ಹೊಳೆನರಸೀಪುರ ಪಟ್ಟಣದ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಅಧಿಕ ಜ್ಯೇಷ್ಠ ಮಾಸದ ಪ್ರಯುಕ್ತ ಸಪ್ತಗಿರಿ ಪೂಜೆಯಲ್ಲಿ ಭಾಗಿಯಾಗಿರುವ ಸುಮಂಗಲಿಯರನ್ನು ಕಾಣಬಹುದಾಗಿದೆ.
Published on:
Copied
Follow Us
ಹೊಳೆನರಸೀಪುರ: ಜೇಷ್ಠ ಮಾಸ ಈ ವರ್ಷ ಅಧಿಕ ಮಾಸ ಬಂದಿರುವ ಹಿನ್ನಲೆಯಲ್ಲಿ ಪಟ್ಟಣದ ವಾಸವಿ ಮಹಿಳಾ ಮಂಡಳಿಯಿಂದ ಸಪ್ತಗಿರಿ ಪೂಜೆಯನ್ನು ಪಟ್ಟಣದ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಭಾನುವಾರ ಆಚರಿಸಲಾಯಿತು.
ಸಪ್ತಗಿರಿ ಪೂಜೆ ಕಳೆದ 25 ವರ್ಷಗಳ ಹಿಂದೆ ಆಯೋಜಿಸಲಾಗಿತ್ತೆಂದು ಮಹಿಳಾ ಮಂಡಳಿಯ ಅಧ್ಯಕ್ಷೆ ವೀಣಾ ಸತೀಶ್ ಹಾಗೂ ಲಕ್ಷ್ಮೀಗುಪ್ತ ಮಾಹಿತಿ ನೀಡಿದರು. ಈ ವಿಶೇಷ ಪೂಜೆ ನಡೆಸುವುದರಿಂದ ಲೋಕ ಕಲ್ಯಾಣದ ಜತೆಗೆ ಸಮಾಜದಲ್ಲಿ ಸಮೃದ್ಧ ಮಳೆ, ಬೆಳೆ ಜನರ ಆರೋಗ್ಯ ವೃದ್ಧಿಸಲಿದೆ ಎಂಬ ನಂಬಿಕ ಹಾಗೂ ಪ್ರತೀತಿ ಇದೆ ಎಂದರು.
ಈ ವಿಶೇಷ ಪೂಜೆಯನ್ನು ಬೆಳಗ್ಗೆ ಏಳು ಗಂಟೆಗೆ ಆರಂಭಗೊಂಡು ಸತತ ಆರು ಗಂಟೆಗಳ ಕಾಲ ಪುರೋಹಿತ ಲೋಕೇಶ್ ಭಟ್ ಹಾಗೂ ಎಚ್.ಆರ್.ಮಂಜುನಾಥ್ ಅವರ ನೇತ್ರತ್ವದಲ್ಲಿ ನಡೆಯಿತು. ಪೂಜೆ ಪ್ರಯುಕ್ತ ದೇವಾಲಯದ ಸಭಾಂಗಣದಲ್ಲಿ ತಿರುಮಲದ ಏಳು ಬೆಟ್ಟಗಳನ್ನು ನಿರ್ಮಿಸಿ ಸುಮಾರು 48 ಮಂದಿ ಸುಮಂಗಲಿಯರು ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು. ಏಳು ಬೆಟ್ಟಗಳ ನಡುವೆ ತಿರುಪತಿ ವೆಂಕಟೇಶನ ವಿಗ್ರಹವನ್ನು ಸ್ಥಾಪಿಸಿ ವಿಶೇಷ ಪೂಜೆ ನಡೆಸಲಾಯಿತು.
ಈ ವಿಶೇಷ ಪೂಜೆ ನಂತರ ಈ ವಿಶೇಷ ಪೂಜಾ ಕಾರ್ಯಕ್ರಮದ ನಂತರ ಮಹಾ ಮಂಗಳಾರತಿ ಹಾಗು ಪ್ರಸಾದ ವಿನಿಯೋಗ ನಡೆಯಿತು.