ಬೆಂಗಳೂರು: 'ಎರಡೂ ಪಕ್ಷದಿಂದ ಕ್ರಾಸ್ ಓಟ್ ಆಗಿದೆ, ಈ ವಿಚಾರವನ್ನು ಪ್ರತಿಪಕ್ಷಗಳೂ ಕೂಡ ಒಪ್ಪಿಕೊಂಡಿದ್ದಾರೆ. ಬೇರೆಯವರು ಹಾಕಿದ್ದಕ್ಕೆ ನಮಗೆ 32 ಮತಗಳು ಸಿಕ್ಕಿದೆ. ಸಿಎಂ, ಅಧ್ಯಕ್ಷರು ಸುರ್ಜೇವಾಲ ಅವರ ಪ್ರಯತ್ನ ಇದೆ. ಅವರ ಜಂಟಿ ಪ್ರಯತ್ನದಿಂದಾಗಿ ಇಷ್ಟು ದೊಡ್ಡ ಮಟ್ಟದ ಮತಗಳನ್ನು ಪಡೆಯಲು ಸಾಧ್ಯವಾಗಿದೆ' ಎಂದು ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.