಸ್ವಾಮೀಜಿಗಳು ಹೇಳಿಕೆ
  • 210 ನೇ ಸಾಪ್ತಾಹಿಕ ಸತ್ಸಂಗದ ವಿಶೇಷ ಚಿಂತನಗೋಷ್ಠಿ
ಗಲಗಲಿ: ಸತ್ಸಂಗವು ಸಮಾಜದ ಸ್ವಾಸ್ಥೃ ಕಾಪಾಡುವಲ್ಲಿ ಮಹತ್ವದಪಾತ್ರ ವಹಿಸುವುದರೊಂದಿಗೆ ಮಾನವನ ಜೀವನದಲ್ಲಿ ಅಮೂಲಾಗ್ರ ಬದಲಾವಣೆ ತರುವದರಲ್ಲಿ ಯಾವುದೇ ಸಂಶಯವಿಲ್ಲ. ಇಂದಿನ ಒತ್ತಡದ ಬದುಕಿನಲ್ಲಿ ಮನಸ್ಸಿಗೆ ನೆಮ್ಮದಿ ನೀಡುವ ಏಕೈಕ ಅಸ  ಅದು ಸತ್ಸಂಗವಾಗಿದೆ ಎಂದು ಮರೆಗುದ್ದಿಯ ಪ್ರಭುತೋಂಟದಾರ್ಯ ಮಹಾಸ್ವಾಮೀಜಿಗಳು ಹೇಳಿದರು.
ಗ್ರಾಮದ ಗಾಲವ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸೋಮವಾರ ಗಾಲವ ಮಹರ್ಷಿ ಚಿಂತನ ವೇದಿಕೆಯವರು ಆಯೋಜಿಸಿದ್ದ 210 ನೇ ಸಾಪ್ತಾಹಿಕ ಸತ್ಸಂಗದ ವಿಶೇಷ ಚಿಂತನಗೋಷ್ಠಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  
ನಿರಂತರವಾಗಿ ಐದು ವರ್ಷ ಸತ್ಸಂಗ ನಡೆದು ಇಂದು ಮುಂದೆ ಸಾಗುತ್ತಿರುವ ಸಂತಸದ ಸಂಗತಿ. ಆಡಂಬರ, ಅಧಿಕಾರ, ಅಂತಸ್ತು ಇದ್ಯಾವುದರ ಪ್ರಮೇಯವಿಲ್ಲದೇ ಸಮಯಪಾಲನೆಗೆ ಒತ್ತುಕೊಟ್ಟು ಸತ್ಸಂಗ ನಡೆಸುತ್ತ ಬಂದದ್ದು ಶ್ಲಾಘನೀಯ ಕಾರ್ಯ ಎಂದರು. 
ಶಿರೋಳದ ಬಸವ ಬೃಂದಾವನಮಠದ ಮಹಾಂತಯ್ಯ ಸ್ವಾಮೀಜಿಗಳು ಮಾತನಾಡಿ, ಶಿವಸ್ಮರಣೆ, ಸತ್ಸಂಗ, ಧ್ಯಾನ, ದಾನ ಹಾಗೂ ಗುರುಸೇವೆಯ ಮೂಲಕ ಭವಬಂಧನ ಬಿಡಿಸಿಕೊಳ್ಳಲು ಸಾಧ್ಯ ಎಂದರು. 
ಮುಖಂಡರಾದ ಧುರೀಣ ನಿಂಗಣ್ಣ ಗೋಳಿಪಲ್ಲೆ, ರಾಮಾಚಾರ್ಯ ಕಟ್ಟಿ, ಹಣಮಂತ ಮಂಟೂರ, ಬಸಲಿಂಗಪ್ಪ ಗೋಡಿ, ತಿರಕಪ್ಪ ಬಡಿಗೇರ ಸೇರಿ ವಿವಿಧ ಮಹನೀಯರನ್ನು ಸತ್ಕರಿಸಲಾಯಿತು. 
ಐ.ಬಿ. ನ್ಯಾಮಗೌಡ, ವಿ.ಜಿ.ಬಾಳಶೆಟ್ಟಿ, ಎಂ.ಡಿ.ದೇಸಾಯಿ, ಶಿವಬಸು ಮಲ್ಲನ್ನವರ, ದುಂಡಪ್ಪ ಚಿಕರಡ್ಡಿ, ಸುರೇಶ ಶಿರಬೂರ, ಕಾಮಣ್ಣ ಗೋಕಾವಿ ಇದ್ದರು. ಸುನೀಲಗೌಡ ನ್ಯಾಮಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು, ಸುಭಾಸ ಶೆಟ್ಟರ ಪ್ರಾರ್ಥಿಸಿದರು, ಎಚ್.ವೈ.ಜರಾಳಿ ನಿರೂಪಿಸಿದರು. ಮುರಗಯ್ಯ ಕಾಶಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net