ಭಗವಂತನ ಸ್ಮರಣೆಯಿಂದ ಮೋಕ್ಷ ಸಾಧ್ಯ...ಕರ್ನಾಟಕ ಪುಣ್ಯಭೂಮಿ ಎಂದ ಪ್ರಧಾನಿ ನರೇಂದ್ರ ಮೋದಿ | Narendra Modi In Udupi

 Narendra Modi In Udupi |ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆದ ಲಕ್ಷ ಕಂಠ ಪಾರಾಯಣ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ
Narendra Modi In Udupi |ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆದ ಲಕ್ಷ ಕಂಠ ಪಾರಾಯಣ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ
Published on
ಉಡುಪಿ: ಕರ್ನಾಟಕವು ಪುಣ್ಯ ಭೂಮಿಯಾಗಿದ್ದು, ಉಡುಪಿಗೆ ಬರುವುದು ಸದಾ ನನಗೆ ಖುಷಿಯ ವಿಚಾರ, ಈ ಜಿಲ್ಲೆಗೂ, ನನ್ನ ಜನ್ಮಭೂಮಿ ಗುಜರಾತ್​ಗೆ ಅವಿನಾಭಾವ ಸಂಬಂಧವಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆದ ಲಕ್ಷ ಕಂಠ ಪಾರಾಯಣ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಗವಂತನ ಸ್ಮರಣೆಯಿಂದ ಮಾತ್ರ ಮುಕ್ತಿ ಸಾಧ್ಯ, ನಮ್ಮ ಸಮಾಜದಲ್ಲಿ ಮಂತ್ರಪಠಣೆ ಶತಮಾನಗಳಿಂದ ನಡೆಯುತ್ತಿದ್ದು, ಕಲಿಯುಗದಲ್ಲಿ ಭಗವಂತನ ಕೀರ್ತನೆ ಮಹಾನ್​ ಸಾಧನೆ. ರಾಮ ಜನ್ಮ ಭೂಮಿ ಚಳವಳಿಯಲ್ಲಿ ಉಡುಪಿಯ ಪಾತ್ರ ಮಹತ್ವದಾಗಿದ್ದು, ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ದಶಕಗಳ ಹಿಂದೆ ಈ ಚಳುವಳಿಗೆ ಮಾರ್ಗದರ್ಶನ ನೀಡಿದ್ದರು, ಇಡೀ ದೇಶ ಆ ಸಂದರ್ಭವನ್ನು ಸ್ಮರಿಸುತ್ತದೆ. ಇಲ್ಲಿನ ದೇವಾಲಯ ಹೋರಾಟದ ದಿಕ್ಕನ್ನು ರೂಪಿಸಿದ ಆಧ್ಯಾತ್ಮಿಕ ಪರಂಪರೆಯ ಭೂಮಿ ಉಡುಪಿ ಎಂದು ಕರೆದರು.
ಉಡುಪಿ ಜಿಲ್ಲೆ ಭಕ್ತಿ ಮತ್ತು ಸೇವೆ ಸಂಗಮದ ಸ್ಥಳ, ಇಲ್ಲಿಗೆ ಬಂದು ಶ್ರೀಕೃಷ್ಣನ ದರ್ಶನವನ್ನು ಪಡೆಯುವುಯದು, ಅಪರಿಮಿತ ಅನುಗ್ರಹವನ್ನು ಪಡೆದಂತೆ ಭಾಸವಾಗುತ್ತದೆ, ಈ ಪೂಣ್ಯಭೂಮಿ ಮತ್ತು ಗುಜರಾತ್​ಗೆ ಸುದೀರ್ಘ ಸಾಂಸ್ಕೃತಿಕ ಸಂಬಂಧವಿದ್ದು, ಇಲ್ಲಿ ಸ್ಥಾಪಿಸಲಾಗಿರುವ ಕೃಷ್ಣನ ವಿಗ್ರಹವನ್ನು ಒಮ್ಮೆ ದ್ವಾರಕೆಯಲ್ಲಿ ರುಕ್ಮಿಣಿ ಪೂಜಿಸಿದ್ದಳು ಎಂಬ ನಂಬಿಕೆ ಇದೆ ಎಂದರು.
