500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಂಸ್ಥೆಗಳ ಮುಖಂಡರು ಭಾಗಿ
ಕೋಲಾರ: ಸರ್ದಾರ್ ವಲ್ಲಬಾಯಿ ಪಟೇಲ್ ಅವರ 150 ಜನ್ಮ ದಿನಾಚರಣೆ ಪ್ರಯುಕ್ತ ನಗರದಲ್ಲಿ ನ.24ರಂದು ಸರ್ದಾರ್ ಏಕತಾ ಓಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ಹೇಳಿದರು. ekatha ota
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಜನರಲ್ಲಿ ಏಕತೆ, ದೇಶಭಕ್ತಿ ಮತ್ತು ನಾಗರಿಕ ಜವಾಬ್ದಾರಿಯ ಮನೋಭಾವ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಕಾರ್ಯಕ್ರಮದಾಗಿದೆ ಎಂದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ 500ಕ್ಕೂ ಹೆಚ್ಚು ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂ&ಸಂಸ್ಥೆಗಳ ಮುಖಂಡರು ಭಾಗವಹಿಸುವ ನಿರೀೆಯಿದ್ದು, ಅವರಿಗೆಲ್ಲ ಟಿ-&ಶರ್ಟ್, ಟೋಪಿ, ಪ್ರಮಾಣ ಪತ್ರ ಹಾಗೂ, ಓಆರ್ಎಸ್, ಮಜ್ಜಿಗೆ, ಲಘು ಉಪಹಾರ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಮೈ- ಭಾರತ್ ಕೇಂದ್ರ ಹಾಗೂ ಜಿಲ್ಲಾಡಳಿತ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಶ್ರೀ ದೇವರಾಜ್ ಅರಸು ವೈದ್ಯಕಿಯ ಮಹಾವಿದ್ಯಾಲಯದ ಸಹಯೋಗದಲ್ಲಿ ಏಕತಾ ಓಟ ಆಯೋಜಿಸಲಾಗುತ್ತಿದ್ದು, ನಗರದ ಪ್ರವಾಸಿ ಮಂದಿರದ ವೃತ್ತದಿಂದ ಪ್ರಾರಂಭವಾಗಿ ಕ್ಲಾಕ್ ಟವರ್- ಹೊಸ ಬಸ್ ನಿಲ್ದಾಣ-, ಕಾಳಮ್ಮ ಗುಡಿ ಬೀದಿ, ಎಂ.ಜಿ. ರಸ್ತೆ ಮೂಲಕ ಸಾಗಿ ಗಾಂಧಿ ವನದ ಸಮೀಪ ಕೊನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಮೇರಾ ಯುವ ಭಾರತ ಮೂಲಕ, ವಿಕಸಿತ ಭಾರತ್ ಪಾದಯಾತ್ರೆಗಳನ್ನು ಆಯೋಜಿಸಲಾಗುತ್ತಿದ್ದು, ನಾಗರಿಕ ಸಂಬಂಧವನ್ನು ಗಾಢವಾಗಿಸಲು ಮತ್ತು ರಾಷ್ಟ್ರೀಯ ನಾಯಕರ ಬಗ್ಗೆ ಯುವಜನತೆಗೆ ಅರಿವು ಮೂಡಿಸಲಾಗುವುದು. 15ರಿಂದ -29 ವರ್ಷದ ವಯೋಮಾನದ ಯುವಕರು, ಯುವತಿಯರು ಪಾಲ್ಗೊಳ್ಳಬಹುದು. ಸಾಮಾಜಿಕ ಮಾಧ್ಯಮ ರೀಲ್ಸ್ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮತ್ತು ಸರ್ದಾರ್&150 ಯುವ ನಾಯಕರ ಕಾರ್ಯಕ್ರಮವನ್ನು ಮೈ ಭಾರತ ಪೋರ್ಟ್ಲ್ನಲ್ಲಿ ಆಯೋಜಿಸಲಾಗಿದೆ. ಇಲ್ಲಿ ವಿಜೇತರಾದ 150 ಮಂದಿ ರಾಷ್ಟ್ರೀಯ ಪಾದಯಾತ್ರೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಯುವ ಅಧಿಕಾರಿ ರಾಜೇಶ್ ಕಾರಂತ್ ಮಾತನಾಡಿ, ಹೆಚ್ಚಿನ ಮಾಹಿತಿಗಾಗಿ ಮೈ ಭಾರತ್ ಪೋರ್ಟ್ಲ್ನ (ಡಿಡಿಡಿ.ಞಢಚಿಜಚ್ಟಚಠಿ.ಜಟಡ.ಜ್ಞಿ)ನ್ನು ಸಂಪರ್ಕಿಸಬಹುದು ಅಥವಾ ಕಚೇರಿಯನ್ನು ಭೇಟಿ ಮಾಡಬಹುದು ಎಂದು ತಿಳಿಸಿದರು.
ದೇಶದ ಯುವಜನರಲ್ಲಿ ಏಕತೆ, ದೇಶಭಕ್ತಿ, ನಾಗರಿಕ ಜವಾಬ್ದಾರಿಯ ಮನೋಭಾವವನ್ನು ಜಾಗೃತಗೊಳಿಸುವ ಪ್ರಯತ್ನ ಇದಾಗಿದೆ. ಯುವಕರು ದೈನಂದಿನ ಜೀವನದಲ್ಲಿ, ನಾಗರಿಕ ನಿಶ್ಚಿತಾರ್ಥದಲ್ಲಿ ಏಕ್ ಭಾರತ, ಆತ್ಮ ನಿರ್ಭರ ಭಾರತದ ಆದರ್ಶಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ.