ಉತ್ತರ ವಲಯ ಐಜಿಪಿ ಸಂದೀಪ ಅಧಿಕಾರ ಸ್ವೀಕಾರ

ಉತ್ತರ ವಲಯ ಐಜಿಪಿಯಾಗಿ ನೇಮಕಗೊಂಡ ಸಂದೀಪ ಪಾಟೀಲಗೆ ಗುರುವಾರ ಹಾಲಿ ಐಜಿಪಿ ಡಾ.ಚೇತನಸಿಂಗ್ ರಾಥೋರ್ ಅಧಿಕಾರ ಹಸ್ತಾಂತರಿಸಿದರು.
ಉತ್ತರ ವಲಯ ಐಜಿಪಿಯಾಗಿ ನೇಮಕಗೊಂಡ ಸಂದೀಪ ಪಾಟೀಲಗೆ ಗುರುವಾರ ಹಾಲಿ ಐಜಿಪಿ ಡಾ.ಚೇತನಸಿಂಗ್ ರಾಥೋರ್ ಅಧಿಕಾರ ಹಸ್ತಾಂತರಿಸಿದರು.
Published on
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಉತ್ತರ ವಲಯ ಐಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಸಂದೀಪ ಪಾಟೀಲ ಗುರುವಾರ ಇಲ್ಲಿನ ಕೇಂದ್ರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಈವರೆಗಿನ ಉತ್ತರ ವಲಯ ಐಜಿಪಿ ಡಾ.ಚೇತನಸಿಂಗ್ ರಾಥೋರ್, ಪಾಟೀಲಗೆ ಅಧಿಕಾರ ಹಸ್ತಾಂತರಿಸಿದರು.
ಈ ಹಿಂದೆ ಬೆಳಗಾವಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂದೀಪ ಪಾಟೀಲ ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಹೀಗಾಗಿ, ಇಂಥವರು ಮಹಾರಾಷ್ಟ್ರ ಮತ್ತು ಗೋವಾ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಅತ್ಯಂತ ಸೂಕ್ಷ್ಮ ವಲಯಕ್ಕೆ ಐಜಿಪಿಯಾಗಿ ಬಂದಿರುವುದರಿಂದ ಇವರ ನೇಮಕ ಮಹತ್ವ ಪಡೆದುಕೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net