ಸುನ್ನಿ ಮಶಾಯಿಖ್ ಕೌನ್ಸಿಲ್ ಅಧ್ಯಕ್ಷರಿಗೆ ಸಲೀಂ ಅಹ್ಮದ್ ಅಭಿನಂದನೆ
ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರನ್ನು ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಅಭಿನಂದಿಸಿದರು.
Published on:
Copied
Follow Us
ಬೆಂಗಳೂರು : ಕರ್ನಾಟಕ ಸುನ್ನಿ ಮಶಾಯಿಖ್ ಕೌನ್ಸಿಲ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರನ್ನು ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಅಭಿನಂದಿಸಿದರು.
ಕಲಬುರಗಿ ಹಜ್ರತ್ ಖ್ವಾಜಾ ಬಂದನವಾಜ್ ದರ್ಗಾ ಪೀಠಾಧಿಪತಿ ಮತ್ತು ರಾಜ್ಯ ವಕ್ಫೃ್ ಬೋರ್ಡ್ ಅಧ್ಯಕ್ಷರೂ ಆಗಿರುವ ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರ ಆಯ್ಕೆ ಪ್ರಕ್ರಿಯೆ ನಡೆಯಿತು.
ಕರ್ನಾಟಕ ಸುನ್ನಿ ಮಶಾಯಿಖ್ ಕೌನ್ಸಿಲ್ವತಿಯಿಂದ ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಆಗಮಿಸಿದ 500ಕ್ಕೂ ಹೆಚ್ಚು ಧರ್ಮಗುರುಗಳ ಸಮ್ಮುಖದಲ್ಲಿ ಕಲಬುಗಿಯ ಹಜ್ರತ್ ಖ್ವಾಜಾ ಬಂದನವಾಜ್ ದರ್ಗಾ ಪೀಠಾಧಿಪತಿ ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಈ ವೇಳೆ ವಿವಿಧ ಧರ್ಮಗಳ ಗುರುಗಳು, ಶಾಸಕ ರಾಘವೇಂದ್ರ ಹಿಟ್ನಾಳ್, ಬಸವರಾಜ ಹಿಟ್ನಾಳ್, ಮುಖಂಡ ಎಸ್. ಡಿ. ಮಕಂದರ್, ಶಾಝ್ಮನ್ ಮುಝಾಹಿದ್, ಮತ್ತಿತರರು ಉಪಸ್ಥಿತರಿದ್ದರು.