ಇದಕ್ಕೂ ಮುನ್ನ ನಡೆದ ದುಂಡುಮೇಜಿನ ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳು ಶ್ರೀಗಂಧದ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು, ಬೆಳೆಗಾರರ ಉತ್ತೇಜನಕ್ಕೆ ಏನೆಲ್ಲಾ ಕ್ರಮವಾಗಬೇಕಿದೆ ಎಂಬಿತ್ಯಾದಿ ಸೇರಿ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಒಕ್ಕೂಟದ ಸಿಇಒ ತಳ್ಳಪಲ್ಲಿ ರಘುನಂದನ, ಕಾರ್ಯಕಾರಿ ಸಮಿತಿ ಸದಸ್ಯ ವಿ.ಪಿ. ಜಯಕುಮಾರ್ ಸೇರಿ ಮಹಾರಾಷ್ಟ್ರ, ಗುಜರಾತ್, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ಉಪಸ್ಥಿತರಿದ್ದರು.