ವಿಡಂಬನಾತ್ಮಕ ನಾಟಕ ಮುಖ್ಯಮಂತ್ರಿ ಪ್ರದರ್ಶನ

ಕಲಬುರಗಿ ಡಾ.ಎಸ್​.ಎಂ.ಪಂಡಿತ್​ ರಂಗಮಂದಿರದಲ್ಲಿ ಸೋಮವಾರ ಸಂಜೆ ನಡೆದ ವಿಡಂಬನಾತ್ಮಕ ನಾಟಕ ಮುಖ್ಯಮಂತ್ರಿ ಪ್ರದರ್ಶದ ಒಂದು ನೋಟ.
ಕಲಬುರಗಿ ಡಾ.ಎಸ್​.ಎಂ.ಪಂಡಿತ್​ ರಂಗಮಂದಿರದಲ್ಲಿ ಸೋಮವಾರ ಸಂಜೆ ನಡೆದ ವಿಡಂಬನಾತ್ಮಕ ನಾಟಕ ಮುಖ್ಯಮಂತ್ರಿ ಪ್ರದರ್ಶದ ಒಂದು ನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಚಾಣಾ ರಾಜಕಾರಣದ ಒಳಸುಳಿ ಬಿಚ್ಚಿಡುವ ಅದ್ಭುತ ನಾಟಕ
ಕಲಬುರಗಿ: ನಾಟಕೋತ್ಸವದ ಅಂಗವಾಗಿ ನಗರದ ಡಾ.ಎಸ್​.ಎಂ.ಪಂಡಿತ್​ ರಂಗಮಂದಿರದಲ್ಲಿ ಖ್ಯಾತ ನಾಟಕಕಾರ ಟಿ.ಎಸ್​.ಲೋಹಿತಾಶ್ವ ರಚನೆಯ, ರಂಗಭೂಮಿ ಹಾಗೂ ಚಲನಚಿತ್ರ ಹಿರಿಯ ಮುಖ್ಯಮಂತ್ರಿ ಚಂದ್ರು ಮುಖ್ಯ ಭೂಮಿಕೆಯ, ದಶಕಗಳಿಂದ ಕನ್ನಡ ರಂಗಭೂಮಿಯಲ್ಲಿ ಅಲೆ ಎಬ್ಬಿಸಿರುವ ಮುಖ್ಯಮಂತ್ರಿ ನಾಟಕ ಸೋಮವಾರ ಪ್ರದರ್ಶನಗೊಂಡಿತು.
ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಮೈಲಿಗಲ್ಲು ಎನಿಸಿರುವ, ಚಾಣಾ ರಾಜಕಾರಣದ ಒಳಸುಳಿ ಬಿಚ್ಚಿಡುವ ಅದ್ಭುತ ನಾಟಕ ಮುಖ್ಯಮಂತ್ರಿ. 1970ರ ದಶಕದಲ್ಲಿ ಟಿ.ಎಸ್​.ಲೋಹಿತಾಶ್ವ ಅವರ ಲೇಖನಿಯಲ್ಲಿ ಮೂಡಿಬಂದಿರುವ ಈ ನಾಟಕವು, ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಸಂಚು, ಪಾಂತರ, ರಾಜಕೀಯ ತಂತ್ರಗಾರಿಕೆ ಮತ್ತು ಕುರ್ಚಿಯ ಮೇಲಿನ ವ್ಯಾಮೋಹ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.
ಹೆಸರಾಂತ ನಟ ಮುಖ್ಯಮಂತ್ರಿ ಚಂದ್ರು ಅವರು ಈ ನಾಟಕದ ಮುಖ್ಯ ಪಾತ್ರದಲ್ಲಿ ಸಾವಿರಾರು ಪ್ರದರ್ಶನಗಳನ್ನು ನೀಡಿ, ಈ ಪಾತ್ರಕ್ಕೆ ಜೀವತುಂಬಿದ್ದಾರೆ ಎಂಬುದು ವಿಶೇಷ. ಇಂದಿನ ರಾಜಕೀಯ ವ್ಯವಸ್ಥೆಗೆ ಕನ್ನಡಿ ಹಿಡಿಯುವಂತಹ ಪ್ರಸ್ತುತ ಮತ್ತು ಮಾರ್ಮಿಕ ಸಂಭಾಷಣೆಗಳು ಇಂದಿಗೂ ಅನ್ವಯಿಸುತ್ತವೆ. ರಾಜಕೀಯ ಮುತ್ಸದ್ದಿತನ ಮತ್ತು ತಂತ್ರಗಾರಿಕೆ ಬಿಂಬಿಸುವ ಹಿರಿಯ ಕಲಾವಿದರ ಅಭಿನಯ. ಹಾಸ್ಯ ಮತ್ತು ವಿಡಂಬನೆ ಗಂಭೀರ ವಿಷಯವನ್ನೂ ಹಾಸ್ಯದ ಲೇಪನದೊಂದಿಗೆ ಪ್ರೇಕರಿಗೆ ಮುಟ್ಟಿಸುವ ಶೈಲಿ ವಿಶೇಷವಾಗಿದೆ.
ರಾಜಕೀಯದ ಆಟೋಟಗಳನ್ನು ಹತ್ತಿರದಿಂದ ನೋಡಿದ ಪ್ರೇಕರು ನಾಟಕದ ನಂತರ ಮುಖ್ಯಮಂತ್ರಿ ಚಂದ್ರು ಸೇರಿ ಇತರೆ ನಟರೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.
ನಗರದ ಡಾ.ಪಂಡಿತ್​ ರಂಗಮಂದಿರದಲ್ಲಿ ಬೆಳಗ್ಗೆ 11ಕ್ಕೆ ರಂಗಭೂಮಿ ಮತ್ತು ಜನಪದ ಪಠ್ಯ ಕುರಿತಂತೆ ಕೃಷ್ಣಮೂರ್ತಿ ಹನೂರು ಅವರು ಸಂವಾದ ನಡೆಸಿ ಕೊಡಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net