ಭಗವದ್ಗೀತೆಯ ಸಾಮೂಹಿಕ ಪಠಣವಾದ ಲಕ್ಷ ಗೀತಾ ಪಠಣದಲ್ಲಿ ಲಕ್ಷಕ್ಕೂ ಹೆಚ್ಚು ಭಕ್ತರೊಂದಿಗೆ ಪ್ರಧಾನಿ ಮೋದಿ ಕೂಡ ಜೊತೆಯಾದರು. ಇದು ಭಾರತದ ನಾಗರಿಕತೆಯ ಶಕ್ತಿಯನ್ನು ಪ್ರದರ್ಶಿಸುವ ಕ್ಷಣ ಎಂದು ಕರೆದ ಪ್ರಧಾನಿ ಒಂದು ಲಕ್ಷ ಜನರು ಒಟ್ಟಾಗಿ ಗೀತೆಯನ್ನು ಪಠಿಸಿದಾಗ, ಅದು ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ಏಕತೆಯ ಶಕ್ತಿಯಾಗುತ್ತದೆ. ನಮ್ಮ ಸಾಮೂಹಿಕ ಪ್ರಜ್ಞೆಯನ್ನು ಬಲಪಡಿಸುತ್ತದೆ ಎಂದು ಹೇಳಿದರು. ಉಡುಪಿ ಭಾರತೀಯ ಜನತಾ ಪಕ್ಷದ ಕರ್ಮಭೂಮಿಯಾಗಿದ್ದು, ಈ ಭಾಗದಲ್ಲಿನ ಪಕ್ಷದ ಬೆಳವಣಿಗೆಗೆ ಹಿರಿಯ ನಾಯಕರಾದ ದಿವಂಗತ ವಿ ಎಸ್​ ಆಚಾರ್ಯರ ಕೊಡುಗೆ ಸಾಕಷ್ಟಿದೆ ಎಂದರು.
ನಮ್ಮ ಸುದರ್ಶನ ಚಕ್ರ ವೈರಿಗಳಿಗೆ ತಕ್ಕ ಪಾಠ ಕಲಿಸಿದೆ, ಈ ಹಿಂದಿನ ಸರ್ಕಾರ, ದೇಶದ ಮೇಲೆ ದಾಳಿಯಾದರು ಕೈ ಕಟ್ಟಿ ಕುಳಿತಿತ್ತು. ನಮ್ಮ ಈ ನವಭಾರತ ಆಪರೇಷನ್​ ಸಿಂಧೂರ ಕಾರ್ಯಾಚರಣೆ ಮೂಲಕ ಉಗ್ರರನ್ನು ಪೋಷಿಸುವವರನ್ನು ಸಹ ಬಿಟ್ಟಿಲ್ಲ, ಭಗವದ್ಗೀತೆ ಸಾರದಿಂದ ಪ್ರೇರಣೆಗೊಂಡ ನಮ್ಮ ಸರ್ಕಾರ ಪಿಎಂ ಆವಾಸ್​ ಯೋಜನೆಯನ್ನು ಆರಂಭಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಮಂಟಪದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ, ಶ್ರೀ ಕೃಷ್ಣ ದೇವಾಲಯದ ಪ್ರಾಗಂಣಕ್ಕೆ ತೆರಳಿದರು, ಅಲ್ಲಿ ಮಠದ ದಿವಾನರು ಮತ್ತು ದೇವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸುಗುಣೇಂದ್ರ ತೀರ್ಥರು ಸಾಂಪ್ರದಾಯಿಕ ಗೌರವಗಳೊಂದಿಗೆ ಪ್ರಧಾನಿಗಳನ್ನು ಬರಮಾಡಿಕೊಂಡರು. ಪ್ರಧಾನಿ ಮೋದಿ ಕೃಷ್ಣ ಮಠವನ್ನು ಪ್ರವೇಶಿಸುತ್ತಿದ್ದಂತೆ ಪೂರ್ಣಕುಂಭದೊಂದಿಗೆ ಸ್ವಾಗತ ನೀಡಲಾಯಿತು. ದಕ್ಷಿಣ ಭಾರತದಲ್ಲಿ ಮಧ್ವರು ಮತ್ತು ಹೆಚ್ಚಿನ ಬ್ರಾಹ್ಮಣ ಸಮುದಾಯಗಳು ತಮ್ಮ ದೈನಂದಿನ ಪೂಜಾ ವಿಧಿವಿಧಾನಗಳಿಗೆ ಬಳಸುವ ಶಂಖ, ಚಕ್ರ, ಗದೆ ಮತ್ತು ಪದ್ಮಗಳನ್ನು ಒಳಗೊಂಡಿರುವ ಬೆಳ್ಳಿ ಹೊದಿಕೆಯ ತುಳಸಿ ಜಪ ಮಾಲೆ ಮತ್ತು ಮುದ್ರೆಗಳನ್ನು ಪ್ರಧಾನಿಗಳಿಗೆ ನೀಡಲಾಯಿತು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net